ಕರ್ನಾಟಕ

karnataka

ETV Bharat / sports

ಕೋವಿಡ್ ಟೆಸ್ಟ್​ ವೇಳೆ ಮೂಗಿನಲ್ಲಿ ರಕ್ತ.. ಈ ರೀತಿ ಚಿಕಿತ್ಸೆ ಸ್ವೀಕಾರಾರ್ಹವಲ್ಲ ಎಂದು ಕಿಡಿಂಬಿ ಶ್ರೀಕಾಂತ್ ಕಿಡಿ

ಶ್ರೀಕಾಂತ್​ ತಮ್ಮ ಮೊದಲ ಪಂದ್ಯದಲ್ಲಿ ಭಾರತದವರೇ ಆದ ಸಮೀರ್ ವರ್ಮಾ ವಿರುದ್ಧ ತಮ್ಮ ಅಭಿಯಾನ ಆರಂಭಿಸಲಿದ್ದಾರೆ. ಇದಕ್ಕು ಮುನ್ನ ಸೈನಾ ನೆಹ್ವಾಲ್​ ಹಾಗೂ ಒಲಿಂಪಿಕ್​ ಚಿನ್ನದ ಪದ ವಿಜೇತೆ ಕರೋಲಿನಾ ಮರಿನ್ ಕೂಡ ಆಹಾರ ವ್ಯವಸ್ಥೆ ಸೇರಿದಂತೆ ಕೆಲವು ಅವ್ಯವಸ್ಥೆಗಳ ವಿರುದ್ಧ ಥಾಯ್​ ಬ್ಯಾಡ್ಮಿಂಟನ್ ಮತ್ತು ಬಿಡಬ್ಲ್ಯೂಎಫ್​ ವಿರುದ್ಧ ಆಕ್ರೋಶ ಹೊರ ಹಾಕಿದ್ದರು..

ಕೋವಿಡ್ ಟೆಸ್ಟ್​ ವೇಳೆ ಶ್ರೀಕಾಂತ್​​ ಮೂಗಿನಲ್ಲಿ ರಕ್ತ
ಕೋವಿಡ್ ಟೆಸ್ಟ್​ ವೇಳೆ ಶ್ರೀಕಾಂತ್​​ ಮೂಗಿನಲ್ಲಿ ರಕ್ತ

By

Published : Jan 12, 2021, 5:44 PM IST

Updated : Jan 12, 2021, 7:40 PM IST

ಬ್ಯಾಂಕಾಕ್​: ಮಾಜಿ ವಿಶ್ವದ ನಂಬರ್ ಒನ್ ಶಟ್ಲರ್ ಕಿಡಂಬಿ ಶ್ರೀಕಾಂತ್ ಅವರು ಥಾಯ್ಲೆಂಡ್​ ಓಪನ್​ಗೂ ಮುನ್ನ ಅನೇಕ ಕೋವಿಡ್​ 19 ಪರೀಕ್ಷೆಗಳಿಗೆ ಒಳಗಾದ ನಂತರ ಮೂಗಿನಲ್ಲಿ ರಕ್ತ ಬಂದಿದ್ದು, ಥಾಯ್ಲೆಂಡ್ ಓಪನ್‌ನಲ್ಲಿನ ಆರೋಗ್ಯ ಅಧಿಕಾರಿಗಳ ಕಳಪೆ ಚಿಕಿತ್ಸೆ ಸ್ವೀಕಾರಾರ್ಹವಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದ್ದಾರೆ.

"ನಾವು ನಮ್ಮನ್ನು ಕಾಪಾಡಿಕೊಳ್ಳುತ್ತಿರುವುದು ಇಲ್ಲಿ ಪಂದ್ಯಕ್ಕಾಗಿಯೇ ಹೊರೆತು ಈ ರೀತಿ ರಕ್ತ ಸುರಿಸುವುದಕ್ಕಲ್ಲ. ನಾನು ಇಲ್ಲಿಗೆ ಬಂದ ಮೇಲೆ 4 ಬಾರಿ ಕೋವಿಡ್​ ಟೆಸ್ಟ್​ಗೆ ಒಳಗಾಗಿದ್ದೇನೆ. ಆದರೆ, ಇವುಗಳಲ್ಲಿ ಯಾವುದು ಸೌಹಾರ್ದಯುತ​ವಾಗಿ ಕಾಣಲಿಲ್ಲ. ಈ ರೀತಿಯ ಚಿಕಿತ್ಸೆ ಸ್ವೀಕಾರಾರ್ಹವಲ್ಲ" ಎಂದು ಶ್ರೀಕಾಂತ್​​ ಟ್ವಿಟರ್​ನಲ್ಲಿ ಮೂಗಿನಲ್ಲಿ ರಕ್ತ ಬಂದಿರುವ ಫೋಟೋವನ್ನು ಶೇರ್​ ಮಾಡಿಕೊಂಡಿದ್ದು, ತಮ್ಮ ಅಸಮಾಧಾನ ಹೊರ ಹಾಕಿದ್ದಾರೆ.

ಕಿಡಿಂಬಿ ಶ್ರೀಕಾಂತ್ ಟ್ವಿಟರ್​ ಫೋಟೋ

ಶ್ರೀಕಾಂತ್​ ತಮ್ಮ ಮೊದಲ ಪಂದ್ಯದಲ್ಲಿ ಭಾರತದವರೇ ಆದ ಸಮೀರ್ ವರ್ಮಾ ವಿರುದ್ಧ ತಮ್ಮ ಅಭಿಯಾನ ಆರಂಭಿಸಲಿದ್ದಾರೆ. ಇದಕ್ಕು ಮುನ್ನ ಸೈನಾ ನೆಹ್ವಾಲ್​ ಹಾಗೂ ಒಲಿಂಪಿಕ್​ ಚಿನ್ನದ ಪದ ವಿಜೇತೆ ಕರೋಲಿನಾ ಮರಿನ್ ಕೂಡ ಆಹಾರ ವ್ಯವಸ್ಥೆ ಸೇರಿದಂತೆ ಕೆಲವು ಅವ್ಯವಸ್ಥೆಗಳ ವಿರುದ್ಧ ಥಾಯ್​ ಬ್ಯಾಡ್ಮಿಂಟನ್ ಮತ್ತು ಬಿಡಬ್ಲ್ಯೂಎಫ್​ ವಿರುದ್ಧ ಆಕ್ರೋಶ ಹೊರ ಹಾಕಿದ್ದರು.

ಮಂಗಳವಾರದಿಂದ ಥಾಯ್ಲೆಂಡ್ ಓಪನ್​ ಆರಂಭಗೊಂಡಿದೆ. ಸೈನಾ ಕೋವಿಡ್-19 ಪಾಸಿಟಿವ್​ಗೆ ತುತ್ತಾಗಿರುವುದರಿಂದ ಟೂರ್ನಿಯಿಂದ ಹೊರಬಿದ್ದಿದ್ರೆ, ಸಾಯಿ ಪ್ರಣೀತ್ ಮತ್ತು ಪಿ ವಿ ಸಿಂಧು ಮೊದಲ ಪಂದ್ಯದಲ್ಲೇ ಸೋತು ನಿರಾಶೆ ಅನುಭವಿಸಿದ್ದಾರೆ.

ಇದನ್ನು ಓದಿ:ಥಾಯ್ಲೆಂಡ್ ಓಪನ್​: ಮೊದಲ ಸುತ್ತಿನಲ್ಲೇ ಹೊರಬಿದ್ದ ಪಿ.ವಿ.ಸಿಂಧು, ಸಾಯಿ ಪ್ರಣೀತ್​

Last Updated : Jan 12, 2021, 7:40 PM IST

ABOUT THE AUTHOR

...view details