ಕರ್ನಾಟಕ

karnataka

ETV Bharat / sports

ಬೌಲರ್​ ನಾಯಕನಾಗಲಾರ ಎಂದು ಎಲ್ಲೂ ಹೇಳಿಲ್ಲ, ಕೊಹ್ಲಿ ಜಾಗಕ್ಕೆ ಈತನೇ ಸೂಕ್ತ: ನೆಹ್ರಾ

ವಿರಾಟ್​ ಕೊಹ್ಲಿ ಟಿ20 ವಿಶ್ವಕಪ್ ನಂತರ ಚುಟುಕು ಕ್ರಿಕೆಟ್​ ನಾಯಕತ್ವದಿಂದ ಕೆಳಗಿಳಿಯುವುದಾಗಿ ಈಗಾಗಲೇ ಹೇಳಿದ್ದಾರೆ. ಇದೀಗ ಅವರ ಸ್ಥಾನ ತುಂಬಲು ಕೆಲವು ಸ್ಟಾರ್​ ಬ್ಯಾಟರ್​ಗಳ ಹೆಸರು​ ಕೇಳಿಬರುತ್ತಿದೆ. ಇದೇ ವೇಳೆ, ಆಶೀಶ್‌ ನೆಹ್ರಾ ಅವರು ವೇಗಿ ಬುಮ್ರಾ ಅವರನ್ನು ಆಯ್ಕೆ ಮಾಡಿದ್ದಾರೆ.

Virat Kohli replacement as India Captain In T20Is
ಟಿ20 ತಂಡದ ನಾಯಕತ್ವ

By

Published : Nov 7, 2021, 4:09 PM IST

ಮುಂಬೈ: ವಿರಾಟ್​ ಕೊಹ್ಲಿ ಅವರಿಂದ ತೆರವಾಗಲಿರುವ ಭಾರತ ಟಿ20 ಕ್ರಿಕೆಟ್ ತಂಡದ ನಾಯಕತ್ವಕ್ಕೆ ರೋಹಿತ್ ಶರ್ಮಾ ಮತ್ತು ಕೆ.ಎಲ್.ರಾಹುಲ್ ಹೆಸರು ಜೋರಾಗಿ ಕೇಳಿಬರುತ್ತಿದೆ. ಆದರೆ ಮಾಜಿ ವೇಗದ ಬೌಲರ್​ ಆಶೀಷ್ ನೆಹ್ರಾ ಭಾರತ ತಂಡದ ಮೂರು ಮಾದರಿಯ ಕ್ರಿಕೆಟ್‌ನ ಅಗ್ರ ಶ್ರೇಯಾಂಕಿತ ಬೌಲರ್‌​ ಜಸ್​ಪ್ರೀತ್ ಬುಮ್ರಾ ಅವರು ಕೊಹ್ಲಿ ಸ್ಥಾನ ತುಂಬಬಲ್ಲರು ಎಂದು ಹೇಳಿದ್ದಾರೆ.

ಕೊಹ್ಲಿ ಟಿ20 ವಿಶ್ವಕಪ್ ನಂತರ ಚುಟುಕು ಕ್ರಿಕೆಟ್​ ನಾಯಕತ್ವದಿಂದ ಕೆಳಗಿಳಿಯುವುದಾಗಿ ಹೇಳಿದ್ದಾರೆ. ಅವರ ಸ್ಥಾನ ತುಂಬಲು ಕೆಲವು ಸ್ಟಾರ್​ ಬ್ಯಾಟರ್​ಗಳ ಹೆಸರು​ ಕೇಳಿಬರುತ್ತಿದೆ. ಈ ಸಂದರ್ಭದಲ್ಲಿ ನೆಹ್ರಾ, ಬುಮ್ರಾ ಅವರನ್ನು ಹೆಸರಿಸಿದ್ದಾರೆ.

'ರೋಹಿತ್ ಶರ್ಮಾ ಹೊರತುಪಡಿಸಿ ಕೆ.ಎಲ್.ರಾಹುಲ್, ರಿಷಭ್ ಪಂತ್ ಹೆಸರು ಕೇಳಿಬರುತ್ತಿದೆ. ಆದರೆ ಪಂತ್ ವಿಶ್ವದಾದ್ಯಂತ ಪ್ರಯಾಣ ಮಾಡಿರಬಹುದು, ಆದರೆ ಅವರು ಹೆಚ್ಚಾಗಿ ಆಟಗಾರರಿಗೆ ಡ್ರಿಂಕ್ಸ್​ ಕೊಡಲು ಸೀಮಿತವಾಗಿದ್ದರು. ಕೆಲವು ಸಮಯ ತಂಡದಿಂದಲೂ ಹೊರಬಿದ್ದಿದ್ದರು. ಇನ್ನು, ರಾಹುಲ್ ಈಗಷ್ಟೇ ಟೆಸ್ಟ್​ ಕ್ರಿಕೆಟ್​ಗೆ ಕಮ್​ಬ್ಯಾಕ್ ಮಾಡಿದ್ದಾರೆ. ಅದೂ ಮಯಾಂಕ್​ ಅಗರ್ವಾಲ್ ಗಾಯಗೊಂಡಿದ್ದರಿಂದ ಅವರು ತಂಡದಲ್ಲಿ ಅವಕಾಶ ಪಡೆದಿದ್ದಾರೆ.

ಅಜಯ್ ಜಡೇಜಾ ಹೇಳಿದಂತೆ ಬುಮ್ರಾ ಆಟವನ್ನು ಚೆನ್ನಾಗಿ ಅರ್ಥಮಾಡಿಕೊಂಡಿದ್ದಾರೆ. ಮೇಲಾಗಿ ಅವರೂ ಮೂರು ಮಾದರಿಯ ತಂಡದಲ್ಲಿ ಖಾಯಂ ಆಟಗಾರರಾಗಿದ್ದಾರೆ. ಕ್ರಿಕೆಟ್​ ಬುಕ್‌​ನಲ್ಲಿ ಎಲ್ಲಾದರೂ ವೇಗದ ಬೌಲರ್​ಗಳು ನಾಯಕರಾಗಬಾರದೆಂದು ಬರೆಯಲಾಗಿದೆಯೇ? ಎಂದು ಕ್ರಿಕ್​ಬಜ್​ನ ಸಂವಾದದ ವೇಳೆ ಪ್ರಶ್ನಿಸಿದರು.

ವರದಿಗಳ ಪ್ರಕಾರ, ಬಿಸಿಸಿಐ ಮುಂದಿನ ವಾರ ಭಾರತ ತಂಡಕ್ಕೆ ನೂತನ ಟಿ20 ನಾಯಕನನ್ನು ಘೋಷಣೆ ಮಾಡುವ ಸಾಧ್ಯತೆಯಿದೆ. ಈ ತಿಂಗಳಾಂತ್ಯದಲ್ಲಿ ಭಾರತ ನ್ಯೂಜಿಲ್ಯಾಂಡ್​ಗೆ 3 ಪಂದ್ಯಗಳ ಟಿ20 ಮತ್ತು 2 ಪಂದ್ಯಗಳ ಟೆಸ್ಟ್​ ಸರಣಿಗೆ ಆತಿಥ್ಯವಹಿಸಲಿದೆ.

ABOUT THE AUTHOR

...view details