ಕಳೆದ ಏಳು ವರ್ಷಗಳಿಂದ ಕಲರ್ಸ್ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿದ್ದ ಲಕ್ಷ್ಮಿ ಬಾರಮ್ಮ ಧಾರಾವಾಹಿ ಕಳೆದ ತಿಂಗಳಷ್ಟೇ ಮುಕ್ತಾಯಗೊಂಡಿದೆ. ಅದರಲ್ಲಿ ನಾಯಕಿ ಶ್ರುತಿ ಅಲಿಯಾಸ್ ಗೊಂಬೆಯಾಗಿ ನಟಿಸಿ ಸಾಕಷ್ಟು ಜನಪ್ರಿಯತೆಯನ್ನು ಗಳಿಸಿದ ನೇಹಾ ಗೌಡ ಸತತ ಏಳು ವರ್ಷಗಳಿಂದ ಒಂದೇ ಪಾತ್ರದಲ್ಲಿ ಕಾಣಿಸಿಕೊಂಡಿದ್ದರು. ತಮ್ಮ ಮದುವೆಯ ಸಮಯದಲ್ಲಿ ನಟನೆಯಿಂದ ಸಣ್ಣ ಬ್ರೇಕ್ ತೆಗೆದುಕೊಂಡಿರುವ ಆಕೆ ಮತ್ತೆ ಗೊಂಬೆಯಾಗಿ ಪಾತ್ರಕ್ಕೆ ಜೀವ ತುಂಬಿದ್ದರು.
'ಮೂರುಗಂಟು' ಧಾರಾವಾಹಿ ಮೂಲಕ ತಮ್ಮ ಕನಸು ನನಸು ಮಾಡಿಕೊಂಡ ನೇಹಾ ಗೌಡ
ಲಕ್ಷ್ಮಿ ಬಾರಮ್ಮ ಧಾರಾವಾಹಿಯಲ್ಲಿ ನಾಯಕಿ ಶ್ರುತಿ ಆಲಿಯಾಸ್ ಗೊಂಬೆಯಾಗಿ ನಟಿಸಿ ಸಾಕಷ್ಟು ಜನಪ್ರಿಯತೆಯನ್ನು ಗಳಿಸಿದ್ದ ನೇಹಾ ಗೌಡ ಸತತ ಏಳು ವರ್ಷಗಳಿಂದ ಒಂದೇ ಪಾತ್ರದಲ್ಲಿ ಕಾಣಿಸಿಕೊಂಡಿದ್ದರು. ಆದರೆ ಇದೀಗ ಮೂರುಗಂಟು ಧಾರಾವಾಹಿಯಲ್ಲಿ ನಿರೂಪಕಿಯಾಗಿ ಕಾಣಿಸಿಕೊಳ್ಳಲಿದ್ದಾರೆ.
ಏಳು ವರುಷಗಳಿಂದ ಕಿರುತೆರೆ ವೀಕ್ಷಕರ ಪಾಲಿನ ಪ್ರೀತಿಯ ಗೊಂಬೆಯಾಗಿ ಮನೆಮಾತಾಗಿದ್ದ ಚೆಂದುಳ್ಳಿ ಚೆಲುಬೆ ನೇಹಾ ಗೌಡ ಧಾರಾವಾಹಿ ಮುಕ್ತಾಯಗೊಂಡಾಗ ಕೊಂಚ ಖುಷಿಯಾಗಿದ್ದು ನಿಜ! ಅದಕ್ಕೆ ಕಾರಣವೂ ಇದೆ. ಇನ್ನು ಮುಂದೆಯಾದ್ರೂ ಸ್ವಲ್ಪ ಆರಾಮವಾಗಿ ಸಮಯ ಕಳೆಯಬಹುದು ಎಂಬುದು ಅವರ ಆಲೋಚನೆಯಾಗಿತ್ತು. ಆದರೆ ಈ ಅವಕಾಶಗಳು ಸುಮ್ಮನೆ ಇರಲು ಬಿಡಬೇಕಲ್ಲ! ಕೆಲವು ಪ್ರಾಜೆಕ್ಟ್ ಗಳಿಂದ ಆಫರ್ ಗಳು ನೇಹಾರನ್ನು ಹುಡುಕಿಕೊಂಡು ಬರಲಾರಂಭಿಸಿದವು. ಇದೀಗ ಮೂರುಗಂಟು ಧಾರಾವಾಹಿಯಲ್ಲಿ ನಿರೂಪಕಿಯಾಗಿ ನೇಹಾ ಗೌಡ ಕಾಣಿಸುತ್ತಿದ್ದಾರೆ.
"ಮೂರುಗಂಟು ಧಾರಾವಾಹಿಯಲ್ಲಿ ಅತಿಥಿ ಪಾತ್ರ ಮಾಡುವ ಅವಕಾಶ ಬಂದಾಗ ಹಿಂದೆ ಮುಂದೆ ನೋಡದೆ ನಾನು ಒಪ್ಪಿಯೇ ಬಿಟ್ಟೆ. ಒಟ್ಟಾರೆಯಾಗಿ ಹತ್ತು ದಿನಗಳ ಕಾಲ ಶೂಟಿಂಗ್ ಇದೆ. ಅಂದ ಹಾಗೇ ಮೂರುಗಂಟುವಿನಲ್ಲಿ ನಾನು ನಿರೂಪಕಿಯಾಗಿ ಕಾಣಿಸಿಕೊಳ್ಳುತ್ತಿದ್ದೇನೆ. ಧಾರಾವಾಹಿಯಲ್ಲಿ ನಾನು ಸ್ವಯಂವರವೊಂದರ ನಿರೂಪಣೆ ಮಾಡಲಿದ್ದೇನೆ" ಎಂದು ವಿವರಿಸುತ್ತಾರೆ ನೇಹಾ ಗೌಡ. ಅಂದ ಹಾಗೇ ನೇಹಾ ಗೌಡರಿಗೆ ಮೊದಲಿನಿಂದಲೂ ನಿರೂಪಕಿಯಾಗಿ ಕಾಣಿಸಿಕೊಳ್ಳಬೇಕು ಎಂಬ ಮಹಾದಾಸೆ ಮೊದಲಿನಿಂದಲೂ ಇತ್ತು. 'ಮೂರುಗಂಟು' ಧಾರಾವಾಹಿ ಮೂಲಕ ಕನಸು ನನಸಾಯಿತು ಎಂದು ಸಂತಸದಿಂದ ಹೇಳುತ್ತಾರೆ ನೇಹಾ.