ನವದೆಹಲಿ:ಕೋವಿಡ್-19 ನಿಯಂತ್ರಣಕ್ಕೆ ಬಂದು, ಸರ್ಕಾರ ಅನುಮತಿ ನೀಡಿದರೆ ಇಂಡಿಯಾ ಓಪನ್ ಬ್ಯಾಡ್ಮಿಂಟನ್ ಕೂಟದ ಆತಿಥ್ಯ ವಹಿಸಲು ಬಿಎಐ ಸಿದ್ದವಿದೆ ಎಂದು ತಿಳಿಸಿದೆ.
ಒಲಿಂಪಿಕ್ಸ್ ಅರ್ಹತಾ ಟೂರ್ನಿಯೂ ಆಗಿರುವ ಇಂಡಿಯಾ ಓಪನ್ 3 ಕೋಟಿ ಬಹುಮಾನ ಮೊತ್ತವನ್ನು ಹೊಂದಿದೆ. ಈ ಟೂರ್ನಿ ನಡೆಸಲು ಸಮಯ ನಿಗದಿ ಮಾಡುವಂತೆ ಬಿಡಬ್ಲ್ಯೂಎಫ್ ಬ್ಯಾಡ್ಮಿಂಟನ್ ಫಡೆರೇಷನ್ ಆಫ್ ಇಂಡಿಯಾ(ಬಿಎಐ)ಗೆ ಪತ್ರಬರೆದಿತ್ತು.
ಇದಕ್ಕೆ ಉತ್ತರಿಸಿರುವ ಬಿಎಐ ಡಿಸೆಂಬರ್ ಅಥವಾ ಜನವರಿ ತಿಂಗಳಲ್ಲಿ ಈ ಟೂರ್ನಿಯನ್ನು ನಡೆಸಲು ಸಿದ್ದವಿರುವುದಾಗಿ ಬಿಎಐ ಪ್ರಧಾನ ಕಾರ್ಯದರ್ಶಿ ಅಜಯ್ ಕೆ ಸಿಂಘಾನಿಯಾ ಹೇಳಿದ್ದಾರೆ.
ಈಗಾಗಲೆ ಭಾರತದಲ್ಲಿ ನಡೆಯಬೇಕಿದ್ದ ಬಿಡಬ್ಲ್ಯೂಎಫ್ ಸೂಪರ್-500 ಟೂರ್ನಿ ಕೂಡ ನವದೆಹಲಿಯಲ್ಲಿ ಮಾರ್ಚ್ 24ರಿಂದ 29ರವರೆಗೆ ನಡೆಯಬೇಕಿತ್ತು. ಕೊರೊನಾ ಲಾಕ್ಡೌನ್ನಿಂದ ಈ ಟೂರ್ನಿ ರದ್ದಾಗಿತ್ತು.
ಕೋವಿಡ್-19 ರೋಗದಿಂದಾಗಿ ಜೂನ್‌ನಲ್ಲಿ ನ್ಯೂಯಾರ್ಕ್‌ನಲ್ಲಿ ನಡೆಯಬೇಕಾಗಿದ್ದ ಯುಎಸ್ ಓಪನ್ ವಿಶ್ವ ಟೂರ್ ಸೂಪರ್ 300 ಬ್ಯಾಡ್ಮಿಂಟನ್ ಕೂಟವನ್ನು ರದ್ದುಮಾಡಲಾಗಿದೆ ಎಂದು ಬ್ಯಾಡ್ಮಿಂಟನ್ ವಿಶ್ವ ಫೆಡರೇಶನ್ ತಿಳಿಸಿದೆ.