ಹೋ ಚಿ ಮಿನ್ ಸಿಟಿ(ವಿಯೆಟ್ನಾಂ):ಭಾರತೀಯ ಶಟಲ್ ಆಟಗಾರ ಸೌರಭ್ ವರ್ಮಾ ಸ್ಥಳೀಯ ಆಟಗಾರ ಟೈನ್ ಮಿನ್ ನುಯೆನ್ ಅವರನ್ನು ಸೋಲಿಸುವ ಮೂಲಕ ವಿಯೆಟ್ನಾಂ ಓಪನ್ ಬಿಡಬ್ಲೂಎಫ್ ಟೂರ್ ಸೂಪರ್ 100 ಟೂರ್ನಿಯ ಉಪಾಂತ್ಯ ಪ್ರವೇಶಿಸಿದ್ದಾರೆ.
ವಿಯೆಟ್ನಾಂ ಓಪನ್ ಬ್ಯಾಡ್ಮಿಂಟನ್: ಸೆಮಿಫೈನಲ್ ಪ್ರವೇಶಿಸಿದ ಸೌರಭ್ ವರ್ಮಾ - ಸೌರಭ್ ವರ್ಮಾ
ವಿಯೆಟ್ನಾಂ ಓಪನ್ ಬಿಡಬ್ಲೂಎಫ್ ಟೂರ್ ಸೂಪರ್ 100 ಟೂರ್ನಮೆಂಟ್ನಲ್ಲಿ ಸ್ಥಳೀಯ ಅಟಗಾರ ಟೈನ್ ಮಿನ್ ನುಯೆನ್ ಅವರನ್ನು ಸೋಲಿಸುವ ಮೂಲಕ ಸೌರಭ್ ವರ್ಮಾ ಸೆಮಿಫೈನಲ್ ಪ್ರವೇಶಿಸಿದ್ದಾರೆ.
ಸೌರಭ್ ವರ್ಮಾ
ಸುಮಾರು 43 ನಿಮಿಷಗಳ ಕಾಲ ನಡೆದ ಪಂದ್ಯದಲ್ಲಿ ಟೈನ್ ಮಿನ್ ನುಯೆನ್ ಅವರನ್ನು 21-31,21-18 ಅಂಕಗಳ ಅಂತರದಿಂದ ಸೋಲಿಸುವ ಮೂಲಕ ಸೆಮಿಫೈನಲ್‌ಗೇರಿದ್ರು.
ಸಿರಿಲ್ ವರ್ಮಾ ಮತ್ತು ಸುಭಂಕರ್ ಡೇ ಟೂರ್ನಿಯಿಂದ ಹೊರಬಿದ್ದಿದ್ದಾರೆ. ಸೌರಭ್ ವರ್ಮಾ ಒಬ್ಬರೇ ಟೂರ್ನಿಯಲ್ಲಿ ಸ್ಥಾನ ಕಾಯ್ದುಕೊಂಡಿದ್ದು, ಸೆಮಿಫೈನಲ್ನಲ್ಲಿ ಜಪಾನ್ ಆಟಗಾರ ಮಿನೊರು ಕೊಗ ಅವರನ್ನು ಎದುರಿಸಲಿದ್ದಾರೆ.