ಆಸ್ಟ್ರೇಲಿಯಾ ಕ್ರಿಕೆಟ್ ತಂಡದ ಆ್ಯರನ್ ಫಿಂಚ್ ಇಂಡಿಯನ್ ಪ್ರೀಮಿಯರ್ ಲೀಗ್(ಐಪಿಎಲ್) ನಲ್ಲಿ ವಿಚಿತ್ರ ದಾಖಲೆ ಮಾಡಿದ್ದಾರೆ. ಇರುವ 10 ತಂಡಗಳ ಪೈಕಿ ಪಿಂಚ್ 9 ತಂಡಗಳ ಪರವಾಗಿ ಕಣಕ್ಕಿಳಿದಿದ್ದಾರೆ. ಮೆಗಾ ಹರಾಜಿನಲ್ಲಿ ಬಿಕರಿಯಾಗದೇ ಉಳಿದಿದ್ದ ಆಸ್ಟ್ರೇಲಿಯಾ ಟಿ- 20 ತಂಡದ ನಾಯಕ ಆ್ಯರನ್ ಫಿಂಚ್ ಅಲೆಕ್ಸ್ ಹೇಲ್ಸ್ ಬದಲಾಗಿ ಈಗ ಕೆಕೆಆರ್ ತಂಡ ಸೇರಿದ್ದಾರೆ.
ಆ್ಯರನ್ ಫಿಂಚ್ ಮೊದಲ ಬಾರಿಗೆ ರಾಜಸ್ಥಾನ್ ರಾಯಲ್ಸ್ (2010) ತಂಡ ಸೇರಿಕೊಂಡಿದ್ದರು. ಬಳಿಕ ಡೆಲ್ಲಿ ಡೇರ್‌ಡೆವಿಲ್ಸ್ (2011-12), ಪುಣೆ ವಾರಿಯರ್ಸ್ (2013), ಸನ್‌ರೈಸರ್ಸ್ ಹೈದರಾಬಾದ್ (2014), ಮುಂಬೈ ಇಂಡಿಯನ್ಸ್ (2015), ಗುಜರಾತ್ ಲಯನ್ಸ್ (2016-17), ಕಿಂಗ್ಸ್ ಇಲೆವೆನ್ ಪಂಜಾಬ್ (2018) ಮತ್ತು ರಾಯಲ್ ಚಾಲೆಂಜರ್ಸ್ ಬೆಂಗಳೂರು (2020) ಪರವಾಗಿ ಆಡಿದ್ದರು. ಇದೀಗ ಈ ಋತುವಿನಲ್ಲಿ ಕೋಲ್ಕತ್ತಾ ನೈಟ್ ರೈಡರ್ಸ್ ತಂಡದ ಪರವಾಗಿ ಐಪಿಎಲ್ನಲ್ಲಿ ಆಡುತ್ತಿದ್ದಾರೆ.