ಲಂಡನ್: ಕ್ರಿಕೆಟ್ ಬ್ಯಾಟ್ಗಳನ್ನು ವಿಲ್ಲೋ ಮರದ ಬದಲಾಗಿ ಬಿದಿರಿನಿಂದ ತಯಾರಿಸಬಹುದೇ? ಈ ಪ್ರಶ್ನೆಗೆ ಕೆಂಬ್ರಿಡ್ಜ್ ವಿಶ್ವವಿದ್ಯಾಲಯದ ಸಂಶೋಧಕರು ಸಾಧ್ಯ ಎಂದು ತಿಳಿಸಿದೆ.
ಸಾಂಪ್ರದಾಯಿಕವಾಗಿ ಕ್ರಿಕೆಟ್ ಬ್ಯಾಟ್ಗಳನ್ನು ಇಂಗ್ಲಿಷ್ ಅಥವಾ ಕಾಶ್ಮೀರ ವಿಲ್ಲೋ ಮರಳಗಳಿಂದ ತಯಾರಿಸಲಾಗುತ್ತದೆ. ಆದರೆ, ಕೆಂಬ್ರಿಡ್ಜ್ ವಿಶ್ವವಿದ್ಯಾಲಯದ ಸಂಶೋಧಕರಾದ ಡ್ಯಾರ್ಸಿಲ್ ಶಾ ಮತ್ತು ಬೆನ್ ಟಿಂಕ್ಲರ್- ಡೇವಿಸ್ ಅವರ ಅಧ್ಯಯನದ ಪ್ರಕಾರ ಬಿದಿರಿನಿಂದ ಬ್ಯಾಟ್ ತಯಾರು ಮಾಡುವುದು ಅತ್ಯಂತ ಅಗ್ಗದ ಆಯ್ಕೆ ಎಂದು ತಿಳಿಸಿದ್ದಾರೆ.
ಬಿದಿರಿನ ಬ್ಯಾಟ್ನಲ್ಲಿರುವ ಸ್ವೀಟ್ ಸ್ಪಾಟ್ ಆರಂಭದಲ್ಲೇ ಯಾರ್ಕರ್ ಎಸೆತಗಳಿಗೆ ಬೌಂಡರಿ ಬಾರಿಸಲು ಸುಲಭಗೊಳಿಸುತ್ತದೆ, ಆದರೆ, ಇದು ಎಲ್ಲಾ ರೀತಿಯ ಸ್ಟ್ರೋಕ್ಗಳಿಗೆ ರೋಮಾಂಚನಕಾರಿಯಾಗಿದೆ ಎಂದು ದಿ ಟೈಮ್ಸ್ಗೆ ಶಾ ಹೇಳಿದ್ದಾರೆ.
ದಿ ಗಾರ್ಡಿಯನ್ ದಿನಪತ್ರಿಕೆಯ ವರದಿಯ ಪ್ರಕಾರ, ಸಾಂಪ್ರಾದಾಯಿಕವಾಗಿ ಬ್ಯಾಟ್ ತಯಾರಿಸುವ ಇಂಗ್ಲಿಷ್ ವಿಲ್ಲೋ ಮರವನ್ನು ಪೂರೈಸುವುದಕ್ಕೆ ಕೆಲವು ಸಮಸ್ಯೆ ಉಂಟಾಗುತ್ತಿದೆ. ಬ್ಯಾಟ್ ತಯಾರಿಸುವ ಮರ 15 ವರ್ಷಗಳ ಮರವನ್ನು ಕಟಾವು ಮಾಡಬೇಕಾಗುತ್ತದೆ. ಅಲ್ಲದೇ ಬ್ಯಾಟ್ ಉತ್ಪಾದನೆಯ ವೇಳೆ ಶೇಕಡಾ 15ರಿಂದ 30 ರಷ್ಟು ಮರವನ್ನು ಸಹ ವ್ಯರ್ಥವಾಗುತ್ತದೆ ಎಂದು ತಿಳಿದು ಬಂದಿದೆ.