ಜಕಾರ್ತ(ಇಂಡೋನೇಷ್ಯಾ): ಭಾರತದ ಸ್ಟಾರ್ ಬ್ಯಾಡ್ಮಿಂಟನ್ ಪಟುವಾದ ಪಿವಿ ಸಿಂಧು ಇಂಡೋನೇಷ್ಯಾ ಓಪನ್ನಲ್ಲಿ ಜಪಾನಿನ ಅಕಾನೆ ಯಮಗುಚಿ ವಿರುದ್ಧ 21-15, 21-16 ಅಂತರದಲ್ಲಿ ಸೋಲನುಭವಿಸಿದ್ದಾರೆ.
ಇಂಡೋನೇಷ್ಯಾ ಓಪನ್ನಲ್ಲಿ ಬೆಳ್ಳಿಗೆ ತೃಪ್ತಿಪಟ್ಟುಕೊಂಡ ಪಿವಿ ಸಿಂಧು
ಭಾರತದ ಸ್ಟಾರ್ ಬ್ಯಾಡ್ಮಿಂಟನ್ ಪಟುವಾದ ಪಿವಿ ಸಿಂಧು ಇಂಡೋನೇಷ್ಯಾ ಓಪನ್ನಲ್ಲಿ ಜಪಾನಿನ ಅಕಾನೆ ಯಮಗುಚಿ ವಿರುದ್ಧ 21-15, 21-16 ಅಂತರದಲ್ಲಿ ಸೋಲನುಭವಿಸುವ ಮೂಲಕ ಬೆಳ್ಳಿಪದಕಕ್ಕೆ ತೃಪ್ತಿಪಟ್ಟುಕೊಂಡಿದ್ದಾರೆ.
Indonesia Open
ಫೈನಲ್ ಪಂದ್ಯದಲ್ಲಿ ನಾಲ್ಕನೇ ಶ್ರೇಯಾಂಕದ ಯಮಗುಚಿ 5ನೇ ಶ್ರೇಯಾಂಕದ ಸಿಂಧು ವಿರುದ್ಧ ಎರಡೂ ಸೆಟ್ಗಳಲ್ಲೂ ಪ್ರಾಬಲ್ಯ ಸಾಧಿಸಿದರು. ಈ ವರ್ಷ ಮೊದಲ ಬಾರಿಗೆ ಪ್ರತಿಷ್ಠಿತ ಟೂರ್ನಿಯಲ್ಲಿ ಫೈನಲ್ಗೇರಿದ್ದ ಸಿಂಧು ಚಾಂಪಿಯನ್ ಆಗುವಲ್ಲಿ ಎಡವಿದರು. ಈ ಪಂದ್ಯಕ್ಕೂ ಮುನ್ನ ಸಿಂಧು ಯಮಗುಚಿ ವಿರುದ್ಧ 10-4 ರಲ್ಲಿ ಗೆಲುವಿನ ಅಂತರ ಕಾಯ್ದುಕೊಂಡಿದ್ದರು. ಆದರೆ ಈ ಬಾರಿ ಯಮಗುಚಿ ವಿರುದ್ಧ ಮಂಕಾದ ಸಿಂಧು ಎರಡೂ ಸೆಟ್ಗಳಲ್ಲಿಯೂ ಪೈಪೋಟಿ ನೀಡದೆ ಶರಣಾಗಿ ಬೆಳ್ಳಿಪದಕಕ್ಕೆ ತೃಪ್ತಿಪಟ್ಟರು.