ಇಂದೋರ್ :ಏಕ್ತಾ ಕಪೂರ್ ಅವರ ಹೊಸ ವೆಬ್ ಸರಣಿ 'ಟ್ರಿಪಲ್ ಎಕ್ಸ್ ಅನ್ಸೆನ್ಸಾರ್ಡ್ 2' ವಿರುದ್ಧ ಇಂದೋರ್ನ ಸಾಕೇತ್‌ನಗರದ ನಿವಾಸಿ ನೀರಜ್ ಯಾಗ್ನಿಕ್ ಅವರು ಅನ್ನಪೂರ್ಣ ಪೊಲೀಸ್ ಠಾಣೆಯಲ್ಲಿ ಎಫ್ಐಆರ್ ದಾಖಲಿಸಿದ್ದಾರೆ.
ಭಾರತೀಯ ಸೇನೆಯ ಸಮವಸ್ತ್ರವನ್ನು ಹರಿದುಹಾಕುವುದು, ಅಸಭ್ಯ ವಿಷಯಗಳು ಮತ್ತು ಧಾರ್ಮಿಕ ಭಾವನೆಗಳನ್ನು ಘಾಸಿಗೊಳಿಸುವ ದೃಶ್ಯಕ್ಕೆ ಸಂಬಂಧಿಸಿದಂತೆ ಪೊಲೀಸರು ಎಫ್‌ಐಆರ್ ದಾಖಲಿಸಿದ್ದಾರೆ.
ನಿರ್ಮಾಪಕಿ ಏಕ್ತಾ ಕಪೂರ್, ಸರಣಿಯ ನಿರ್ದೇಶಕರಾದ ಪಂಖುರಿ ರೊಡ್ರಿಗಸ್, ಬರಹಗಾರರಾದ ಜೆಸ್ಸಿಕಾ ಖುರಾನಾ ಮತ್ತು ತಂಡದ ಸದಸ್ಯರ ವಿರುದ್ಧ ಎಂಬ್ಲೆಮ್ ಕಾಯ್ದೆಯ ಸೆಕ್ಷನ್ 294, 298, 34, ಐಟಿ ಸೆಕ್ಷನ್ 67, 68 ಮತ್ತು ಸೆಕ್ಷನ್ 3ರ ಅಡಿ ದೂರು ದಾಖಲಿಸಿದ್ದಾರೆ.
ಇತ್ತೀಚೆಗೆ ಬಿಡುಗಡೆಯಾದ ವೆಬ್ ಸರಣಿ 'ಟ್ರಿಪಲ್ ಎಕ್ಸ್ ಅನ್ಸೆನ್ಸಾರ್ಡ್ 2' ಕುರಿತು ಬಿಜೆಪಿ ಶಾಸಕ ಟಿ ರಾಜಾ ಸಿಂಗ್, ಯೂಟ್ಯೂಬರ್ ಹಿಂದೂಸ್ತಾನಿ ಭಾಉ ಸೇರಿ ಹಲವರು ವಿರೋಧ ವ್ಯಕ್ತಪಡಿಸಿದ್ದರು.
ಮಾಜಿ ಸೇನಾ ಸಿಬ್ಬಂದಿಯೊಬ್ಬರು ಕೂಡಾ ಗುರುಗಾಂವ್ನ ಪಾಲಂ ವಿಹಾರ್ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದು, ವೆಬ್ ಸರಣಿಯ ಅನುಚಿತ ಮತ್ತು ಅಶ್ಲೀಲ ವಿಷಯದ ಬಗ್ಗೆ ಆಕ್ಷೇಪ ವ್ಯಕ್ತಪಡಿಸಿದ್ದಾರೆ.