ಭಾನುವಾರ: ಕನ್ನಡ ಬಿಗ್‍ಬಾಸ್ ಸೀಸನ್ - 08 ದಿನದಿಂದ ದಿನಕ್ಕೆ ಕುತೂಹಲ ಮೂಡಿಸುತ್ತಿದ್ದು, ಈ ವಾರ ಮನೆಯ ಸದಸ್ಯರು ಕೂತಲ್ಲೇ ಎಲ್ಲರ ಸಮ್ಮುಖದಲ್ಲಿಯೇ ನಾಮಿನೇಷನ್ ಮಾಡಲು ಸೂಚಿಸಿದ್ದರು. ಆ ಪ್ರಕಾರ, ಶಮಂತ್, ಅರವಿಂದ್, ಪ್ರಶಾಂತ್ ಸಂಬರಗಿ, ದಿವ್ಯಾ ಸುರೇಶ್, ಶುಭಾ ಪೂಂಜಾ, ನಿಧಿ ಸುಬ್ಬಯ್ಯ ಮತ್ತು ರಾಜೀವ್ ಈ ಬಾರಿ ನಾಮಿನೇಟ್ ಆಗಿದ್ದಾರೆ.
ಕ್ಯಾಪ್ಟನ್ ಮಂಜು ರಾಜೀವ್ ಅವರನ್ನು ನೇರ ನಾಮಿನೇಟ್ ಮಾಡಿದರು. ಕಳೆದ ವಾರ ಎಲಿಮಿನೇಟ್ ಆದ ಶಂಕರ್ ಅಶ್ವಥ್ ನಿಧಿ ಸುಬ್ಬಯ್ಯ ಅವರನ್ನು ನೇರವಾಗಿ ನಾಮಿನೇಟ್ ಮಾಡಿದ್ದರು.
ಮನೆಯಲ್ಲಿ ಗುಂಪುಗಾರಿಕೆಗೆ ಪ್ಲಾನ್:
ಪ್ರಶಾಂತ್ ಸಂಬರಗಿ ಹಾಗೂ ಚಕ್ರವರ್ತಿ ಚಂದ್ರಚೂಡ್ ಗುಂಪುಗಾರಿಕೆಗೆ ಪ್ಲಾನ್ ಮಾಡಿದ್ದಾರೆ. ಬಿಗ್‍ಬಾಸ್ ಮನೆಯಲ್ಲಿ ತಾವು ಉಳಿಯಬೇಕಾದರೆ ತಮಗೆ ಕಾಂಪಿಟೇಷನ್ ನೀಡುತ್ತಿರುವ ಸ್ಪರ್ಧಿ ದಿವ್ಯಾ ಸುರೇಶ್ ಅವರನ್ನು ಸೋಲಿಸಬೇಕು ಎಂದು ಪ್ರಶಾಂತ್ ಪಣತೊಟ್ಟಿದ್ದಾರೆ. ಮಂಜು ಬಗ್ಗೆ ಚಂದ್ರಚೂಡ್ ಮೊದಲ ದಿನದಿಂದ ಬೇಸರ ಹೊಂದಿದ್ದು, ಮಂಜು ಕ್ರೂರ ಬುದ್ಧಿ ಹೊಂದಿದ್ದಾನೆ ಹಾಗೂ ರಾಜೀವ್ ವಾಟರ್ ಬಾಯ್. ಶಕ್ತಿ ಯಾರಿಗೆ ಹೆಚ್ಚಿದೆಯೋ ಅವರ ಕಡೆ ವಾಲುವ ಗುಣ ಅರವಿಂದ್ನದ್ದು ಎಂದಿದ್ದಾರೆ. ಅಷ್ಟೇ ಅಲ್ಲ ರಘು, ಶಮಂತ್, ವಿಶ್ವ ಅಂತರ್ಪಿಶಾಚಿಗಳು ಎಂದು ಚಂದ್ರಚೂಡ್ ಪ್ರಶಾಂತ್ಗೆ ಚುಚ್ಚಿದ್ದಾರೆ.