ಕರ್ನಾಟಕ

karnataka

ETV Bharat / sports

ಏಷ್ಯಾ ಕಪ್​: ಭಾರತ ವಿರುದ್ಧ ಟಾಸ್​ ಗೆದ್ದ ಪಾಕಿಸ್ತಾನ, ಬೌಲಿಂಗ್​ ಆಯ್ಕೆ

ಏಷ್ಯಾ ಕಪ್​ ಟೂರ್ನಿಯಲ್ಲಿ ಕಳೆದ ಭಾನುವಾರ ನಡೆದಿದ್ದ ನಾಕೌಟ್​ ಪಂದ್ಯದಲ್ಲಿ ಪಾಕಿಸ್ತಾನವನ್ನು ಟೀಂ ಇಂಡಿಯಾ ಸೋಲಿಸಿತ್ತು. ಇಂದು ಸೂಪರ್​ 4 ಹಂತದಲ್ಲಿ ಉಭಯ ತಂಡಗಳು ಸೆಣಸಾಡಲಿವೆ.

asia-cup-2022-pakistan-wins-the-toss-elects-to-bowl-first
ಏಷ್ಯಾ ಕಪ್​: ಭಾರತ ವಿರುದ್ಧ ಟಾಸ್​ ಗೆದ್ದ ಪಾಕಿಸ್ತಾನ, ಬೌಲಿಂಗ್​ ಆಯ್ಕೆ

By

Published : Sep 4, 2022, 7:13 PM IST

Updated : Sep 4, 2022, 7:29 PM IST

ದುಬೈ:ಏಷ್ಯಾ ಕಪ್​ ಟೂರ್ನಿಯ ಸೂಪರ್​ 4 ಹಂತದ ಪಂದ್ಯದಲ್ಲಿ ಭಾರತದ ಪಾಕಿಸ್ತಾನ ಮುಖಾಮುಖಿಯಾಗಿದ್ದು, ಟಾಸ್​ ಗೆದ್ದಿರುವ ಪಾಕ್ ತಂಡ ಮೊದಲು ಬೌಲಿಂಗ್​ ಆಯ್ಕೆ ಮಾಡಿಕೊಂಡಿದೆ.

ಮೊಣಕಾಲಿನ ಗಾಯದಿಂದ ಆಲ್​ರೌಂಡರ್​ ರವೀಂದ್ರ ಜಡೇಜಾ ಟೂರ್ನಿಯಿಂದ ಹೊರ ಬಿದ್ದಿದ್ದು, ಜಡೇಜಾ ಸ್ಥಾನಕ್ಕೆ ಅಕ್ಷರ್ ಪಟೇಲ್ ತಂಡಕ್ಕೆ ಸೇರಿದ್ದಾರೆ. ಆದರೆ, ಇಂದಿನ ಪಂದ್ಯದಲ್ಲಿ ಅಕ್ಷರ್ ಪಟೇಲ್ ಅವಕಾಶ ಸಿಕ್ಕಿಲ್ಲ. ಇಂದಿನ ಪಂದ್ಯದಲ್ಲಿ ಟೀಂ ಇಂಡಿಯಾದಲ್ಲಿ ಮೂರು ಬದಲಾವಣೆಗಳಾಗಿದ್ದು, ದೀಪಕ್ ಹೂಡಾ, ರವಿ ಬಿಷ್ಣೋಯ್ ಹಾಗೂ ರಿಷಭ್ ಪಂತ್ ಅವರಿಗೆ ತಂಡದಲ್ಲಿ ಅವಕಾಶ ಸಿಕ್ಕಿದೆ.

ಇತ್ತ, ಪಾಕಿಸ್ತಾನ ತಂಡದಲ್ಲಿ ಒಂದು ಬದಲಾವಣೆಯಾಗಿದೆ. ಶಹನವಾಜ್ ದಹಾನಿ ಬದಲಿಗೆ ಮೊಹಮ್ಮದ್ ಹಸ್ನೈನ್ ತಂಡದಲ್ಲಿ ಅವಕಾಶ ಪಡೆದಿದ್ದಾರೆ. ಉಭಯ ತಂಡಗಳ ವಿವರ ಹೀಗಿದೆ...

ಭಾರತ ತಂಡ: ರೋಹಿತ್ ಶರ್ಮಾ (ನಾಯಕ), ಕೆಎಲ್ ರಾಹುಲ್, ವಿರಾಟ್ ಕೊಹ್ಲಿ, ಸೂರ್ಯಕುಮಾರ್ ಯಾದವ್, ರಿಷಭ್ ಪಂತ್, ದೀಪಕ್ ಹೂಡಾ, ಹಾರ್ದಿಕ್ ಪಾಂಡ್ಯ, ಯಜುವೇಂದ್ರ ಚಹಲ್​, ರವಿ ಬಿಷ್ಣೋಯ್, ಭುವನೇಶ್ವರ್ ಕುಮಾರ್, ಅರ್ಷದೀಪ್​ ಸಿಂಗ್

ಪಾಕಿಸ್ತಾನ ತಂಡ: ಬಾಬರ್ ಆಜಮ್ (ನಾಯಕ), ಮೊಹಮ್ಮದ್ ರಿಜ್ವಾನ್, ಫಖರ್ ಜಮಾನ್, ಇಫ್ತಿಕರ್ ಅಹ್ಮದ್, ಮೊಹಮ್ಮದ್ ನವಾಜ್, ಹಾರಿಸ್ ರೌಫ್, ಖುಷ್ದಿಲ್ ಶಾ, ಶಾದಾಬ್ ಖಾನ್, ಆಸಿಫ್ ಅಲಿ, ಮೊಹಮ್ಮದ್ ಹಸ್ನೈನ್, ನಸೀಮ್ ಶಾ

ಇದನ್ನೂ ಓದಿ:ಭಾರತ- ಪಾಕಿಸ್ತಾನ ಮಧ್ಯೆ ಇಂದು ಮತ್ತೊಂದು ಸೂಪರ್ ಸಂಡೇ ಮ್ಯಾಚ್​

Last Updated : Sep 4, 2022, 7:29 PM IST

ABOUT THE AUTHOR

...view details