ಕರ್ನಾಟಕ

karnataka

ETV Bharat / sports

T20I world cup: ನ್ಯೂಜಿಲ್ಯಾಂಡ್ ಮಣಿಸಿ ಚೊಚ್ಚಲ ಟಿ20 ವಿಶ್ವಕಪ್​ ಮುಡಿಗೇರಿಸಿಕೊಂಡ ಆಸ್ಟ್ರೇಲಿಯಾ​ - ​ ಆಸ್ಟ್ರೇಲಿಯಾ vs ನ್ಯೂಜಿಲೆಂಡ್ ಫೈನಲ್​

ದುಬೈ ಅಂತಾರಾಷ್ಟ್ರೀಯ ಸ್ಟೇಡಿಯಂನಲ್ಲಿ ನಡೆದ ಫೈನಲ್ ಪಂದ್ಯದಲ್ಲಿ ಕಿವೀಸ್​ ನೀಡಿದ್ದ 173 ರನ್​ಗಳ ಗುರಿಯನ್ನು ಕಾಂಗರೂ ಪಡೆ 19 ಓವರ್​ಗಳಲ್ಲಿ ಕೇವಲ 2 ವಿಕೆಟ್ ಕಳೆದುಕೊಂಡು ತಲುಪುವ ಮೂಲಕ 8 ವಿಕೆಟ್​ಗಳ ಸುಲಭ ಜಯ ಸಾಧಿಸಿತು.

Australia beat New zealand by 8 wickets and won the T20I  world cup
ನ್ಯೂಜಿಲ್ಯಾಂಡ್ ಮಣಿಸಿ ಚೊಚ್ಚಲ ಟಿ20 ವಿಶ್ವಕಪ್​ ಮುಡಿಗೇರಿಸಿಕೊಂಡ ಆಸ್ಟ್ರೇಲಿಯಾ

By

Published : Nov 14, 2021, 11:02 PM IST

Updated : Nov 14, 2021, 11:22 PM IST

ದುಬೈ: ಡೇವಿಡ್​ ವಾರ್ನರ್(David Warner)​ ಮತ್ತು ಮಿಚೆಲ್ ಮಾರ್ಷ್(Mitchell Marsh)​ ಅವರ ಸ್ಫೋಟಕ ಅರ್ಧಶತಕದ ನೆರವಿನಿಂದ ಆಸ್ಟ್ರೇಲಿಯಾ(Australia) ತಂಡ ನ್ಯೂಜಿಲ್ಯಾಂಡ್(New Zealand) ವಿರುದ್ಧ 8 ವಿಕೆಟ್​ಗಳ ಸುಲಭ ಜಯ ಸಾಧಿಸಿ ಚೊಚ್ಚಲ ಟಿ20 ವಿಶ್ವಕಪ್(T20I world cup)​ ಎತ್ತಿ ಹಿಡಿದಿದೆ.

ದುಬೈ ಅಂತಾರಾಷ್ಟ್ರೀಯ ಸ್ಟೇಡಿಯಂನಲ್ಲಿ( Dubai International Cricket Stadium) ನಡೆದ ಫೈನಲ್ ಪಂದ್ಯದಲ್ಲಿ ಕಿವೀಸ್​ ನೀಡಿದ್ದ 173 ರನ್​ಗಳ ಗುರಿಯನ್ನು ಕಾಂಗರೂ ಪಡೆ 18.5 ಓವರ್​ಗಳಲ್ಲಿ ಕೇವಲ 2 ವಿಕೆಟ್ ಕಳೆದುಕೊಂಡು ತಲುಪುವ ಮೂಲಕ 8 ವಿಕೆಟ್​ಗಳ ಸುಲಭ ಜಯ ಸಾಧಿಸಿತು. 2010ರಲ್ಲಿ ಫೈನಲ್ ತಲುಪಿದ್ದ ಆಸ್ಟ್ರೇಲಿಯಾ(Australia) ಫೈನಲ್​ನಲ್ಲಿ ಇಂಗ್ಲೆಂಡ್​ ವಿರುದ್ಧ ಸೋಲು ಕಂಡು ನಿರಾಸೆಯನುಭವಿಸಿತ್ತು. ಆದರೆ ಈ ಬಾರಿ ಟೂರ್ನಿಯಲ್ಲಿ ಅಮೋಘ ಪ್ರದರ್ಶನ ತೋರಿ ಟಿ20 ಟ್ರೋಪಿಯನ್ನು ತನ್ನದಾಗಿಸಿಕೊಂಡಿತು.

ಟೂರ್ನಿಯಲ್ಲಿ ಅಮೋಘ ಪ್ರದರ್ಶನ ತೋರಿದ್ದ ಡೇವಿಡ್​ ವಾರ್ನರ್ ಫೈನಲ್​ ಪಂದ್ಯದಲ್ಲೂ ಅರ್ಧಶತಕ ಸಿಡಿಸಿ ಮಿಂಚಿದರು. 3ನೇ ಓವರ್​ನಲ್ಲೇ ತಮ್ಮ ಜೊತೆಗಾರ ಆ್ಯರೋನ್​ ಫಿಂಚ್​ ವಿಕೆಟ್ ಕಳೆದುಕೊಂಡರೂ ಧೃತಿಗೆಡದ ವಾರ್ನರ್​ ಮಿಚೆಲ್​ ಮಾರ್ಷ್​ ಜೊತೆಗೆ 2ನೇ ವಿಕೆಟ್​ಗೆ 92 ರನ್​ಗಳನ್ನು ಸೇರಿಸಿ ತಂಡವನ್ನು ಸುಸ್ಥಿತಿಗೆ ತಂದು ಬೌಲ್ಟ್​ಗೆ ವಿಕೆಟ್​ ಒಪ್ಪಿಸಿದರು. ಎಡಗೈ ಬ್ಯಾಟರ್​ 38 ಎಸೆತಗಳಲ್ಲಿ 3 ಸಿಕ್ಸರ್​ ಮತ್ತು 4 ಬೌಂಡರಿ ಸಹಿತ 53 ರನ್​ಗಳಿಸಿದರು.

ವಾರ್ನರ್ ಪತನದ ಬೆನ್ನಲ್ಲೇ ಮಿಚ್​ ಮಾರ್ಷ್ ಜೊತೆ ಸೇರಿಕೊಂಡ ಮ್ಯಾಕ್ಸ್​ವೆಲ್ 3ನೇ ವಿಕೆಟ್​ ಮುರಿಯದ 73 ರನ್​ಗಳ ಜೊತೆಯಾಟ ನೀಡಿ ತಂಡವನ್ನು ಗೆಲುವಿನ ಗಡಿ ದಾಟಿಸಿದರು. ಮಾರ್ಷ್​​ 50 ಎಸೆತಗಳಲ್ಲಿ 6 ಬೌಂಡರಿ ಮತ್ತು 4 ಸಿಕ್ಸರ್​ಗಳ ನೆರವಿನಿಂದ ಅಜೇಯ 77 ಮತ್ತು ಗ್ಲೇನ್​ ಮ್ಯಾಕ್ಸ್​ವೆಲ್​ 18 ಎಸೆತಗಳಲ್ಲಿ 4 ಬೌಂಡರಿ ಮತ್ತು ಒಂದು ಭರ್ಜರಿ ಸಿಕ್ಸರ್​ ನೆರವಿನಿಂದ ಅಜೇಯ 28 ರನ್​ಗಳಿಸಿ ಆಸ್ಟ್ರೇಲಿಯಾಕ್ಕೆ ಚೊಚ್ಚಲ ಟಿ20 ವಿಶ್ವಕಪ್​ ಗೆಲ್ಲಿಸಿಕೊಟ್ಟರು.

ಟೂರ್ನಿಯುದ್ದಕ್ಕೂ ಅತ್ಯುತ್ತಮ ಬೌಲಿಂಗ್ ಪ್ರದರ್ಶನ ತೋರಿದ ಕಿವೀಸ್​ ಪಡೆ ಪೈನಲ್​ ಪಂದ್ಯದಲ್ಲಿ ಆಸೀಸ್​ ಅಬ್ಬರಕ್ಕೆ ಶರಣಾದರು. ಟ್ರೆಂಟ್ ಬೌಲ್ಟ್​ ಮಾತ್ರ 4 ಓವರ್​ಗಳಲ್ಲಿ ಕೇವಲ 18 ರನ್​ ನೀಡಿ 2 ವಿಕೆಟ್​ ಪಡೆದರು.

ಕೇನ್ ವಿಲಿಯಮ್ಸನ್​ ಆಟ ವ್ಯರ್ಥ

ಇದಕ್ಕು ಮುನ್ನ ಟಾಸ್​ ಸೋತು ಬ್ಯಾಟಿಂಗ್ ಮಾಡಿದ್ದ ನ್ಯೂಜಿಲ್ಯಾಂಡ್​ 20 ಓವರ್​ಗಳಲ್ಲಿ 4 ವಿಕೆಟ್​ ಕಳೆದುಕೊಂಡು 172 ರನ್​ಗಳಿಸಿತ್ತು. ನಾಯಕ ಕೇನ್​ ವಿಲಿಯಮ್ಸನ್​ 48 ಎಸೆತಗಳಲ್ಲಿ 10 ಬೌಂಡರಿ ಮತ್ತು 3 ಸಿಕ್ಸರ್​ಗಳ ಸಹಿತ 85 ರನ್​ಗಳಿಸಿ ಏಕಾಂಗಿ ಹೋರಾಟ ನಡೆಸಿದ್ದರು. ಇದು ಟಿ20 ವಿಶ್ವಕಪ್ ಇತಿಹಾಸದಲ್ಲೇ ನಾಯಕನೊಬ್ಬನ ಗರಿಷ್ಠ ಸ್ಕೋರ್ ಆಗಿತ್ತು.

ಇವರನ್ನು ಬಿಟ್ಟರೆ ಯಾವುದೇ ಬ್ಯಾಟರ್​ ಕಿವೀಸ್​ಗೆ ನೆರವಾಗಲಿಲ್ಲ. ಅದರಲ್ಲೂ ಆರಂಭಿಕ ಬ್ಯಾಟರ್​ ಮಾರ್ಟಿನ್ ಗಪ್ಟಿಲ್ 35 ಎಸೆತಗಳನ್ನೆದುರಿಸಿ ಕೇವಲ 28 ರನ್​ಗಳಿಸಿದ್ದು ಕಿವೀಸ್​ ಪಡೆಗೆ ನುಂಗಲಾರದ ತುತ್ತಾಯಿತು. ಉಳಿದಂತೆ ಫಿಲಿಫ್ಸ್​​ 18, ನೀಶಮ್ 13 ರನ್​ಗಳಿಸಿ ಮತ್ತು ಸೆಮಿಫೈನಲ್ ಹೀರೋ ಡೇರಿಲ್ ಮಿಚೆಲ್ 11 ರನ್​ಗಳಿಸಿದ್ದರು.

ಆಸ್ಟ್ರೇಲಿಯಾ ಪರ ಪ್ರಚಂಡ ಬೌಲಿಂಗ್ ದಾಳಿ ನಡೆಸಿದ ಜೋಶ್ ಹೆಜಲ್​ವುಡ್(Josh Hazlewood)​ 4 ಓವರ್​ಗಳಲ್ಲಿ ಕೇವಲ 16 ರನ್​ ನೀಡಿ 3 ವಿಕೆಟ್​ ಪಡೆದು ಕಿವೀಸ್​ ಆಘಾತ ನೀಡಿದರು. ಆ್ಯಡಂ ಜಂಪಾ 26ಕ್ಕೆ1 ವಿಕೆಟ್​ ಪಡೆದರು. ಆದರೆ ಸ್ಟಾರ್​ ಬೌಲರ್​ ಮಿಚೆಲ್ ಸ್ಟಾರ್ಕ್ ಮಾತ್ರ 4 ಓವರ್​ಗಳಲ್ಲಿ​ 60 ರನ್​ ನೀಡಿ ದುಬಾರಿಯಾದರು.

Last Updated : Nov 14, 2021, 11:22 PM IST

ABOUT THE AUTHOR

...view details