ಲಂಡನ್:ಭಾರತದ ವೇಗಿ ಮೊಹಮ್ಮದ್ ಸಿರಾಜ್, ಆಕ್ರಮಣಶೀಲತೆಯು ತನ್ನಿಂದ ಉತ್ತಮವಾದದ್ದನ್ನು ಹೊರತರುತ್ತದೆ, ಮೈದಾನದಲ್ಲಿ ಆಕ್ರಮಣಕಾರಿಯಾಗಿರುವುದೇ ತನ್ನ ಯಶಸ್ಸಿನ ಸೂತ್ರ ಎಂದು ಹೇಳಿದ್ದಾರೆ. 2020 ರಲ್ಲಿ ಆಸ್ಟ್ರೇಲಿಯಾ ವಿರುದ್ಧದ ಟೆಸ್ಟ್‌ಗೆ ಪಾದಾರ್ಪಣೆ ಮಾಡಿದ ನಂತರ ಸಿರಾಜ್ ಸಾಕಷ್ಟು ಅಂತಾರಾಷ್ಟ್ರೀಯ ಯಶಸ್ಸನ್ನು ಪಡೆದಿದ್ದಾರೆ. ಹೈದರಾಬಾದ್ ವೇಗಿ ಓವಲ್‌ನಲ್ಲಿ ಆಸ್ಟ್ರೇಲಿಯಾ ವಿರುದ್ಧ ನಡೆಯುತ್ತಿರುವ ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್ ಫೈನಲ್‌ನಲ್ಲಿ ಚೆಂಡಿನ ಮೂಲಕ ಭಾರತದ ಅಸಾಧಾರಣ ಪ್ರದರ್ಶನ ನೀಡಿದ್ದಾರೆ, ಪಂದ್ಯದ ಮೊದಲ ಇನ್ನಿಂಗ್ಸ್ನಲ್ಲಿ ನಾಲ್ಕು ವಿಕೆಟ್‌ಗಳನ್ನು ಪಡೆದರು. ಹಾಗೇ ಟೆಸ್ಟ್ನಲ್ಲಿ ಐವತ್ತು ವಿಕೆಟ್ ಪಡೆದ ಸಾಧನೆ ಮಾಡಿದರು.
"ನನ್ನ ಬೌಲಿಂಗ್‌ನಲ್ಲಿ ಆಕ್ರಮಣಶೀಲತೆ ಬಹಳ ಮುಖ್ಯ. ಟೆಸ್ಟ್ ಕ್ರಿಕೆಟ್ ಆಕ್ರಮಣಶೀಲತೆಯನ್ನು ಆಧರಿಸಿದೆ. ಅಗ್ರೆಶನ್ ಜೊತೆಗೆ ನಾವು ಬಾಲ್ ಮಾಡಿದಾಗ ಸರಳವಾದ ಬೌಲ್ ಕೂಡಾ ಪರಿಣಾಮಕಾರಿಯಾಗಿ ಹೋಗುತ್ತದೆ. ನಾನು ಆಕ್ರಮಣಕಾರಿಯಾಗಿ ಬೌಲಿಂಗ್ ಮಾಡುವಾಗ, ನಾನು ನನ್ನ ದೇಹವನ್ನು ತೊಡಗಿಸಿಕೊಳ್ಳುತ್ತೇನೆ. ಇತರ ಕೆಲವು ಬೌಲರ್‌ಗಳಂತೆ ಅಲ್ಲೊಂದು ಇಲ್ಲೊಂದು ಬೌಲ್ನ್ನು ಮಾತ್ರ ಆಕ್ರಮಣಕಾರಿಯಾಗಿ ಹಾಕಲು ಬಯಸುವುದಿಲ್ಲ, ನನ್ನ ಎಲ್ಲಾ ಬೌಲಿಂಗ್ ನಿಖರವಾಗಿರಿಸಲು ಭಯಸುತ್ತೇನೆ ಎಂದು ಐಸಿಸಿ ಪೋಸ್ಟ್ ಮಾಡಿದ ವೀಡಿಯೊದಲ್ಲಿ ಸಿರಾಜ್ ಹೇಳಿದ್ದಾರೆ.
"ನನ್ನ ಆಟದಲ್ಲಿ ನಾನು ಹೆಚ್ಚು ಆಕ್ರಮಣಶೀಲತೆಯನ್ನು ಹಾಕುತ್ತೇನೆ, ನಾನು ಅದರಿಂದ ಹೆಚ್ಚು ಯಶಸ್ಸನ್ನು ಸಾಧಿಸುತ್ತೇನೆ. ನಾನು ಆಕ್ರಮಣಶೀಲತೆಯಿಂದ ಆಡುವುದನ್ನು ಸಂಪೂರ್ಣವಾಗಿ ಆನಂದಿಸುತ್ತೇನೆ" ಎಂದು ಹೇಳುವ ಮೂಲಕ ತಮ್ಮ ಬೌಲಿಂಗ್ನ ಸೀಕ್ರೆಟ್ ಬಗ್ಗೆ ಹಂಚಿಕೊಂಡಿದ್ದಾರೆ.
ತಂದೆ ನೆನೆದ ಸಿರಾಜ್:ಸಿರಾಜ್ ಟೆಸ್ಟ್ ಕ್ರಿಕೆಟ್ ಆಡುವುದನ್ನು ಅತ್ಯತ್ತಮ ಆಟ ಎಂದೇ ಪರಿಗಣಿಸುತ್ತಾರೆ. ಅವರ ತಂದೆಗೆ ತಮ್ಮ ಟೆಸ್ಟ್ನ ಚೊಚ್ಚಲ ಪಂದ್ಯವನ್ನು ವೀಕ್ಷಿಸಲು ಸಾಧ್ಯವಾಗಲಿಲ್ಲ ಎಂಬುದರ ಬಗ್ಗೆ ಬೇಸರವನ್ನು ಹೊಂದಿದ್ದಾರೆ. ಡಿಸೆಂಬರ್ 26, 2020 ರಂದು ಮೆಲ್ಬೋರ್ನ್‌ನಲ್ಲಿ 77 ರನ್‌ಗಳಿಗೆ 5 ವಿಕೆಟ್ ಗಳಿಸುವ ಮೂಲಕ ಸಿರಾಜ್ ಭಾರತಕ್ಕೆ ಅತ್ಯುತ್ತಮ ಪಾದರ್ಪಣೆಯನ್ನು ಮಾಡಿದರು. ಆದರೆ ಟೆಸ್ಟ್‌ಗೆ ಸಿರಾಜ್ ಪಾದಾರ್ಪಣೆ ಮಾಡುವ ಕೆಲವೇ ವಾರಗಳ ಮೊದಲು ಸಿರಾಜ್ ಅವರ ತಂದೆ ಮೊಹಮ್ಮದ್ ಘೌಸ್ ನಿಧನರಾದರು.