ಉದಯ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ 'ಸೇವಂತಿ' ಧಾರಾವಾಹಿಯ ನಾಯಕಿ ಸೇವಂತಿ ಆಗಿ ಅಭಿನಯಿಸುತ್ತಿದ್ದ ಮೇಘನಾ ಅವರು ಪಾತ್ರದಿಂದ ಹೊರಬಂದಿದ್ದಾರೆ. 'ಅರಗಿಣಿ' ಧಾರಾವಾಹಿಯ ಖುಷಿಯಾಗಿ ಕನ್ನಡ ಕಿರುತೆರೆಯಲ್ಲಿ ಛಾಪು ಮೂಡಿಸಿದ್ದ ಮೇಘನಾ ಸೇವಂತಿಯಾಗಿ ನಟಿಸುತ್ತಿದ್ದರು.
'ಸೇವಂತಿ' ಧಾರಾವಾಹಿಯಿಂದ ಹೊರಬಂದ ಕಾರಣ ಹೇಳಿದ ಮೇಘನಾ - Meghana came out from Sevanti role
ವೀಕ್ಷಕರ ಮೆಚ್ಚಿನ ಧಾರಾವಾಹಿ ಸೇವಂತಿ ಪಾತ್ರದಿಂದ ನಟಿ ಮೇಘನಾ ಹೊರಹೋಗಿದ್ದಾರೆ. ಇವರು ತೆಲುಗು ಧಾರಾವಾಹಿಗಳಲ್ಲಿ ಕೂಡಾ ನಟಿಸುತ್ತಿದ್ದು ಸಮಯ ಹೊಂದಿಸಿಕೊಳ್ಳಲು ಆಗದ ಕಾರಣ ಧಾರಾವಾಹಿಯಿಂದ ಹೊರಬಂದಿದ್ದಾರೆ ಎನ್ನಲಾಗಿದೆ.
'ಸೇವಂತಿ' ಧಾರಾವಾಹಿಯ ಜೊತೆಗೆ ತೆಲುಗು ಕಿರುತೆರೆಯಲ್ಲೂ ಮೇಘನಾ ಬ್ಯುಸಿ ಇದ್ದಾರೆ. ಇದೀಗ ಮೇಘನಾ ತಮ್ಮ ಪಾತ್ರದಿಂದ ಹೊರಬಂದಿದ್ದು ಅದಕ್ಕೆ ಕಾರಣ ಕೂಡಾ ತಿಳಿಸಿದ್ದಾರೆ. ಕೊರೊನಾ ಲಾಕ್ಡೌನ್ ನಂತರ ಪರಿಸ್ಥಿತಿ ಬದಲಾಗಿದೆ. ಹೈದರಾಬಾದ್ಗೆ ಶೂಟಿಂಗ್ಗಾಗಿ ತೆರಳಿದ್ದ ನಟಿಗೆ ಕ್ವಾರಂಟೈನ್ ವಿಧಿಸಲಾಗಿತ್ತು. ಹೀಗಾಗಿ ಕನ್ನಡ , ತೆಲುಗು ಧಾರಾವಾಹಿಗಳಿಗೆ ಸುಲಭವಾಗಿ ಸಮಯ ಹೊಂದಿಸಿಕೊಳ್ಳಲಾಗದ ಕಾರಣ ಸೇವಂತಿಯನ್ನು ಕೈಬಿಟ್ಟು ತೆಲುಗು ಸೀರಿಯಲ್ನಲ್ಲಿ ನಟಿಸುತ್ತಿದ್ದೇನೆ ಎಂದು ಹೇಳಿದ್ದಾರೆ ಮೇಘನಾ.
ನೆಮ್ಮದಿಯ ಜೀವನ ನಡೆಸುತ್ತಿದ್ದ ಅನಾಥ ಹುಡುಗಿಯನ್ನು ವಿಧಿ ಒಮ್ಮೆ ತಂದೆಯನ್ನು ಭೇಟಿ ಮಾಡುವಂತೆ ಮಾಡುತ್ತದೆ. ಆದರೆ ಅಪ್ಪ-ಮಗಳು ಇಂದು ಇಬ್ಬರಿಗೂ ತಿಳಿದಿರುವುದಿಲ್ಲ. ಇಬ್ಬರಿಗೂ ತಾವು ಅಪ್ಪ-ಮಗಳು ಎಂದು ತಿಳಿಯುತ್ತದೆಯೇ...ಮುಂದೆ ಕಥೆ ಏನು ಎಂಬುದು ಬಹಳ ರೋಚಕವಾಗಿತ್ತು. ಆದರೆ ಇದೀಗ ಮೇಘನಾ ಧಾರಾವಾಹಿಯಿಂದ ಹೊರ ಹೋಗಿದ್ದಾರೆ. ಮುಂದೆ ಏನು ಎಂಬುದನ್ನು ಕಾದು ನೋಡಬೇಕಿದೆ.