ದುಬೈ:ಶ್ರೀಲಂಕಾ ಮತ್ತು ಪಾಕಿಸ್ತಾನ ನಡುವಣ ಏಷ್ಯಾ ಕಪ್ ಫೈನಲ್ನಲ್ಲಿ ಪಾಕ್ ಆಟಗಾರರಿಬ್ಬರಿಂದ ರಾಜಪಕ್ಸೆ ಕ್ಯಾಚ್ ಕೈತಪ್ಪಿ ಸಿಕ್ಸರ್ ಆಗುತ್ತದೆ. ಇದು ಸಾಮಾಜಿಕ ಜಾಲತಾಣದಲ್ಲಿ ಹೆಚ್ಚು ಚರ್ಚೆಗೀಡಾಗಿದೆ. ಶ್ರೀಲಂಕಾ 10 ಓವರ್ಗೆ 58ಕ್ಕೆ 5 ವಿಕೆಟ್ ಕಳೆದುಕೊಂಡು ಸಂಕಷ್ಟದಲ್ಲಿದ್ದಾಗ ಕ್ರೀಸಿಗೆ ಬಂದ ರಾಜಪಕ್ಸೆ ಸ್ಫೋಟಕ ಆಟದ ಮೂಲಕ 71 ರನ್ ಕೊಡುಗೆ ನೀಡಿದ್ದು, ಪಾಕಿಸ್ತಾನಕ್ಕೆ ಉತ್ತಮ ಟಾರ್ಗೆಟ್ ನೀಡಲು ಸಹಕಾರಿಯಾಗಿತ್ತು.
ಇದಕ್ಕೂ ಮುನ್ನ, ಮೊಹಮ್ಮದ್ ಹಸ್ನೇನ್ 19ನೇ ಓವರ್ನ ಕೊನೆಯ ಎಸೆತವನ್ನು ರಾಜಪಕ್ಸೆ ಡೀಪ್ ಮಿಡ್ ವಿಕೆಟ್ ಜಾಗದಲ್ಲಿ ದೊಡ್ಡ ಹೊಡೆತಕ್ಕೆ ಕೈ ಹಾಕಿದ್ದರು. ಆಗಸದತ್ತ ಚಿಮ್ಮಿದ ಚೆಂಡನ್ನು ಹಿಡಿಯುವ ಭರದಲ್ಲಿ ಆಸಿಫ್ ಮತ್ತು ಶಾದಾಬ್ ಖಾನ್ ಮೈದಾನದ ಪರಸ್ಪರ ವಿರುದ್ಧ ದಿಕ್ಕಿನಿಂದ ಓಡಿಬಂದರು. ಆಸಿಫ್ ಕ್ಯಾಚ್ ಮಾಡುವಷ್ಟರಲ್ಲಿ ಶಾದಾಬ್ ಖಾನ್ ಬಂದು ಡಿಕ್ಕಿ ಹೊಡೆದರು. ಪರಿಣಾಮ, ಚೆಂಡು ಸಿಕ್ಸರ್ ಗೆರೆ ದಾಟಿತು.
18.5 ಓವರ್ಗೆ ಲಂಕಾದ ರನ್ ಮೊತ್ತ 149 ಆಗಿತ್ತು. ರಾಜಪಕ್ಸೆ 39 ಎಸೆತಗಳಲ್ಲಿ 51ರನ್ ಸಂಪಾದಿಸಿದ್ದರು. ನಸೀಮ್ ಶಾ ಕೊನೆಯ ಓವರ್ನಲ್ಲಿ 20 ರನ್ ಬಿಟ್ಟುಕೊಟ್ಟಿದ್ದರು. ಇದರಿಂದ ಪಾಕ್ಗೆ 170 ರನ್‌ಗಳ ಗುರಿಯನ್ನು ಶ್ರೀಲಂಕಾ ಶಕ್ತವಾಯಿತು. ಇನಿಂಗ್ಸ್‌ನ ಅಂತಿಮ ಓವರ್ನಲ್ಲಿ 20 ರನ್ ಕಡಿಮೆಯಾಗಿದ್ದರೆ ಪಾಕ್ಗೆ ಗುರಿ ಬೆನ್ನತ್ತುವಾಗ ಒತ್ತಡ ಕಡಿಮೆಯಾಗುತ್ತಿತ್ತು.
ಎರಡು ಕ್ಯಾಚ್ ಕೈಚೆಲ್ಲಿದ ಶದಾಬ್ ಖಾನ್:ಹ್ಯಾರಿಸ್ ರೌಫ್17.4ನೇ ಓವರ್ನಲ್ಲಿ ರಾಜಪಕ್ಸ ಲಾಂಗ್ ಆನ್ ಮೇಲೆ ಚೆಂಡು ಕಳುಹಿಸಿದ್ದರು. ಈ ಸಂದರ್ಭದಲ್ಲಿ ಶಾದಾಬ್ ಖಾನ್ ಕ್ಯಾಚ್ ಕೈಚೆಲ್ಲಿದರು. ಈ ಕ್ಯಾಚ್ ಸ್ವಲ್ಪ ಕಠಿಣವೇ ಇತ್ತಾದರೂ ಕೈಗೆ ತಾಗಿ ಬಿದ್ದಿದೆ. ಇದರಿಂದ ತಂಡಕ್ಕೆ 3 ರನ್ ಲಭ್ಯವಾಗಿತ್ತು.