ಕರ್ನಾಟಕ

karnataka

ETV Bharat / sitara

ಎರಡನೇ ವಾರವೂ ಮೊದಲ ಸ್ಥಾನ ಕಾಯ್ದುಕೊಂಡ 'ಜೊತೆ ಜೊತೆಯಲಿ' - ಆರ್ಯವರ್ಧನ್

ಅನಿರುದ್ಧ್​ ಜತ್ಕರ್ ಹಾಗೂ ಮೇಘಶ್ರೀ ಪ್ರಮುಖ ಪಾತ್ರಗಳಲ್ಲಿ ನಟಿಸಿರುವ ‘ಜೊತೆ ಜೊತೆಯಲಿ’ ಧಾರಾವಾಹಿ ಈ ವಾರ ಕೂಡಾ ಮೊದಲ ಸ್ಥಾನ ಕಾಯ್ದುಕೊಳ್ಳುವ ಮೂಲ ವೀಕ್ಷಕರ ಮನಸ್ಸಿಗೆ ಮತ್ತಷ್ಟು ಹತ್ತಿರವಾಗಿದೆ.

'ಜೊತೆ ಜೊತೆಯಲಿ'

By

Published : Sep 27, 2019, 1:34 PM IST

ಜೀ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ ಧಾರಾವಾಹಿ 'ಜೊತೆ ಜೊತೆಯಲಿ' ಎರಡನೇ ವಾರವೂ ಮೊದಲ ಸ್ಥಾನ ಕಾಯ್ದುಕೊಂಡಿದೆ. ಆರಂಭವಾದ ಒಂದೇ ವಾರದಲ್ಲಿ ಸೂಪರ್ ಹಿಟ್‌, ಟಾಪ್ ರೇಟೆಡ್ ಹಾಗೂ ಮಹಿಳೆಯರು, ಯುವತಿಯರ ಅಚ್ಚುಮೆಚ್ಚಿನ ಧಾರಾವಾಹಿಯಾಗಿ ಖ್ಯಾತಿ ಗಳಿಸಿದೆ.

ಅನಿರುದ್ಧ್​ ಜತ್ಕರ್ , ಮೇಘಶ್ರೀ

ಕೋಟ್ಯಂತರ ರೂಪಾಯಿ ವ್ಯವಹಾರ ಮಾಡುವ ಆರ್ಯವರ್ಧನ್​​​​ಗೆ ಸಿಂಪಲ್‌ ಲೈಫ್ ಕಲಿಸಿಕೊಟ್ಟ ಅನು ಇಬ್ಬರೂ ಪ್ರೇಕ್ಷಕರ ಮನ ಗೆಲ್ಲುವಲ್ಲಿ ಯಶಸ್ವಿಯಾಗಿದ್ದಾರೆ. ಸರಳ ಜೀವನವನ್ನು ಎಂದಿಗೂ ಕಂಡಿರದ ಹಾಗೂ‌ ಎರಡು ರೂಪಾಯಿಗೆ ಇರುವ ಪ್ರಾಮುಖ್ಯತೆ ತೋರಿಸಿಕೊಟ್ಟ ಅನು, ವರ್ಧನ್ ಗ್ರೂಪ್​ಗೆ ಕೋಟ್ಯಂತರ ರೂಪಾಯಿ ಲಾಭ ತಂದುಕೊಟ್ಟಿದ್ದಾಳೆ. ಈ ವಾರ ಅನು, ವರ್ಧನ್ ಗ್ರೂಪ್ ಆಫ್ ಕಂಪನಿಯಲ್ಲಿ ಕೆಲಸ ಗಿಟ್ಟಿಸಿಕೊಂಡು, ನಿಧಾನವಾಗಿ ಆರ್ಯವರ್ಧನ್ ಮನಸ್ಸಿಗೆ ಹತ್ತಿರವಾಗುತ್ತಿದ್ದಾಳೆ. ಈ ಮಧ್ಯೆ ಅನಿರುದ್ಧ್ ಹಾಗೂ ಮೇಘಶ್ರೀಗೆ ಅಭಿಮಾನಿಗಳ ಸಂಖ್ಯೆ ದಿನೇ ದಿನೇ ಹೆಚ್ಚುತ್ತಿದೆ. ಅನಿರುದ್ಧ್ ತಮ್ಮ ಪಾತ್ರವನ್ನು ಅಚ್ಚುಕಟ್ಟಾಗಿ ಹಾಗೂ ಮುಗ್ಧವಾಗಿ ಅಭಿನಯಿಸುತ್ತಿರುವುದು ಧಾರಾವಾಹಿ‌ ಮೆಚ್ಚುಗೆಗೆ ಪಾತ್ರವಾಗಿದೆ.

'ಜೊತೆ ಜೊತೆಯಲಿ'

ಸಾಮಾಜಿಕ ಜಾಲತಾಣಗಳಲ್ಲಿ ಈ ಧಾರಾವಾಹಿಯ ತುಣುಕುಗಳನ್ನು ವೀಕ್ಷಿಸಲು ಜನ ಕಾತರರಾಗಿದ್ದಾರೆ. ಸಾಹಸಸಿಂಹ ವಿಷ್ಣುವರ್ಧನ್‌ ಅವರ ಮುದ್ದಿನ ಅಳಿಯ ಅನಿರುದ್ಧ್ ಅಭಿನಯದ ಮೊದಲನೇ ಧಾರಾವಾಹಿ ‘ಜೊತೆ ಜೊತೆಯಲಿ’ ಮೊದಲ ಹಾಗೂ ಎರಡನೇ ವಾರ ಸತತವಾಗಿ ಟಿಆರ್​​​​​​ಪಿಯಲ್ಲಿ ಟಾಪ್ ರೇಟೆಡ್ ಲಿಸ್ಟ್​​​​​​​​​​​​​​​​​​ನಲ್ಲಿ ಇರುವುದು ಧಾರಾವಾಹಿಗಳ ಲೋಕದಲ್ಲೇ ಇದು ಮೊದಲ ಬಾರಿ ಎನ್ನಬಹುದು. ಸೆಪ್ಟೆಂಬರ್ 9 ರಿಂದ ರಾತ್ರಿ 8.30 ಕ್ಕೆ ಈ ಧಾರಾವಾಹಿ ಪ್ರಸಾರವಾಗುತ್ತಿದೆ.

ABOUT THE AUTHOR

...view details