ಕಲರ್ಸ್ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿದ್ದ ರಾಧಾ - ರಮಣ ಧಾರಾವಾಹಿಯಲ್ಲಿ ಅವನಿ ಅಲಿಯಾಸ್ ರಾಣಿಯಾಗಿ ಅಭಿನಯಿಸಿರುವ ಆಶಿತಾ ಚಂದ್ರಪ್ಪ ದಾಂಪತ್ಯ ಜೀವನಕ್ಕೆ ಕಾಲಿರಿಸಿದ್ದಾರೆ.
ದಾಂಪತ್ಯ ಜೀವನಕ್ಕೆ ಕಾಲಿಟ್ಟ ಜೊತೆ ಜೊತೆಯಲಿ ನಟಿ ಆಶಿತಾ ಚಂದ್ರಪ್ಪ - ರೋಹನ್ ರಾಘವೇಂದ್ರ ಅವರನ್ನು ವಿವಾಹವಾದ ಆಶಿತಾ
ಬಿಗ್ಬಾಸ್ ಸೀಸನ್- 5ರ ಸ್ಪರ್ಧಿಯಾಗಿ ಕಾಣಿಸಿಕೊಂಡಿದ್ದ ನಟಿ ಆಶಿತಾ ರೋಹನ್ ರಾಘವೇಂದ್ರ ಎಂಬುವವರ ಜೊತೆ ಸಪ್ತಪದಿ ತುಳಿದಿದ್ದಾರೆ.
ಮನೋಜ್ಞ ನಟನೆಯ ಮೂಲಕ ಕಿರುತೆರೆಯಲ್ಲಿ ಮನೆ ಮಾತಾಗಿರುವ ಆಶಿತಾ ಚಂದ್ರಪ್ಪ, ರೋಹನ್ ರಾಘವೇಂದ್ರ ಎಂಬುವವರ ಜೊತೆ ಸಪ್ತಪದಿ ತುಳಿದಿದ್ದಾರೆ. ಅಂದ ಹಾಗೆ ರೋಹನ್ ರಾಘವೇಂದ್ರ ಅವರು ಏನು ಮಾಡುತ್ತಿದ್ದಾರೆ ಎಂಬುದರ ಬಗ್ಗೆ ಮಾಹಿತಿ ತಿಳಿದಿಲ್ಲ. ಬೆಂಗಳೂರಿನ ಅಂಗನಾ ಕೋರ್ಟ್‌ಯಾರ್ಡ್‌ನಲ್ಲಿ ಆಶಿತಾ ಚಂದ್ರಪ್ಪ ಮತ್ತು ರೋಹನ್ ಅವರ ಮದುವೆ ನಡೆದಿದ್ದು, ಕೊರೊನಾ ಕಾರಣದಿಂದಾಗಿ ಕೇವಲ ಕುಟುಂಬಸ್ಥರು ಮತ್ತು ಆಪ್ತರು ಮಾತ್ರವಷ್ಟೇ ವಿವಾಹ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.
ಜೊತೆಜೊತೆಯಲಿ ಧಾರಾವಾಹಿಯ ಶಾಲಿನಿ ಆಗಿ ಕಿರುತೆರೆಗೆ ಕಾಲಿಟ್ಟಿರುವ ಆಶಿತಾ ಮುಂದೆ ಸುಂದರಿ, ರಾಧಾ - ರಮಣ ಧಾರಾವಾಹಿಯಲ್ಲಿ ಅಭಿನಯಿಸಿದ್ದರು. ರಾಧಾ ರಮಣ ಧಾರಾವಾಹಿಯ ನಂತರ ಬಣ್ಣದ ಲೋಕದಿಂದ ದೂರವಿರುವ ಆಶಿತಾ, ಬಿಗ್ಬಾಸ್ ಸೀಸನ್- 5 ರ ಸ್ಪರ್ಧಿಯಾಗಿ ಕಾಣಿಸಿಕೊಂಡಿದ್ದರು.