ಕರ್ನಾಟಕ

karnataka

ETV Bharat / sitara

ಕಿರುತೆರೆ ನಟಿಗೆ ವಕ್ಕರಿಸಿತು‌ ಕೊರೊನಾ... ಹೋಂ ಕ್ವಾರಂಟೈನ್​! - ಮಹಾಮಾರಿ ಕೊರೊನಾ

ದೇಶದಲ್ಲಿ ಕೊರೊನಾ ಅಬ್ಬರ ಜೋರಾಗಿದ್ದು, ಇದೀಗ ಕಿರುತೆರೆ ನಟಿವೋರ್ವರಿಗೆ ಸೋಂಕು ತಗುಲಿರುವುದು ಕನ್ಫರ್ಮ್​ ಆಗಿದೆ.

small screen actors got covid postive
small screen actors got covid postive

By

Published : Jul 1, 2020, 10:07 PM IST

ಸಿನಿಮಾ ಮತ್ತು ಕಿರುತೆರೆ ಕಲಾವಿದರಿಗೆ ವಿನಾಯಿತಿ ನೀಡಿ, ಶೂಟಿಂಗ್​ ನಡೆಸಲು ತೆಲಂಗಾಣ ಸರ್ಕಾರ ಅನುಮತಿ ನೀಡಿದೆ. ಅದರಂತೆ ಮುನ್ನೆಚ್ಚರಿಕಾ ಕ್ರಮ ಕೈಗೊಂಡು ಚಿತ್ರೀಕರಣ​ ಶುರು ಮಾಡಲಾಗಿದೆ. ಇದೆಲ್ಲದರ ನಡುವೆ ಇದೀಗ ಕಿರುತೆರೆ ನಟಿಯೊಬ್ಬರಿಗೆ ಕರೊನಾ ಪಾಸಿಟಿವ್​ ಇರುವುದು ಕನ್ಫರ್ಮ್​ ಆಗಿದೆ.

ಕರ್ನಾಟಕ ಮೂಲದ ತೆಲುಗಿನ ಕಿರುತೆರೆಯ ಖ್ಯಾತ ನಟಿಗೆ ಕರೊನಾ ಪಾಟಿಸಿವ್​ ಇರುವುದು ಧೃಡಪಟ್ಟಿದೆ. ಕನ್ನಡದ ಲಕುಮಿ‌ ಧಾರಾವಾಹಿಯಲ್ಲಿ ಪ್ರಮುಖ ಪಾತ್ರದಲ್ಲಿ ಇವರು ಕಾಣಿಸಿಕೊಂಡಿದ್ದರು. ಆದರೆ, ತೆಲುಗು ಧಾರಾವಾಹಿಯಲ್ಲಿ ಹೆಚ್ಚು ಫೇಮಸ್ ಆಗಿದ್ದರು. ಸದ್ಯ 'ನಾ ಪೇರು ಮೀನಾಕ್ಷಿ' ಧಾರಾವಾಹಿ ಶೂಟಿಂಗ್​ ವೇಳೆ ಬೇರೊಬ್ಬರಿಂದ ಸೋಂಕು ತಗುಲಿರಬಹುದು ಎಂದು ಶಂಕಿಸಲಾಗಿದ್ದು, ಹೋಮ್​ ಕ್ವಾರಂಟೈನ್​ನಲ್ಲಿದ್ದಾರೆ.

ಕಿರುತೆರೆ ನಟಿಗೆ ವಕ್ಕರಿಸಿತು‌ ಕೊರೊನಾ

ಮೂಲತಃ ಕರ್ನಾಟಕದವರಾಗಿದ್ದು, ಈ ಹಿಂದೆ ಹಲವು ರಿಯಾಲಿಟಿ ಶೋಗಳಲ್ಲಿ ಭಾಗವಹಿಸಿದ್ದರು. ಟಿವಿ ಕಾರ್ಯಕ್ರಮಗಳನ್ನು ನಿರೂಪಿಸುವುದು ಹಾಗೂ ನಟನೆಯಲ್ಲೂ ತೊಡಗಿಸಿಕೊಂಡಿದ್ದರು. ಹಲವು ಧಾರಾವಾಹಿಗಳಲ್ಲಿ ನಟನೆ ಮಾಡಿರುವ ಈ ನಟಿ, ವಾಣಿ-ರಾಣಿ, ಆರ್ಣಮನೈ ಕಿಲೈ, ರನ್​ ಆಯಂಡ್​ ಆಮೆ ಕಥಾ ಧಾರಾವಾಹಿಗಳಲ್ಲಿ ತೊಡಗಿಸಿಕೊಂಡಿದ್ದರು. ಗುಣಲಕ್ಷಣಗಳೇನು ಕಂಡು ಬರದಿದ್ದ ಕಾರಣ, ಬೇಗ ಚೇತರಿಸಿಕೊಳ್ಳಲಿದ್ದಾರೆ ಎಂದು ವೈದ್ಯರು ತಿಳಿಸಿದ್ದಾರೆ.

ನಟಿಗೆ ಪಾಸಿಟಿವ್​ ಬಂದ ಹಿನ್ನೆಲೆಯಲ್ಲಿ ಅವರೊಂದಿಗೆ ಸಂಪರ್ಕದಲ್ಲಿದ್ದ ಹಲವು ಕಲಾವಿದರು, ಐಸೋಲೇಷನ್​ಗೆ ಹೋಗಲು ನಿರ್ಧರಿಸಿದ್ದಾರೆ. ತೆಲುಗು ಕಿರುತೆರೆಯ ನಿರ್ಮಾಪಕ ಸಂಘದ ಖಜಾಂಚಿಯಾಗಿರುವ ಕೆ. ರಮೇಶ್​ ಬಾಬು, ಸೂಕ್ತ ಮುಂಜಾಗೃತಾ ಕ್ರಮಗಳನ್ನು ಕಡ್ಡಾಯವಾಗಿ ಪಾಲಿಸಿ ಎಂದು ಎಲ್ಲಾ ಧಾರಾವಾಹಿ ತಂಡಗಳಿಗೆ ಕಟ್ಟುನಿಟ್ಟಾಗಿ ಆದೇಶಿಸಿದ್ದರು.

ABOUT THE AUTHOR

...view details