ವಿವಾದದ ನಂತರ ದರ್ಶನ್ ಮತ್ತು ರಕ್ಷಿತಾ ಪ್ರೇಮ್ ನಡುವೆ ಮತ್ತೆ ಸ್ನೇಹ ಚಿಗುರಿದೆ. ಅದಕ್ಕೆ ಸಾಕ್ಷಿ ಎಂಬಂತೆ ರಕ್ಷಿತಾ ಅವರು ಫೋಟೋವೊಂದನ್ನು ಸೋಷಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ.
ಇತ್ತೀಚೆಗೆ ನಟ ದರ್ಶನ್ ಹಾಗು ನಿರ್ದೇಶಕ ಇಂದ್ರಜಿತ್ ಲಂಕೇಶ್ ನಡುವಿನ ವಾಗ್ವಾದ ಚಿತ್ರರಂಗದಲ್ಲಿ ಸಂಚಲನ ಸೃಷ್ಟಿಸಿತ್ತು. ನಟ ದರ್ಶನ್ ಅವರು ನಿರ್ದೇಶಕ ಇಂದ್ರಜಿತ್ ಲಂಕೇಶ್ ವಿರುದ್ಧ ಮಾತನಾಡುವ ಭರದಲ್ಲಿ ಪ್ರೇಮ್ ವಿಷಯವನ್ನು ಅನವಶ್ಯಕವಾಗಿ ಎಳೆದುತಂದು, ನಿರ್ದೇಶಕ ಪ್ರೇಮ್ ಬಗ್ಗೆ ಹಗುರವಾಗಿ ಮಾತನಾಡಿದ್ದರು. ಇದಕ್ಕೆ ಸೋಷಿಯಲ್ ಮೀಡಿಯಾದಲ್ಲಿ ರಕ್ಷಿತಾ ಪ್ರೇಮ್ ಅಸಮಾಧಾನ ವ್ಯಕ್ತಪಡಿಸಿದರು.
ಇನ್ನೇನು ಚಿತ್ರರಂಗದಲ್ಲಿ ಆತ್ಮೀಯ ಸ್ನೇಹಿತರಾಗಿದ್ದ ದರ್ಶನ್ ಮತ್ತು ರಕ್ಷಿತಾ ಫ್ರೆಂಡ್ಶಿಪ್ ಮುಗಿದು ಹೋಯಿತು ಎಂದು ಗಾಂಧಿನಗರದಲ್ಲಿ ಸುದ್ದಿ ಹಬ್ಬಿತ್ತು. ಆದರೆ ಈಗ ರಕ್ಷಿತಾ ಪ್ರೇಮ್ ತಮ್ಮ ಗೆಳತನಕ್ಕೆ ಹೊಸ ಟ್ವಿಸ್ಟ್ ಕೊಟ್ಟಿದ್ದಾರೆ.
ಇದನ್ನೂ ಓದಿ:'ತೆರೆಮೇಲೆ ಒಬ್ಬ ನಟನನ್ನ ಹುಟ್ಹಾಕಿ ಅವ್ನಿಗ್ ಕೊಂಬು ಬರಬೇಕಾದ್ರೆ, ನಿರ್ದೇಶಕನ ಶ್ರಮ ಎಷ್ಟಿರುತ್ತೆ ನಿಮ್ಗೂ ಗೊತ್ತು..'
ಹೌದು, ರಕ್ಷಿತಾ ಅವರು ತಾನು ದರ್ಶನ್ ಜೊತೆಗಿರುವ ಫೋಟೋವನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಳ್ಳುವ ಮೂಲಕ ಹೊಸ ಸಂದೇಶ ರವಾನಿಸಿದ್ದಾರೆ. ಅಷ್ಟೇ ಅಲ್ಲದೇ ದರ್ಶನ್ ಜೊತೆಗಿನ ಫೋಟೋದ ಮುಂದೆ ಗಮನ ಸೆಳೆಯುವ ಕ್ಯಾಪ್ಷನ್ ಕೊಟ್ಟಿದ್ದು, ಕೆಲವು ಸಂಬಂಧಗಳು ಜೀವನ ಪರ್ಯಂತ ಇರುತ್ತವೆ. ನನಗೆ ಗೊತ್ತಿದೆ ದರ್ಶನ್, ನೀನು ಯಾವಾಗಲೂ ನನ್ನ ಜೊತೆಗೆ ಇರುತ್ತೀಯ. ಹಾಗೆಯೇ ನನ್ನ ಜೀವನದಲ್ಲಿರುವುದಕ್ಕೆ ಧನ್ಯವಾದ ಎಂದು ರಕ್ಷಿತಾ ಪ್ರೇಮ್ ಬರೆದುಕೊಂಡಿದ್ದಾರೆ.
ಸೋಷಿಯಲ್ ಮೀಡಿಯಾದಲ್ಲಿ ಫೋಟೋ ಹಂಚಿಕೊಂಡ ರಕ್ಷಿತಾ ಆದರೆ ಈ ಕುರಿತು ರಕ್ಷಿತಾ ಪತಿ ಪ್ರೇಮ್ ಅಭಿಪ್ರಾಯವೇನು ಎಂಬ ಅನುಮಾನ ಮೂಡಿದೆ. ಒಟ್ಟಿನಲ್ಲಿ ದರ್ಶನ್ ಜೊತೆಗೆ ರಕ್ಷಿತಾ ಪ್ರೇಮ್ ಸ್ನೇಹ ಮತ್ತೆ ಚಿಗುರಿರುವುದು ಅಭಿಮಾನಿಗಳಲ್ಲಿ ಖುಷಿ ತಂದಿದೆ.