ಕರ್ನಾಟಕ

karnataka

By

Published : Oct 7, 2020, 1:23 PM IST

ETV Bharat / sitara

ಅನು ಜನಾರ್ಧನ್ ತೂಕ ಇಳಿಸಲು ಎರಡು 'ಡಿ' ಗಳು ಕಾರಣವಂತೆ...ಏನದು..?

ಕಿರುತೆರೆ ನಟಿ ಅನು ಜನಾರ್ಧನ್ ಮತ್ತಷ್ಟು ತೂಕ ಕಳೆದುಕೊಂಡಿದ್ದು ತಮ್ಮ ಹೊಸ ಫೋಟೋಗಳನ್ನು ಇನ್ಸ್ಟಾಗ್ರಾಮ್​​ನಲ್ಲಿ ಹಂಚಿಕೊಂಡಿದ್ದಾರೆ. ತೂಕ ಕಳೆದುಕೊಳ್ಳಲು ಡ್ಯಾನ್ಸ್ ಹಾಗೂ ಡಯಟ್ ಎರಡು ಡಿ ಗಳು ಸಹಾಯ ಮಾಡಿದವು ಎಂದು ಬರೆದುಕೊಂಡಿದ್ದಾರೆ.

Anu janardhan
ಅನು ಜನಾರ್ಧನ್

ಕಲರ್ಸ್ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿದ್ದ'ರಂಗನಾಯಕಿ' ಧಾರಾವಾಹಿಯಲ್ಲಿ ನೆಗೆಟಿವ್ ಪಾತ್ರದಲ್ಲಿ ಮಿಂಚಿದ್ದ ಅನು ಜನಾರ್ಧನ್ ತಮ್ಮ ಫಿಟ್ನೆಸ್​​​​​​​​​​​​​​​​ ಹಾಗೂ ಫ್ಯಾಷನ್​​ ಮೂಲಕ ಕಿರುತೆರೆಪ್ರಿಯರ ಮನಗೆದ್ದವರು. ಇದರೊಂದಿಗೆ ಅನು ಆಗ್ಗಾಗ್ಗೆ ವಿವಿಧ ಫೋಟೋಶೂಟ್ ಮೂಲಕವೂ ಸುದ್ದಿಯಲ್ಲಿರುತ್ತಾರೆ.

ಆ್ಯಕ್ಟಿಂಗ್ ಲೋಕಕ್ಕೆ ಬರುವ ಮುನ್ನ ಕೂಡಾ ಫಿಟ್ನೆಸ್​ ಕಡೆ ಹೆಚ್ಚು ಗಮನ ನೀಡುತ್ತಿದ್ದರು ಈ ನಟಿ. ಮತ್ತಷ್ಟು ದೇಹದ ತೂಕ ಇಳಿಸಿಕೊಂಡಿರುವ ಅನು ಇನ್ಸ್ಟಾಗ್ರಾಂನಲ್ಲಿ ಕೆಲವು ಫೋಟೋಗಳನ್ನು ಹಂಚಿಕೊಂಡಿದ್ದಾರೆ. "ನಾನು ಫೋಟೋಗಳನ್ನು ಶೇರ್ ಮಾಡಿದಾಗಿನಿಂದ ಹಲವು ಪ್ರತಿಕ್ರಿಯೆಗಳು ಬರುತ್ತಿವೆ. ಮಾತ್ರವಲ್ಲ ಈ ಬದಲಾವಣೆಯ ಪೋಸ್ಟ್ ನೋಡಿದ ಹಲವರು ಪ್ರಶ್ನೆಗಳನ್ನು ಕೇಳುತ್ತಿದ್ದಾರೆ. ಹೇಗೆ ತೂಕ ಕಳೆದುಕೊಂಡಿರಿ ಎಂಬುದೇ ಎಲ್ಲರೂ ಕೇಳುವ ಪ್ರಶ್ನೆಯಾಗಿದೆ. 2017 ರಿಂದ ಬೇಡದ ಕ್ಯಾಲೋರಿಗೆ ಗುಡ್ ಬೈ ಹೇಳಿದೆ. ಮತ್ತು ಈ ದೇಹ ಈ ಆಕಾರ ಪಡೆಯಲು ಒಂದೂವರೆ ವರ್ಷ ತೆಗೆದುಕೊಂಡೆ" ಎಂದು ಹೇಳುತ್ತಾರೆ ಅನು.

ಅಷ್ಟೇ ಅಲ್ಲ, "ನಾನು ತೂಕ ಇಳಿಸಲು ನನಗೆ ಎರಡು 'ಡಿ' ಗಳು ಸಹಾಯ ಮಾಡಿದವು. ಅದೇ ಡ್ಯಾನ್ಸ್ ಹಾಗೂ ಡಯಟ್​​" ಎಂದು ತಮ್ಮ ಫಿಟ್ನೆಸ್ ಮಂತ್ರವನ್ನು ಹೇಳಿಕೊಂಡಿದ್ದಾರೆ ಅನು ಜನಾರ್ಧನ್.

ABOUT THE AUTHOR

...view details