ಕರ್ನಾಟಕ

karnataka

ETV Bharat / sitara

ನಟ, ಬಿಗ್​​ ಬಾಸ್​ ವಿಜೇತ ಸಿದ್ಧಾರ್ಥ್ ಶುಕ್ಲಾ ಇನ್ನಿಲ್ಲ..! - ಬಿಗ್‌ ಬಾಸ್ ಸೀಸನ್​-13

ನಟ, ಬಿಗ್​​ ಬಾಸ್​ ರಿಯಾಲಿಟಿ ಶೋ ವಿಜೇತ ಸಿದ್ಧಾರ್ಥ್ ಶುಕ್ಲಾ ಹೃದಯಾಘಾತದಿಂದ ಕೊನೆಯುಸಿರೆಳೆದಿದ್ದಾರೆ.

TV and film actor Sidharth Shukla dead
ಸಿದ್ಧಾರ್ಥ್ ಶುಕ್ಲಾ

By

Published : Sep 2, 2021, 11:57 AM IST

Updated : Sep 2, 2021, 12:12 PM IST

ಮುಂಬೈ:ಕಿರುತರೆ ಹಾಗೂ ಚಲನಚಿತ್ರ ನಟ ಸಿದ್ಧಾರ್ಥ್ ಶುಕ್ಲಾ (40) ಹೃದಯಾಘಾತದಿಂದ ಇಂದು ಬೆಳಗ್ಗೆ ನಿಧನರಾಗಿದ್ದಾರೆ. ಹಿಂದಿಯ ರಿಯಾಲಿಟಿ ಶೋ ಬಿಗ್​ ಬಾಸ್​ ಸೀಸನ್​-13ರ ವಿಜೇತನಾಗಿರುವ ಶುಕ್ಲಾ ನಿಧನ ಅವರ ತಾಯಿ, ಸಹೋದರಿಯರು ಹಾಗೂ ಅಭಿಮಾನಿಗಳಿಗೆ ದೊಡ್ಡ ಆಘಾತ ನೀಡಿದೆ.

ಇಂದು ಬೆಳ್ಳಂಬೆಳಗ್ಗೆ ಹೃದಯಾಘಾತಕ್ಕೊಳಗಾದ ಶುಕ್ಲಾರನ್ನ ಮುಂಬೈನ ಕೂಪರ್​ ಆಸ್ಪತ್ರೆಗೆ ಕುಟುಂಬಸ್ಥರು ಕರೆ ತಂದಿದ್ದಾರೆ. ಆದರೆ ಅಷ್ಟರಲ್ಲೇ ಅವರು ಕೊನೆಯುಸಿರೆಳೆದಿದ್ದರು ಎಂದು ಆಸ್ಪತ್ರೆಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಬಿಗ್‌ ಬಾಸ್ ಸೀಸನ್​-13 ವಿಜೇತ ಸಿದ್ಧಾರ್ಥ್ ಶುಕ್ಲಾ

ಇದನ್ನೂ ಓದಿ: ಹಿಂದಿಯ ಬಿಗ್‌ ಬಾಸ್ ಸೀಸನ್​-13ರ ಕಿರೀಟ ಸಿದ್ಧಾರ್ಥ್ ಶುಕ್ಲಾ ಮುಡಿಗೆ..

ಮಾಡೆಲ್​ ಆಗಿ ವೃತ್ತಿಜೀವನ ಆರಂಭಿಸಿದ್ದ ಶುಕ್ಲಾ, 'ಬಾಬುಲ್ ಕಾ ಆಂಗನ್ ಚೂಟೇ ನಾ' ಧಾರವಾಹಿಯ ಮೂಲಕ ಕಿರುತೆರೆಗೆ ಪದಾರ್ಪಣೆ ಮಾಡಿದ್ದರು. ಬಳಿಕ 'ಬಾಲಿಕಾ ವಧು' ಧಾರಾವಾಹಿ ಮೂಲಕ ಪ್ರೇಕ್ಷಕರ ಮನಗೆದ್ದಿದ್ದರು. 'ಹ೦ಪ್ಟಿ ಶರ್ಮಾ ಕೀ ದುಲ್ಹನಿಯಾ' ಸಿನಿಮಾದಲ್ಲಿ ಪೋಷಕ ನಟನಾಗಿ ಕಾಣಿಸಿಕೊಳ್ಳುವ ಮೂಲಕ ಬಾಲಿವುಡ್​ಗೆ ಎಂಟ್ರಿ ಕೊಟ್ಟಿದ್ದರು.

ಇದನ್ನೂ ಓದಿ: ಬ್ಯೂಟಿಫುಲ್ ಟೀಸರ್: ಸಿದ್ಧಾರ್ಥ್ ಶುಕ್ಲಾ-ಸೋನಿಯಾ ರಥೀ ಕೆಮಿಸ್ಟ್ರಿ ಮೆಚ್ಚಿಕೊಂಡ ಅಭಿಮಾನಿಗಳು

ಖತ್ರೋನ್ ಕೆ ಖಿಲಾಡಿ, ಬಿಗ್​ ಬಾಸ್ -13 (ವಿನ್ನರ್), ಝಲಕ್ ದಿಖ್ಲಾ ಜಾ - ರಿಯಾಲಿಟಿ ಶೋಗಳಲ್ಲಿ ಭಾಗವಹಿಸಿ ಅಭಿಮಾನಿಗಳ ಹೃದಯ ಕದ್ದಿದ್ದರು. 'ಬ್ರೋಕನ್ ಬಟ್ ಬ್ಯೂಟಿಫುಲ್ ಸೀಸನ್ 3' ವೆಬ್ ಶೋನಲ್ಲಿ ಕೂಡ ಪ್ರಮುಖ ಪಾತ್ರದಲ್ಲಿ ನಟಿಸಿದ್ದರು.

Last Updated : Sep 2, 2021, 12:12 PM IST

ABOUT THE AUTHOR

...view details