ಕರ್ನಾಟಕ

karnataka

ETV Bharat / sitara

ಕೀರ್ತಿಗೆ ಅಡ್ಡಗಾಲು ಹಾಕಿದ ಟ್ರೋಲಿಗರು.. ರಜನಿ ಚಿತ್ರದಿಂದ ಮಹಾನಟಿ ಔಟ್ - ಔಟ್

ರಜನಿ ಹೊಸ ಚಿತ್ರದಿಂದ ಕೀರ್ತಿ ಸುರೇಶ್​ ಹೊರಬಿದ್ದಿದ್ದಾರೆ. ಅವರ ಈ ದೊಡ್ಡ ಕನಸು ಕೈ ಬಿಟ್ಟು ಹೋಗಿರುವುದಕ್ಕೆ ಕಾರಣ ಏನು? ನೆಟ್ಟಿಜನ್​ಗಳೇ ಈ ಅವಕಾಶ ಕಿತ್ತುಕೊಂಡ್ರಾ ?

ರಜನಿ ಜತೆ ಕೀರ್ತಿ ಸುರೇಶ್ ( ಚಿತ್ರಕೃಪೆ : ಇನ್​ಸ್ಟಾಗ್ರಾಂ )

By

Published : Apr 3, 2019, 8:23 PM IST

ನಟಿ ಕೀರ್ತಿ ಸುರೇಶ್​​ ಅಭಿಮಾನಿಗಳಿಗೆ ಎರಡು ವಾರಗಳ ಹಿಂದೆಯಷ್ಟೇ ಗುಡ್ ನ್ಯೂಸ್ ಕೇಳಿ ಬಂದಿತ್ತು. ಆದರೆ, ಈ ಸಂತಸ ಬಹುದಿನಗಳ ವರೆಗೆ ಉಳಿದಿಲ್ಲ. ಸೂಪರ್​ ಸ್ಟಾರ್​ ಜತೆ ನಟಿಸಬೇಕಿದ್ದ ಮಹಾನಟಿಗೆ ಈಗ ನಿರಾಸೆಯಾದಂತಾಗಿದೆ.

ಸ್ಟಾರ್​ ಡೈರೆಕ್ಟರ್​ ಎ.ಆರ್​​.ಮುರುಗದಾಸ್​​ ಸೂಪರ್ ಸ್ಟಾರ್​ ರಜನಿಗೆ ಆ್ಯಕ್ಷನ್ ಕಟ್​ ಹೇಳುತ್ತಿದ್ದಾರೆ. ಈ ಮೆಗಾ ಪ್ರಾಜೆಕ್ಟ್​​ಗೆ ಲೇಡಿ ಬಾಂಡ್​ ನಯನತಾರಾ ಹಾಗೂ ಮಹಾನಟಿ ಖ್ಯಾತಿಯ ಕೀರ್ತಿ ಸುರೇಶ್​ ಸೆಲೆಕ್ಟ್ ಆಗಿದ್ದರು. ಈ ಇಬ್ಬರು ಬ್ಯೂಟಿಗಳು ರಜನಿ ಜತೆ ತೆರೆಮೇಲೆ ರೊಮ್ಯಾನ್ಸ್ ಮಾಡಲಿದ್ದಾರೆ ಅಂತಾ ಕೆಲ ವಾರಗಳ ಹಿಂದೆಯಷ್ಟೇ ಚಿತ್ರತಂಡ ಅಧಿಕೃತವಾಗಿ ಹೇಳಿಕೊಂಡಿತ್ತು. ತೆರೆಯ ಮೇಲೆ ಈ ಬಿಗ್ ಸ್ಟಾರ್ ಕಾಸ್ಟ್​ ಕಣ್ತುಂಬಿಕೊಳ್ಳಲು ಸಿನಿ ಪ್ರೇಮಿಗಳು ಕಾತುರರಾಗಿದ್ದರು. ಆದರೆ, ಈಗ ಚಿತ್ರತಂಡ ಕೀರ್ತಿ ಸುರೇಶ್​ಗೆ ಕೊಕ್​ ಕೊಟ್ಟಿದೆಯಂತೆ. ಅಷ್ಟಕ್ಕೂ ಚಿತ್ರದಿಂದ ಕೀರ್ತಿ ಕೈ ಬಿಟ್ಟಿದ್ದೇಕೆ ?

ಈ ಹಿಂದೆ ಚಂದ್ರಮುಖಿ ಚಿತ್ರದಲ್ಲಿ ತಲೈವಾ ಜತೆ ನಯನತಾರಾ ತೆರೆ ಹಂಚಿಕೊಂಡಿದ್ದಾರೆ. ಈ ಸಿನಿಮಾ ಅಮೋಘ ಪ್ರದರ್ಶನ ಕಂಡು ಬ್ಲಾಕ್ ಬಸ್ಟರ್ ಚಿತ್ರಗಳ ಸಾಲಿಗೆ ಸೇರಿತ್ತು. ಈಗಾಗಲೇ ಈ ಜೋಡಿಗಳ ಕೆಮಿಸ್ಟ್ರಿ ಒಪ್ಪಿಕೊಂಡಿರುವ ಸಿನಿರಸಿಕರು ಈಗ ಹೊಸ ಚಿತ್ರದಲ್ಲಿ ಇವರಿಬ್ಬರ ನಟನೆಗೆ ಗ್ರೀನ್ ಸಿಗ್ನಲ್ ನೀಡಿದ್ದಾರೆ. ಆದರೆ, ರಜನಿ ಎದುರು ಕೀರ್ತಿ ಸುರೇಶ್ ಅವರನ್ನು ಊಹಿಸಿಕೊಳ್ಳಲು ಅವರಿಂದ ಸಾಧ್ಯವಾಗುತ್ತಿಲ್ಲ. ಮಗಳ ವಯಸ್ಸಿನ ನಟಿ ಜತೆ ರಜನಿ ರೊಮ್ಯಾನ್ಸ್ ಮಾಡಿದರೆ ಚೆನ್ನಾಗಿ ಇರೋದಿಲ್ಲ ಅಂತಾ ಬೇಸರ ವ್ಯಕ್ತಪಡಿಸುತ್ತಿದ್ದಾರೆ. ಇದೇ ಕಾರಣಕ್ಕೆ ಚಿತ್ರತಂಡ ಕೀರ್ತಿ ಅವರನ್ನು ಕೈ ಬಿಟ್ಟಿದೆಯಂತೆ.

ಕೀರ್ತಿ ಬದಲಿಗೆ ಬೇರೆ ನಟಿಗೆ ಮಣಿ ಹಾಕುತ್ತಾರೆಯೇ ಇಲ್ಲವೇ ಈ ಪಾತ್ರವನ್ನು ತೆಗೆದು ಹಾಕಲಾಗುತ್ತೆದೆಯೋ ಎಂಬುದರ ಬಗ್ಗೆ ಚಿತ್ರತಂಡ ಇನ್ನೂ ಬಾಯಿಬಿಟ್ಟಿಲ್ಲ.

ABOUT THE AUTHOR

...view details