ಸಿಡ್ನಿ (ಆಸ್ಟ್ರೇಲಿಯಾ):ಪ್ರತಿಷ್ಠಿತ ಬಾರ್ಡರ್-ಗವಾಸ್ಕರ್ ಟ್ರೋಫಿ ಟೆಸ್ಟ್ ಕ್ರಿಕೆಟ್ ಸರಣಿಯಲ್ಲಿ ಟೀಂ ಇಂಡಿಯಾ ವಿರುದ್ಧ ಆಸ್ಟ್ರೇಲಿಯಾ ಮೊದಲೆರಡು ಪಂದ್ಯ ಸೋತು 2-0 ಅಂತರದಿಂದ ಹಿನ್ನಡೆ ಅನುಭವಿಸಿದೆ. ಇದರ ನಡುವೆ ಆಸೀಸ್ ನಾಯಕ ಪ್ಯಾಟ್ ಕಮಿನ್ಸ್ ಬಗ್ಗೆ ಆಸ್ಟ್ರೇಲಿಯಾದ ಕ್ರಿಕೆಟ್ ದಂತಕಥೆ ಅಲನ್ ಬಾರ್ಡರ್ ಟೀಕಾಸ್ತ್ರ ಪ್ರಯೋಗಿಸಿದ್ದಾರೆ. ಭಾರತದ ವಿರುದ್ಧದ ಸರಣಿಯು ಕಮಿನ್ಸ್ಗೆ ನಾಯಕನಾಗಿ ಮೊದಲ ನಿಜವಾದ ಪರೀಕ್ಷೆ ಎಂದು ಹೇಳಿದ್ದಾರೆ.
ನಾಲ್ಕು ಪಂದ್ಯಗಳ ಸರಣಿಯಲ್ಲಿ, ನಾಗ್ಪುರ ಮತ್ತು ದೆಹಲಿಯಲ್ಲಿ ನಡೆದ ಎರಡು ಪಂದ್ಯಗಳಲ್ಲಿ ಭಾರತ ಭರ್ಜರಿ ಗೆಲುವು ದಾಖಲಿಸಿದೆ. ಭಾರತ ಪ್ರವಾಸಕ್ಕೂ ಮೊದಲು ಕಮಿನ್ಸ್ ನಾಯಕನಾಗಿ ಕೇವಲ ಒಂದು ಸೋಲು ಅನುಭವಿಸಿದ್ದರು. ದೆಹಲಿಯಲ್ಲಿ ನಡೆದ ಎರಡನೇ ಪಂದ್ಯದಲ್ಲಿ ಕಮಿನ್ಸ್ ಮೊದಲ ಇನ್ನಿಂಗ್ಸ್‌ನಲ್ಲಿ ಕೇವಲ 13 ಓವರ್ ಬೌಲ್ ಮಾಡಿ ಒಂದು ವಿಕೆಟ್ ಪಡೆದಿದ್ದರು. ಆದರೆ, ಎರಡನೇ ಇನ್ನಿಂಗ್ಸ್‌ನಲ್ಲಿ ಬೌಲಿಂಗ್ ಮಾಡಿರಲಿಲ್ಲ.
ಇದನ್ನೂ ಓದಿ:ಭಾರತದ ಸ್ಪಿನ್ ದಾಳಿಗೆ ಆಸ್ಟ್ರೇಲಿಯಾ ತತ್ತರ.. ಬ್ಯಾಟಿಂಗ್ ಸುಧಾರಣೆಗೆ ನೆರವು ನೀಡಲು ಸಿದ್ಧ: ಮಾಜಿ ಕ್ರಿಕೆಟಿಗ
ಬಾರ್ಡರ್ ವಿಶ್ಲೇಷಣೆ: ಈ ಟೆಸ್ಟ್ ಪಂದ್ಯದಲ್ಲಿ ಪ್ಯಾಟ್ ತನ್ನನ್ನು ತಾನು ಒತ್ತಡಕ್ಕೆ ಸಿಲುಕಿಸಿ ಬೌಲಿಂಗ್ ಮಾಡಿದ್ದಾರೆಂದು ನಾನು ಭಾವಿಸಿದ್ದೇನೆ. ಆದರೆ, ಕೆಲವೊಮ್ಮೆ ದಾರಿ ತಪ್ಪುತ್ತಿದ್ದಾಗ ಅವಕಾಶಗಳೂ ಇದ್ದವು. ವಿಶೇಷವಾಗಿ, ಭಾರತದ ಮೊದಲ ಇನ್ನಿಂಗ್ಸ್‌ನಲ್ಲಿ ಉತ್ತಮ ಜೊತೆಯಾಟ ಮೂಡಿ ಬರುತ್ತಿದ್ದಾಗ ಪ್ಯಾಟ್ ಕಮಿನ್ಸ್ ಎರಡು ಅಥವಾ ಮೂರು ಓವರ್‌ಗಳವರೆಗೆ ಒಂದೆರಡು ಬಾಲ್ಗಳನ್ನು ವೇಗವಾಗಿ ಮತ್ತು ನಿಧಾನವಾಗಿ ಎಸೆಯುತ್ತಿದ್ದರು ಎಂದು ಹೇಳಿದ್ದಾರೆ.