ಕರ್ನಾಟಕ

karnataka

ETV Bharat / sports

ವಿಶ್ವ ಚಾಂಪಿಯನ್​ಶಿಪ್​ನಲ್ಲಿ ಬೆಳ್ಳಿ ಗೆದ್ದ ಶ್ರೀಕಾಂತ್​ಗೆ ಪ್ರಧಾನಿ ಮೋದಿ ಅಭಿನಂದನೆ

ಪಿವಿ ಸಿಂಧು ಮತ್ತು ಸೈನಾ ನೆಹ್ವಾಲ್ ನಂತರ ಬೆಳ್ಳಿ ಪದಕ ಗೆದ್ದ 3ನೇ ಬ್ಯಾಡ್ಮಿಂಟನ್ ಪಟು ಎಂಬ ಕೀರ್ತಿಗೆ ಶ್ರೀಕಾಂತ್ ಭಾಜನರಾದರು. ಭಾರತದ ಪರ ಚಿನ್ನ ಗೆದ್ದ ದಾಖಲೆ ಸಿಂಧು ಹೆಸರಿನಲ್ಲಿದೆ. ಇವರು 2019ರಲ್ಲಿ ಜಪಾನ್​ ಒಕುಹರ ಅವರನ್ನು ಮಣಿಸಿ ಚಾಂಪಿಯನ್ ಆಗಿದ್ದರು..

PM Narendra Modi hails Kidambi Srikanth's silver at World Badminton Championships
ಶ್ರೀಕಾಂತ್​ಗೆ ಪ್ರಧಾನಿ ಮೋದಿ ಅಭಿನಂದನೆ

By

Published : Dec 20, 2021, 7:01 PM IST

ನವದೆಹಲಿ :ಸ್ಪೇನ್​ನಲ್ಲಿ ನಡೆದ ಬಿಡಬ್ಲ್ಯೂಎಫ್​ ವಿಶ್ವಚಾಂಪಿಯನ್​ಶಿಪ್​ನಲ್ಲಿ ಐತಿಹಾಸಿಕ ಬೆಳ್ಳಿಪದಕ ಗೆದ್ದ ಶಟ್ಲರ್​ ಕಿಡಂಬಿ ಶ್ರೀಕಾಂತ್​ಗೆ ಅಭಿನಂದನೆ ಸಲ್ಲಿಸಿರುವ ಪ್ರಧಾನಿ ನರೇಂದ್ರ ಮೋದಿ, ಕ್ರೀಡಾಪಟುಗಳಿಗೆ ಮತ್ತು ಯುವಕರು ಬ್ಯಾಡ್ಮಿಂಟನ್​​ನತ್ತ ಆಸಕ್ತಿ ತೋರಲು ನಿಮ್ಮ ಸಾಧನೆ ಪ್ರೇರಣೆಯಾಗಲಿದೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

ಶ್ರೀಕಾಂತ್​ ಭಾನುವಾರ ನಡೆದ ಫೈನಲ್​ನಲ್ಲಿ ಸಿಂಗಾಪುರ್​ನ ಲೋ ಕೀನ್​ ಯಿವ್ ವಿರುದ್ಧ 15-21, 20-22ರ ಅಂತರದಲ್ಲಿ ಸೋಲುಂಡರು. ಆದರೂ ಭಾರತದ ಪರ ಪುರುಷರ ಸಿಂಗಲ್ಸ್​ನಲ್ಲಿ ಚೊಚ್ಚಲ ಬೆಳ್ಳಿ ಪದಕ ಗೆದ್ದ ಶ್ರೇಯಕ್ಕೆ ಪಾತ್ರರಾದರು.

ಐತಿಹಾಸಿಕ ಬೆಳ್ಳಿ ಪದಕ ಗೆದ್ದಿರುವುದಕ್ಕೆ ಕಿಡಂಬಿ ಶ್ರೀಕಾಂತ್ ಅವರಿಗೆ ಅಭಿನಂದನೆಗಳು. ಈ ಗೆಲುವು ಹಲವಾರು ಕ್ರೀಡಾಪಟುಗಳಿಗೆ ಮತ್ತು ಬ್ಯಾಡ್ಮಿಂಟನ್​ನಲ್ಲಿ ಮತ್ತಷ್ಟು ಆಸಕ್ತಿವಹಿಸಲು ಪ್ರೇರಣೆಯಾಗಲಿದೆ ಎಂದು ಟ್ವೀಟ್​ ಮಾಡಿ ಅಭಿನಂದನೆ ಸಲ್ಲಿಸಿದ್ದಾರೆ.

28 ವರ್ಷದ ಶ್ರೀಕಾಂತ್ ಭಾರತದ ಪರ ವಿಶ್ವ ಬ್ಯಾಡ್ಮಿಂಟನ್​ ಚಾಂಪಿಯನ್‌ಶಿಪ್​ನಲ್ಲಿ ಬೆಳ್ಳಿ ಜಯಿಸಿದರೆ, ಯುವ ಶಟ್ಲರ್​ ಲಕ್ಷ್ಯ ಸೇನ್​ ಕಂಚು ಗೆದ್ದರು. ಇವರಿಬ್ಬರಿಗೂ ಮುನ್ನ 1983ರಲ್ಲಿ ಪ್ರಕಾಶ್ ಪಡುಕೋಣೆ ಮತ್ತು 2019ರಲ್ಲಿ ಸಾಯಿ ಪ್ರಣೀತ್ ಮಾತ್ರ ಕಂಚಿನದ ಪದಕ ಗೆದ್ದಿದ್ದರು.

ಪಿವಿ ಸಿಂಧು ಮತ್ತು ಸೈನಾ ನೆಹ್ವಾಲ್ ನಂತರ ಬೆಳ್ಳಿ ಪದಕ ಗೆದ್ದ 3ನೇ ಬ್ಯಾಡ್ಮಿಂಟನ್ ಪಟು ಎಂಬ ಕೀರ್ತಿಗೆ ಶ್ರೀಕಾಂತ್ ಭಾಜನರಾದರು. ಭಾರತದ ಪರ ಚಿನ್ನ ಗೆದ್ದ ದಾಖಲೆ ಸಿಂಧು ಹೆಸರಿನಲ್ಲಿದೆ. ಇವರು 2019ರಲ್ಲಿ ಜಪಾನ್​ ಒಕುಹರ ಅವರನ್ನು ಮಣಿಸಿ ಚಾಂಪಿಯನ್ ಆಗಿದ್ದರು.

ಇದನ್ನೂ ಓದಿ : ಇತಿಹಾಸ ಬರೆದ ಕಿಡಂಬಿ ಶ್ರೀಕಾಂತ್ : ವಿಶ್ವಚಾಂಪಿಯನ್​ಶಿಪ್​ನಲ್ಲಿ ಬೆಳ್ಳಿ ಪದಕ ಗೆದ್ದ ಮೊದಲ ಪುರುಷ ಶಟ್ಲರ್​

For All Latest Updates

ABOUT THE AUTHOR

...view details