ಕರ್ನಾಟಕ

karnataka

ETV Bharat / sitara

ಕಲಾವಿದರಿಗೆ ಅವಕಾಶ ಕುರಿತ ಮಾಹಿತಿ ನೀಡಲು ಬಂದು ಡಯಲ್​ ಆರ್ಟಿಸ್ಟ್​ ಆ್ಯಪ್​ - ಚಿತ್ರರಂಗ

ಹೊಸ ಅವಕಾಶಗಳನ್ನು ಹುಡುಕುವ ಚಿತ್ರರಂಗದಲ್ಲಿನ ಕಲಾವಿದರಿಗೆ, ತಂತ್ರಜ್ಞನರಿಗೆ ಡಯಲ್​ ಆ್ಯಪ್​ ಎನ್ನುವ ಮಾಹಿತಿ ನೀಡುವ ಆ್ಯಪ್​ ಅನ್ನು ಅಭಿವೃದ್ಧಿ ಪಡಿಸಲಾಗಿದೆ.

bangalore
ಡಯಲ್​ ಆ್ಯಪ್​ ಬಿಡುಗಡೆ ಮಾಡಿದ ನಟ ಶಶಿಕುಮಾರ್

By

Published : Dec 15, 2019, 9:06 AM IST

ಚಿತ್ರರಂಗದಲ್ಲಿ ಮಿಂಚಬೇಕು ಎಂದು ಅದೆಷ್ಟೋ ಜನ ಅವಕಾಶಗಳ ಹುಡುಕುತ್ತಾ ಗಾಂಧಿನಗರಕ್ಕೆ ಬರುತ್ತಾರೆ. ವರ್ಷದಲ್ಲಿ ಇನ್ನೂರಕ್ಕೂ ಹೆಚ್ಚು ಚಿತ್ರಗಳು ಬರುತ್ತಿದ್ದರೂ ಕಮಾಹಿತಿ ಸಿಗದೆ ಕೊರಗುವ ಕಲಾವಿದರ ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚುತ್ತಲೆ ಇದೆ.

ಡಯಲ್​ ಆ್ಯಪ್​ ಬಿಡುಗಡೆ ಮಾಡಿದ ನಟ ಶಶಿಕುಮಾರ್

ಅದರೆ ಈಗ ಅವಕಾಶಗಳನ್ನು ಹುಡುಕುವ ಹೊಸಕಲಾವಿದರಿಗೆ ಹಾಗೂ ಈಗಾಗಲೇ ಚಿತ್ರರಂಗದಲ್ಲಿ ಗುರುತಿಸಿಕೊಂಡಿರುವ ಕಲಾವಿದರಿಗೆ, ತಂತ್ರಜ್ಞರ ನೆರವಿಗೆ ಡಯಲ್ ಆರ್ಟಿಸ್ಟ್ ಎಂಬ ಆ್ಯಪ್ ಒಂದನ್ನು ಬಿಡುಗಡೆಮಾಡಲಾಗಿದೆ. ಹೌದು ಪ್ರತಿನಿತ್ಯ ತಮ್ಮ ಫೋಟೋಗಳ ಹಿಡಿದು ನಿರ್ದೇಶಕ, ನಿರ್ಮಾಪಕರ ಆಫೀಸ್ ಮೆಟ್ಟಿಲು ಹತ್ತಿ ಇಳಿಯುವವರಿಗೆ ಈ ಡಯಲ್ ಆರ್ಟಿಸ್ಟ್ ಎಂಬ ಆ್ಯಪ್ ನೆರವು ಸಹಕರಿಸಲಿದ್ದು, ಈ ಆ್ಯಪ್​ನಲ್ಲಿ ಕಲಾವಿದರು ,ತಂತ್ರಜ್ಞರು ತಮ್ಮ ಮಾಹಿತಿ ಹಂಚಿಕೊಂಡರೆ , ಅವರಿಗೆ ಅವಕಾಶ ಕಲ್ಪಿಸಲು ಸಹಾಯ ಮಾಡುವ ನಿಟ್ಟಿನಲ್ಲಿ ಡಯಲ್ ಆರ್ಟಿಸ್ಟ್ ಆ್ಯಪ್​ ಆರಂಭಗೊಂಡಿದೆ.

ಡಯಲ್ ಆರ್ಟಿಸ್ಟ್ ‌ಆ್ಯಪ್ ಅನ್ನು ನಟ ಶಶಿಕುಮಾರ್ , ವಾಣಿಜ್ಯ ಮಂಡಳಿ ಉಪಾಧ್ಯಕ್ಷಉಮೇಶ್ ಬಣಕಾರ್, ಹಿರಿಯ ಹಾಸ್ಯನಟ ಡಿಂಗ್ರಿ ನಾಗರಾಜ್ ಹಾಗೂ ನಿರ್ದೇಶಕ ಗುರುದೇಶ್ ಪಾಂಡೆ ಅನಾವರಣ ಮಾಡಿದರು. ಇನ್ನು ಕಲಾವಿದರ ಹುಡುಕುವ ಚಿತ್ರತಂಡಕ್ಕೂ ಹಾಗೂ ಅವಕಾಶಗಳ ಹಂಟಿಂಗ್‌ ಮಾಡುವ ಕಲಾವಿದರಿಗೂ ಬ್ರಿಡ್ಜ್ ಆಗಿ ಕೆಲಸ ಮಾಡುವ ಈ ಆ್ಯಪ್ ಅನ್ನು ರವಿ ಎಂಬುವವರು ಕಳೆದ ಒಂದು ವರ್ಷದ ಹಿಂದೆ ಅರಂಭಿಸಿದ್ದು ಈಗ ಆ್ಯಪ್ ರೂಪಕ್ಕೆ ತಂದಿದ್ದಾರೆ.

ಕಲಾವಿದರು ಆ್ಯಪ್​ಗೆ ಫೊಟೋಶೂಟ್ ಮಾಡಿಸಿದ ಫೋಟೋ ಅಪ್ಲೋಡ್ ಮಾಡಬೇಕಿದೆ. ಅದಕ್ಕಾಗಿ ಕೇವಲ ಮೂರು ಸಾವಿರ ರೂಪಾಯಿಯಲ್ಲಿ ಮೇಕಪ್ ಸಹಿತ ಫೋಟೋ ಶೂಟ್ ಕೂಡ ಇವರೇ ಮಾಡಿಕೊಡಲಿದ್ದಾರೆ. ಅಂದ ಹಾಗೆ ಆ್ಯಪ್​ಗೆ ಒಂದು ಫೊಟೋ ಅಪ್ಲೋಡ್ ಮಾಡುವುದು ಫ್ರೀ, ಅದಕ್ಕಿಂತ ಹೆಚ್ಚು ಫೋಟೋ ಗಳ ಅಪ್ಲೋಡ್ ಮಾಡಿದ್ರೆ ಅದಕ್ಕೆ ಅಪ್ಲೋಡ್ ಮಾಡುವವರು 2,500 ರೂಪಾಯಿ ಪಾವತಿ ಮಾಡಬೇಕು.

ABOUT THE AUTHOR

...view details