ಕೊಲಂಬೊ: ಪಾಕಿಸ್ತಾನದಿಂದ ಶ್ರೀಲಂಕಾಕ್ಕೆ ಸ್ಥಳಾಂತರಗೊಂಡಿದ್ದ 2021ರ ಏಷ್ಯಾಕಪ್ ಕೋವಿಡ್ 19 ಪ್ರಕರಣಗಳ ಏರಿಕೆಯಿಂದ ಮುಂಜಾಗ್ರತ ಕ್ರಮವಾಗಿ ರದ್ದುಗೊಳಿಸಿದ್ದೇವೆ ಎಂದು ಶ್ರೀಲಂಕಾ ಕ್ರಿಕೆಟ್ ಮಂಡಳಿ ಬುಧವಾರ ತಿಳಿಸಿದೆ.
2018ರಲ್ಲಿ ಕೊನೆಯ ಬಾರಿ ಏಷ್ಯಾಕಪ್ ನಡೆದಿತ್ತು. ನಂತರ 2020ರ ಆವೃತ್ತಿಯನ್ನು ಶ್ರೀಲಂಕಾಗೆ ಸ್ಥಳಾಂತರಿಸಲಾಗಿತ್ತು. ಆದರೆ ಕಳೆದ ವರ್ಷ ವಿಶ್ವದಾದ್ಯಂತ ಕೋವಿಡ್ 19 ಸಾಂಕ್ರಾಮಿಕವಿದ್ದ ಕಾರಣ 2021 ಜೂನ್ಗೆ ಮುಂದೂಡಲಾಗಿತ್ತು. ಆದರೆ ಆತಿಥ್ಯ ವಹಿಸಿಕೊಳ್ಳಬೇಕಿದ್ದ ಶ್ರೀಲಂಕಾದಲ್ಲೇ ಕಳೆದ ಒಂದು ವಾರದಿಂದ ಕೊರೊನಾ ಏರಿಕೆಯಾಗುತ್ತಿದೆ. ಇಂತಹ ಸಂದರ್ಭದಲ್ಲಿ ಟೂರ್ನಿ ಆಯೋಜನೆ ಕಷ್ಟ ಎಂದು ಶ್ರೀಲಂಕಾ ಕ್ರಿಕೆಟ್ ಮಂಡಳಿ ಸಿಇಒ ಆಶ್ಲೇ ಡಿ ಸಿಲ್ವಾ ತಿಳಿಸಿದ್ದಾರೆ.