ಲಾಹೋರ್ (ಪಾಕಿಸ್ತಾನ):ಏಷ್ಯಾಕಪ್ನ ಸೂಪರ್ ಫೂರ್ ಹಂತರಕ್ಕೆ ತಲುಪ ಬೇಕಾದರೆ ಶ್ರೀಲಂಕಾ ಮತ್ತು ಅಫ್ಘಾನಿಸ್ತಾನಕ್ಕೆ ಇಂದಿನ ಪಂದ್ಯದ ಗೆಲುವು ಅಗತ್ಯ. ಈ ನಿಟ್ಟಿನಲ್ಲಿ ಉಭಯ ತಂಡಗಳು ಕಠಿಣ ಪೈಪೋಟಿ ನಡೆಸುತ್ತಿವೆ. ಮಾಡು ಇಲ್ಲವೇ ಮಡಿ ಎಂಬಂತಿರುವ ಪಂದ್ಯದಲ್ಲಿ ಲಂಕಾದ ವಿಕೆಟ್ ಕೀಪರ್ ಕುಸಲ್ ಮೆಂಡಿಸ್ ಅವರ 92ನ ಅದ್ಭುತ ಇನ್ನಿಂಗ್ಸ್ ಆಡಿದರು. ಮೆಂಡಿಸ್ ಅವರ ಅರ್ಧಶತಕದ ನೆರವಿನಿಂದ ಲಂಕಾ ನಿಗದಿತ ಓವರ್ ಅಂತ್ಯಕ್ಕೆ 8 ವಿಕೆಟ್ ನಷ್ಟಕ್ಕೆ 291 ರನ್ ಕಲೆಹಾಕಿದೆ. ಸೂಪರ್ ಫೋರ್ನಲ್ಲಿ ಸ್ಥಾನ ಪಡೆಯಲು ಆಫ್ಘನ್ 292 ರನ್ನ ಗುರಿಯನ್ನು ಭೇದಿಸಬೇಕಿದೆ.
ಟಾಸ್ ಗೆದ್ದು ಬ್ಯಾಟಿಂಗ್ಗೆ ಬಂದ ಲಂಕಾ ಉತ್ತಮ ಆರಂಭವನ್ನು ಪಡೆಯಿತು. ವಿಶ್ವಕಪ್ ಅರ್ಹತಾ ಪಂದ್ಯಗಳಿಂದ ಉತ್ತಮ ಫಾರ್ಮ್ನಲ್ಲಿರುವ ಲಂಕಾದ ಆರಂಭಿಕರು ಪಾಕ್ ನೆಲದಲ್ಲಿ ಆಫ್ಘನ್ನರ ಮೇಲೆ ಸವಾರಿ ಮಾಡಿದರು. ಮೊದಲ ಪವರ್ ಪ್ಲೇ ಅಂತ್ಯಕ್ಕೆ ಲಂಕಾ ವಿಕೆಟ್ ನಷ್ಟವಿಲ್ಲದೇ 62 ರನ್ ಕಲೆಹಾಕಿತ್ತು. 11ನೇ ಓವರ್ನಲ್ಲಿ ಗುಲ್ಬದಿನ್ ನೈಬ್ 32 ರನ್ ಗಳಸಿ ಆಡುತ್ತಿದ್ದ ದಿಮುತ್ ಕರುಣಾರತ್ನೆ ವಿಕೆಟ್ ಪಡೆದರು. ಮತ್ತೆ ಮೂರು ಓವರ್ ಅಂತರದಲ್ಲಿ ಗುಲ್ಬದಿನ್ ನೈಬ್ ಇನ್ನೊಬ್ಬ ಆರಂಭಿಕ ಆಟಗಾರ ಪಾತುಮ್ ನಿಸ್ಸಾಂಕ ಅವರ ವಿಕೆಟ್ ಪಡೆದರು. ನಿಸ್ಸಾಂಕ ಈ ಇನ್ನಿಂಗ್ಸ್ನಲ್ಲಿ 6 ಬೌಂಡರಿಯಿಂದ 41 ರನ್ ಗಳಿಸಿ ವಿಕೆಟ್ ಕೊಟ್ಟರು.