ಕರ್ನಾಟಕ

karnataka

ETV Bharat / sitara

ನನ್ನ ಬೆಸ್ಟ್ ನಾನು ನೀಡಿದ್ದೀನಿ, ಟಾಪ್ ನಾಲ್ಕು ಬಂದಿದ್ದು ಖುಷಿ ನೀಡಿದೆ.. ವೈಷ್ಣವಿ ಗೌಡ - ಬಿಗ್​ಬಾಸ್​ ಜರ್ನಿ ಬಗ್ಗೆ ವೈಷ್ಣವಿ ಗೌಡ ಮಾತು

ವಾರಾಂತ್ಯದಲ್ಲಿ ವೈಷ್ಣವಿ ಅವರನ್ನು ರೇಷ್ಮಕ್ಕ ಎಂದು ಸುದೀಪ್ ಕರೆಯುತ್ತಿದ್ದರು. ವೈಷ್ಣವಿ ಬಿಗ್​​ಬಾಸ್ ಮನೆಯಲ್ಲಿ ಯಾವುದಕ್ಕೂ ಸಿಕ್ಕಿ ಹಾಕಿಕೊಳ್ಳದಂತೆ ಆಟವಾಡುತ್ತಿದ್ದರು. ಅಲ್ಲದೆ ಮನೆಯ ಸದಸ್ಯರೊಂದಿಗೆ ಇದ್ದರೂ ಇರದಂತೆ ಇರುತ್ತಿದ್ದರು.‌ ಇದು ಸಹ ಎಲಿಮಿನೇಟ್​​​ಗೆ ಪ್ರಮುಖ ಕಾರಣ..

ವೈಷ್ಣವಿ ಗೌಡ
Vaishnavi gowda

By

Published : Aug 8, 2021, 8:36 PM IST

ಬಿಗ್​​ಬಾಸ್ ಟಾಪ್ ನಾಲ್ಕರ ಹಂತದಲ್ಲಿ ವೈಷ್ಣವಿ ಗೌಡ ಮನೆಯಿಂದ ಹೊರ ಬಂದಿದ್ದಾರೆ. ಈ ಬಗ್ಗೆ ವೇದಿಕೆ ಮೇಲೆ ಸುದೀಪ್ ಅವರೊಂದಿಗೆ ತಮ್ಮ ಜರ್ನಿಯ ಬಗ್ಗೆ ವೈಷ್ಣವಿ ಅಭಿಪ್ರಾಯಹಂಚಿಕೊಂಡರು.

ವೈಷ್ಣವಿ ಗೌಡ

ಎಲಿಮಿನೇಟ್ ಆಗಿದ್ದು ನನಗೆ ಅಚ್ಚರಿ ಕೂಡ ಆಗಿದೆ. ಇಷ್ಟು ಬೇಗ ಬರುತ್ತೇನೆ ಅಂದುಕೊಂಡಿರಲಿಲ್ಲ. ನನ್ನ ಕೈಲಾದಷ್ಟು ನಾನು ಪ್ರಯತ್ನ ಪಟ್ಟಿದ್ದೇನೆ. ಬಿಗ್​ ಬಾಸ್​ ಮನೆಯಲ್ಲಿ ಇರುವಷ್ಟು ದಿನ ನಾನು ನಗುತ್ತಾ ಎಲ್ಲರೊಂದಿಗೆ ಇಷ್ಟು ದಿನ ಇದ್ದದ್ದು, ತುಂಬಾ ಖುಷಿ ಕೊಟ್ಟಿದೆ ಎಂದರು.

ವೈಷ್ಣವಿ ಗೌಡ

ಫಿನಾಲೆ ಹತ್ತಿರ ಬರುತ್ತೇನೆ ಎಂದು ಅಂದುಕೊಂಡೆ ಮನೆಗೆ ಬಂದಿದ್ದೆ. ಈ ಶೋ ನಿನಗಲ್ಲ ಎಂದಿದ್ದವರು ಇದೀಗ 'ಯು ಮೇಡ್ ಎ ಡಿಫರೆಂಟ್' ಅಂತಿದ್ದಾರೆ. ಈ ಬಿಗ್​​ಬಾಸ್ ಮನೆ ನನೆಗೆ 'ರಿಯಲ್ ಟೇಸ್ಟ್ ಆಫ್ ಇಂಡಿಪೆಂಡೆನ್ಸ್' ನೀಡಿದೆ ಎಂದುಕೊಳ್ಳುತ್ತೇನೆ.

ವೈಷ್ಣವಿ ಗೌಡ

ಓದಿ: Bigg Boss Grand Finale: ದೊಡ್ಮನೆಯಿಂದ ಹೊರಬಂದ ದಿವ್ಯ ಉರುಡುಗ

ವಾರಾಂತ್ಯದಲ್ಲಿ ವೈಷ್ಣವಿ ಅವರನ್ನು ರೇಷ್ಮಕ್ಕ ಎಂದು ಸುದೀಪ್ ಕರೆಯುತ್ತಿದ್ದರು. ವೈಷ್ಣವಿ ಬಿಗ್​​ಬಾಸ್ ಮನೆಯಲ್ಲಿ ಯಾವುದಕ್ಕೂ ಸಿಕ್ಕಿ ಹಾಕಿಕೊಳ್ಳದಂತೆ ಆಟವಾಡುತ್ತಿದ್ದರು. ಅಲ್ಲದೆ ಮನೆಯ ಸದಸ್ಯರೊಂದಿಗೆ ಇದ್ದರೂ ಇರದಂತೆ ಇರುತ್ತಿದ್ದರು.‌ ಇದು ಸಹ ಎಲಿಮಿನೇಟ್​​​ಗೆ ಪ್ರಮುಖ ಕಾರಣ ಎನ್ನಲಾಗಿದೆ.

ABOUT THE AUTHOR

...view details