ಹಾಲಿವುಡ್ನ 'ಅವೆಂಜರ್ಸ್ :ಎಂಡ್ ಗೇಮ್' ಭಾರತದಲ್ಲಿ ದಾಖಲೆಗಳ ಸರಮಾಲೆಗೆ ಕೊರಳೊಡ್ಡುತ್ತಿದೆ. ಬಾಕ್ಸ್ ಆಫೀಸ್ನಲ್ಲಿ ನಿರೀಕ್ಷೆಗೂ ಮೀರಿ ಹಣ ಬಾಚಿಕೊಂಡು ಗೆಲುವಿನ ನಗೆ ಬಿರುತ್ತಿದೆ.
ಬಾಹುಬಲಿ ರೆಕಾರ್ಡ್ಸ್ ಚಿಂದಿ ಮಾಡಿದ ಅವೆಂಜರ್ಸ್...ಬಾಲಿವುಡ್ಗೆ ಸಾಧ್ಯವಾಗದ ಸಾಧನೆ ಮಾಡಿದ ಹಾಲಿವುಡ್ - ಸರಮಾಲೆ
ಪ್ರಭಾಸ್ ನಟನೆಯ ಬಾಹುಬಲಿ ಚಿತ್ರ ಒಂದು ವಾರಕ್ಕೆ 247 ಕೋಟಿ ಗಳಿಸಿಕೊಂಡಿತ್ತು. ಇದಾದ ನಂತರ ತೆರೆಕಂಡ ಬಾಲಿವುಡ್ನ ಸುಲ್ತಾನ್ ( 229 ಕೋಟಿ), ಟೈಗರ್ ಜಿಂದಾ ಹೈ (206) ಹಾಗೂ ಸಂಜು ಚಿತ್ರ 202 ಕೋಟಿ ಬಾಚಿಕೊಂಡಿದ್ದರೂ ಕೂಡಾ, ಬಾಹುಬಲಿ ದಾಖಲೆ ಟಚ್ ಮಾಡಲು ಸಾಧ್ಯವಾಗಿರಲಿಲ್ಲ.
ಕಳೆದ ವಾರವಷ್ಟೆ ತೆರೆ ಕಂಡಿರುವ ಈ ಚಿತ್ರ ಎರಡೇ ದಿನದಲ್ಲಿ ನೂರು ಕೋಟಿ ಕ್ಲಬ್ ದಾಟಿತ್ತು. ಇದೀಗ ಯಶಸ್ವಿಯಾಗಿ ಒಂದು ವಾರ ಪೂರೈಸಿ, ಕಲೆಕ್ಷನ್ನಲ್ಲಿ ಬಾಹುಬಲಿ ಹಿಂದಿ ಆವತರಣಿಕೆ ಕ್ರಿಯೇಟ್ ಮಾಡಿದ್ದ ರೆಕಾರ್ಡ್ ಪುಡಿ ಪುಡಿ ಮಾಡಿದೆ. ಪ್ರಭಾಸ್ ನಟನೆಯ ಬಾಹುಬಲಿ ಚಿತ್ರ ಒಂದು ವಾರಕ್ಕೆ 247 ಕೋಟಿ ಗಳಿಸಿಕೊಂಡಿತ್ತು. ಇದಾದ ನಂತರ ತೆರೆಕಂಡ ಬಾಲಿವುಡ್ನ ಸುಲ್ತಾನ್ ( 229 ಕೋಟಿ), ಟೈಗರ್ ಜಿಂದಾ ಹೈ (206) ಹಾಗೂ ಸಂಜು ಚಿತ್ರ 202 ಕೋಟಿ ಬಾಚಿಕೊಂಡಿದ್ದರೂ ಕೂಡ, ಬಾಹುಬಲಿ ದಾಖಲೆ ಟಚ್ ಮಾಡಲು ಸಾಧ್ಯವಾಗಿರಲಿಲ್ಲ. ಆದರೆ, ಇದೀಗ ಅವೆಂಜರ್ಸ್ ಬರೋಬ್ಬರಿ ಗಲ್ಲಾ ಪೆಟ್ಟಿಗೆಯಲ್ಲಿ 260 ಕೋಟಿ ದೋಚಿ ಮೊದಲ ಸ್ಥಾನದಲ್ಲಿ ನಿಂತುಕೊಂಡಿದೆ.
ಇನ್ನು ಭಾರತದಲ್ಲಿ ಹಾಲಿವುಡ್ ಚಿತ್ರವೊಂದು ಈ ಪರಿ ಕಲೆಕ್ಷನ್ ಮಾಡಿದ್ದು ಇದೇ ಫಸ್ಟ್. ಇಡೀ ವಿಶ್ವಾದ್ಯಂತ ಇದುವರೆಗೆ 8 ಸಾವಿರ ಕೋಟಿ ಹಣ ಗಳಿಕೆ ಮಾಡಿರುವ ಅವೆಂಜರ್, ಗೆಲುವಿನ ನಾಗಾಲೋಟ 120ರ ಸ್ಪೀಡ್ನಲ್ಲಿ ಮುಂದುವರೆದಿದೆ.