ಕನ್ನಡ ಕಿರುತೆರೆ ಲೋಕದಲ್ಲಿ ಸದ್ಯಕ್ಕೆ 'ಜೊತೆ ಜೊತೆಯಲಿ' ಧಾರಾವಾಹಿಯ ಆರ್ಯವರ್ಧನ್ ಅವರದ್ದೇ ಮಾತು. ಹಲವು ಸಮಾಜಮುಖಿ ಕೆಲಸಗಳನ್ನು ಚಿತ್ರಕಥೆಯಲ್ಲಿ ಅಳವಡಿಸಿಕೊಳ್ಳಲಾಗಿದ್ದು, ಇದು ಎಲ್ಲರ ಮೆಚ್ಚುಗೆಗೆ ಪಾತ್ರವಾಗಿದೆ. ಕೇವಲ ಕರ್ನಾಟಕದಲ್ಲಿ ಮಾತ್ರವಲ್ಲ, ವಿದೇಶದಲ್ಲಿರುವ ಕನ್ನಡ ಪ್ರೇಕ್ಷಕರು ಕೂಡಾ ಆರ್ಯವರ್ಧನ್ ಅವರ ಕೆಲಸಕ್ಕೆ ಮೆಚ್ಚುಗೆಯ ಮಾತನಾಡಿದ್ದಾರೆ.
'ಜೊತೆ ಜೊತೆಯಲಿ' ಆರ್ಯವರ್ಧನ್ ಸಮಾಜಮುಖಿ ಕೆಲಸಕ್ಕೆ ಜೈ ಹೋ ಎಂದ ಅಭಿಮಾನಿಗಳು..! - ಜೊತೆ ಜೊತೆಯಲಿ ಧಾರಾವಾಹಿಗೆ ವೀಕ್ಷಕರ ಮೆಚ್ಚುಗೆ
ಪರಿಸರ ಕಾಳಜಿ, ಸ್ವಚ್ಛತೆಯ ಜೊತೆ ಜೊತೆಗೆ ಈ ಧಾರಾವಾಹಿಯಲ್ಲಿ ಕಾರ್ಮಿಕರ ಪರವಾಗಿಯೂ ಹಲವು ಸಂಗತಿಗಳನ್ನು ತಿಳಿಸಿರುವುದು ಮತ್ತೊಂದು ವಿಶೇಷ. ಕಾರ್ಮಿಕರನ್ನು ಗೌರವದಿಂದ ಕಾಣುವಂತೆ ಆರ್ಯವರ್ಧನ್ ಹೇಳಿದ ಮಾತು, ಕಾರ್ಮಿಕರ ವಲಯದಲ್ಲೂ ಭಾರೀ ಮೆಚ್ಚುಗೆ ವ್ಯಕ್ತವಾಗಿದೆ.
ಪರಿಸರ ಕಾಳಜಿ, ಸ್ವಚ್ಛತೆಯ ಜೊತೆ ಜೊತೆಗೆ ಈ ಧಾರಾವಾಹಿಯಲ್ಲಿ ಕಾರ್ಮಿಕರ ಪರವಾಗಿಯೂ ಹಲವು ಸಂಗತಿಗಳನ್ನು ತಿಳಿಸಿರುವುದು ಮತ್ತೊಂದು ವಿಶೇಷ. ಕಾರ್ಮಿಕರನ್ನು ಗೌರವದಿಂದ ಕಾಣುವಂತೆ ಆರ್ಯವರ್ಧನ್ ಹೇಳಿದ ಮಾತು, ಕಾರ್ಮಿಕರ ವಲಯದಲ್ಲೂ ಭಾರೀ ಮೆಚ್ಚುಗೆ ವ್ಯಕ್ತವಾಗಿದೆ. ಈಗ ಪ್ರಸಾರ ಆಗುತ್ತಿರುವ ಎಪಿಸೋಡ್‌ನಲ್ಲಿ ನಾಡಿನ ರೈತರಿಗೆ ಗೌರವ ಸಲ್ಲಿಸುವಂತಹ ಸನ್ನಿವೇಶಗಳನ್ನು ಅಳವಡಿಸಿಕೊಳ್ಳುವ ಮೂಲಕ ಅನ್ನದಾತರ ಆತ್ಮಸ್ಥೈರ್ಯವನ್ನು ಹೆಚ್ಚಿಸುವ ಕೆಲಸ ಮಾಡುತ್ತಿದೆ ವಾಹಿನಿ. ರೈತರು ದೇಶದ ನಿಜವಾದ ಬೆನ್ನೆಲುಬು. ಅನ್ನದಾತನ ಶ್ರಮಕ್ಕೆ ಬೆಲೆ ಕೊಡಬೇಕು ಎಂದು ಹೇಳುವ ಮೂಲಕ ರೈತರ ಬೆನ್ನಿಗೆ ನಿಂತಿದ್ದಾರೆ ಆರ್ಯವರ್ಧನ್ ಅಲಿಯಾಸ್ ಅನಿರುಧ್ ಜತ್ಕರ್.
ಮಣ್ಣಿನ ಮಹತ್ವ, ರೈತರ ಶ್ರಮ, ಅನ್ನದಾತನ ಕನಸು ಹೀಗೆ ನಾನಾ ವಿಷಯಗಳನ್ನು ಧಾರಾವಾಹಿಯಲ್ಲಿ ಹೇಳುವ ಪ್ರಯತ್ನಕ್ಕೆ ಪ್ರೇಕ್ಷಕರು ಜೈ ಹೋ ಎಂದಿದ್ದಾರೆ. ಮಹಾನಗರಗಳಲ್ಲಿ ಇಂದು ಕಸದ ನಿರ್ವಹಣೆ ದೊಡ್ಡ ಸಮಸ್ಯೆಯಾಗಿ ತಲೆದೋರಿದೆ. ಕಸವನ್ನು ಪ್ರತ್ಯೇಕವಾಗಿ ವಿಂಗಡಿಸದೆ ಹಾಕುವುದರಿಂದ ನಾನಾ ರೀತಿಯ ತೊಂದರೆಗಳು ಎದುರಾಗುತ್ತಿವೆ. ಈ ಸಮಸ್ಯೆಯನ್ನು ಧಾರಾವಾಹಿ ಕಥೆಯಲ್ಲಿ ಬಳಸಿಕೊಂಡು ಎಪಿಸೋಡ್ ಮಾಡಲಾಯಿತು. ಕಸ ನಿರ್ವಹಣೆ, ಪರಿಸರ ಸ್ವಚ್ಛತೆ ಮತ್ತು ಕಸ ವಿಂಗಡನೆ ಕುರಿತು ಆರ್ಯವರ್ಧನ್ ಮೂಲಕ ತಿಳಿಸಲಾಯಿತು. ಈ ಪ್ರಯೋಗಕ್ಕೆ ಅಪಾರ ಜನಮೆಚ್ಚುಗೆ ವ್ಯಕ್ತವಾಗಿದೆ. ಮೈಸೂರು ಸೇರಿದಂತೆ ಹಲವು ಮಹಾನಗರ ಪಾಲಿಕೆಗಳ ಅಧಿಕಾರಿಗಳು ಕೂಡಾ ಧಾರಾವಾಹಿಯ ಕಾರ್ಯವನ್ನು ಶ್ಲಾಘಿಸಿದ್ದಾರೆ. ಪ್ರೇಕ್ಷಕರು ಕೂಡಾ ಆರ್ಯವರ್ಧನ್ ಮಾತನ್ನು ಚಾಚೂ ತಪ್ಪದೇ ಪಾಲಿಸುತ್ತಿದ್ದಾರೆ. ಜೀ ಕನ್ನಡ ವಾಹಿನಿಯಲ್ಲಿ ಪ್ರತಿ ಸೋಮವಾರದಿಂದ ಶುಕ್ರವಾದರವರೆಗೆ ರಾತ್ರಿ 8.30ಕ್ಕೆ 'ಜೊತೆ ಜೊತೆಯಲಿ' ಧಾರಾವಾಹಿ ಪ್ರಸಾರವಾಗುತ್ತಿದೆ.