ಕರ್ನಾಟಕ

karnataka

ETV Bharat / sports

ಸೆಮಿಫೈನಲ್​ನಲ್ಲಿ ಸೋಲು... ಆದ್ರೂ 36 ವರ್ಷದ ನಂತರ ಕಂಚು ಗೆದ್ದ ಪ್ರಣೀತ್​

ವಿಶ್ವ ಬ್ಯಾಡ್ಮಿಂಟನ್​ ಚಾಂಪಿಯನ್​ಶಿಪ್​ನಲ್ಲಿ ಘಟಾನುಘಟಿಳಿಗೆ ಮಣ್ಣು ಮುಕ್ಕಿಸಿದ್ದ ಸಾತಿ ಪ್ರಣೀತ್​ ನಂಬರ್​ 1 ಶ್ರೇಯಾಂಕದ ಮೊಮೊಟೋ ವಿರುದ್ಧ ಸೋಲನುಭವಿಸಿದ್ದಾರೆ.

Sai Praneeth

By

Published : Aug 25, 2019, 8:41 AM IST

ಬಾಸೆಲ್​(ಸ್ವಿಟ್ಜರ್​ಲ್ಯಾಂಡ್): ವಿಶ್ವ ಬ್ಯಾಡ್ಮಿಂಟನ್​ ಚಾಂಪಿಯನ್​ಶಿಪ್​ನಲ್ಲಿ ಘಟಾನುಘಟಿಳಿಗೆ ಮಣ್ಣು ಮುಕ್ಕಿಸಿದ್ದ ಸಾತಿ ಪ್ರಣೀತ್​ ನಂಬರ್​ 1 ಶ್ರೇಯಾಂಕದ ಮೊಮೊಟೋ ವಿರುದ್ಧ ಸೋಲನುಭವಿಸಿದ್ದಾರೆ.

ಶನಿವಾರ ನಡೆದ ಸೆಮಿಫೈನಲ್​ನಲ್ಲಿ ಬಿ ಸಾಯಿ ಪ್ರಣೀತ್​ ಜಪಾನ್​ನ ಕೆಂಟೊ ಮೊಮೊಟೊ ವಿರುದ್ಧ 13-21, 8-21 ಗೇಮ್​ಗಳಿಂದ ಸುಲಭವಾಗಿ ಸೋಲನುಭವಿಸಿದರು. ಆದರೂ ಟೂರ್ನಿಯಲ್ಲಿ ಅಮೋಘ ಪ್ರದರ್ಶನ ತೋರುವ ಮೂಲಕ ಕಂಚಿನ ಪದಕ ಪಡೆಯುವಲ್ಲಿ ಯಶಸ್ವಿಯಾಗಿದ್ದಾರೆ.

ಸಾಯಿ ಪ್ರಣೀತ್​ ವಿಶ್ವ ಬ್ಯಾಡ್ಮಿಂಟನ್​ ಚಾಂಪಿಯನ್​ ಶಿಪ್​ನಲ್ಲಿ ಪದಕ ಗೆದ್ದ 2ನೇ ಭಾರತೀಯ ಎನಿಸಿಕೊಂಡರು. 1983 ರಲ್ಲಿ ಪ್ರಕಾಶ್​ ಪಡುಕೋಣೆ ಮೊದಲ ಬಾರಿಗೆ ಕಂಚು ಗೆದ್ದಿದ್ದರು.

ಪಂದ್ಯದ ನಂತರ ಮಾತನಾಡಿದ ಪ್ರಣೀತ್​, ಈ ಟೂರ್ನಿ ನನ್ನ ವೃತ್ತಿ ಜೀವನದಲ್ಲಿ ಅತ್ಯುತ್ತಮವಾದದ್ದಾಗಿದೆ. ಇಲ್ಲಿ ತುಂಬಾ ಕಲಿತಿದ್ದೇನೆ, ಈ ಸೋಲನ್ನು ಕೂಡ ಧನಾತ್ಮವಾಗಿ ಸ್ವೀಕರಿಸುತ್ತೇನೆ. ಪ್ರಸ್ತುತ ನನ್ನ ಪ್ರದರ್ಶನ ಉತ್ತಮವಾಗಿದ್ದು, ಅದನ್ನು ಮುಂದುವರಿಸುತ್ತೇನೆ ಎಂದು ಪ್ರಣೀತ್​ ವಿಶ್ವಾಸ ವ್ಯಕ್ತಪಡಿಸಿದ್ದಾರೆ.

ಪ್ರಣೀತ್​ ಈ ಟೂರ್ನಿಗೂ ಮೊದಲು ನಡೆದಿದ್ದ ಸ್ವಿಸ್​ ಓಪನ್​ನಲ್ಲಿ ರನ್ನರ್​ ಅಪ್​ ಆಗಿದ್ದರು. ಆದರೆ ನಂಬರ್​ ಒನ್​ ಮೊಮೊಟೋ ವಿರುದ್ಧ ಒತ್ತಡಕ್ಕೊಳಗಾದ ಪ್ರಣೀತ್​ ಕೆಲವು ಶಾಟ್​ಗಳನ್ನು ಅಂಗಳದಿಂದ ಹೊರಕ್ಕೆ ಹೊಡೆದು ಅಂಕ ಕಳೆದುಕೊಂಡು ಎದುರಾಳಿಗೆ ಸುಲಭ ತುತ್ತಾದರು.

ABOUT THE AUTHOR

...view details