ಸಿಡ್ನಿ(ಆಸ್ಟ್ರೇಲಿಯಾ): ಯಶಸ್ವಿ ನಾಯಕಿ ಮೆಗ್ ಲ್ಯಾನಿಂಗ್ ನಿವೃತ್ತಿಯ ನಂತರ ಅಲಿಸ್ಸಾ ಹೀಲಿ ನೇತೃತ್ವದಲ್ಲಿ ಆಸೀಸ್ ತಂಡ ಭಾರತಕ್ಕೆ ಮೊದಲ ಪ್ರವಾಸ ಕೈಗೊಳ್ಳಲಿದೆ. ಇದಕ್ಕಾಗಿ ತಂಡವನ್ನು ಈಗಾಗಲೇ ಪ್ರಕಟಿಸಿದ್ದು, ನಾಯಕತ್ವವನ್ನು ಯಾರು ವಹಿಸಲಿದ್ದಾರೆ ಎಂಬುದು ಇನ್ನೂ ಸ್ಪಷ್ಟವಾಗಿಲ್ಲ. ಆದರೆ ಸ್ಟಾರ್ ಆಟಗಾರ್ತಿ ಅಲಿಸ್ಸಾ ಹೀಲಿ ಚೇತರಿಸಿಕೊಂಡಿದ್ದು, ನಾಯಕತ್ವದ ಸ್ಥಾನಕ್ಕೆ ಅವರೇ ಭರವಸೆ ಆದಂತಿದೆ.
ಸದ್ಯ ಭಾರತ ತಂಡ ಆಂಗ್ಲರ ಜೊತೆಗೆ ಟಿ20 ಮತ್ತು ಟೆಸ್ಟ್ ಸರಣಿ ಆಡುತ್ತಿದೆ. ಡಿಸೆಂಬರ್ 17ಕ್ಕೆ ಪಂದ್ಯಾವಳಿ ಮುಕ್ತಾಯವಾದರೆ, ಡಿಸೆಂಬರ್ 21ರಿಂದ ಆಸ್ಟ್ರೇಲಿಯಾದ ವಿರುದ್ಧ ಪಂದ್ಯಗಳು ಆರಂಭವಾಗುತ್ತವೆ. ಭಾರತ ಪ್ರವಾಸದಲ್ಲಿ ಆಸ್ಟ್ರೇಲಿಯ ಏಕಮಾತ್ರ ಟೆಸ್ಟ್, 3 ಏಕದಿನ ಮತ್ತು 3 ಟಿ20 ಪಂದ್ಯಗಳನ್ನು ಆಡಲಿದೆ. ಈ ಸರಣಿಯಲ್ಲಿ ಗಾಯದಿಂದ ಚೇತರಿಸಿಕೊಂಡ ಅಲಿಸ್ಸಾ ಹೀಲಿ ತಂಡಕ್ಕೆ ಮರಳಲಿದ್ದಾರೆ.
ಅಲಿಸ್ಸಾ ಕೊನೆಯ ಸ್ಪರ್ಧಾತ್ಮಕ ಕ್ರಿಕೆಟ್ ಆಡಿದ್ದು ಈ ವರ್ಷದ ಅಕ್ಟೋಬರ್‌ನಲ್ಲಿ. ಮಹಿಳಾ ಬಿಗ್ ಬ್ಯಾಷ್ ಲೀಗ್ (ಡಬ್ಲ್ಯುಬಿಬಿಎಲ್) ವೇಳೆ ಶ್ವಾನ ಕಡಿತದಿಂದಾಗಿ ತೋರು ಬೆರಳಿನ ಗಾಯಕ್ಕೆ ತುತ್ತಾಗಿದ್ದರು. ನಂತರ ಅವರು ಶಸ್ತ್ರಚಿಕಿತ್ಸೆಗೆ ಒಳಗಾಗಿದ್ದರು. ಭಾರತ ಪ್ರವಾಸದ ವೇಳೆಗೆ ಚೇತರಿಸಿಕೊಳ್ಳುತ್ತಾರೆ ಎಂಬ ನಿರೀಕ್ಷೆ ಇತ್ತು. ಆದರೆ ಈಗ ಮಾಧ್ಯಮ ಜೊತೆ ಮಾತನಾಡಿದ ಅಲಿಸ್ಸಾ ಭಾರತದ ವಿರುದ್ಧದ ಏಕೈಕ ಟೆಸ್ಟ್ಆಡುವುದಾಗಿ ಹೇಳಿದ್ದಾರೆ.
ಆಡಲು ಸಿದ್ಧ:"ನಾನು ಭಾರತ್ಕಕೆ ಹೋಗುತ್ತೇನೆ. ಉತ್ತಮವಾಗಿ ಚೇತರಿಸಿಕೊಂಡಿರುವುದರಿಂದ ಕಳೆದ ಒಂದು ವಾರದಿಂದ ನೆಟ್ಸ್‌ನಲ್ಲಿ ಅಭ್ಯಾಸಕ್ಕೆ ಮರಳಿದ್ದೇನೆ. ಭಾರತದ ವಿರುದ್ಧದ ದೊಡ್ಡ ಸರಣಿಗಾಗಿ ಬುಧವಾರ ತಂಡದ ಜೊತೆ ತೆರಳಲಿದ್ದೇನೆ" ಎಂದು ಅಲಿಸ್ಸಾ ಹೇಳಿದ್ದಾರೆ.