ಕರ್ನಾಟಕ

karnataka

ETV Bharat / sitara

ಖಾಸಗಿ ವಾಹಿನಿಯ ಕಾರ್ಯಕ್ರಮ ಆಯೋಜಕರ ಮೇಲೆ ದೂರು ದಾಖಲು - Complaint on Private channel program

ಕೊರೊನಾ ನಿಯಮಗಳನ್ನು ಗಾಳಿಗೆ ತೂರಿದ ಆರೋಪದ ಮೇಲೆ ಖಾಸಗಿ ವಾಹಿನಿಯ ಕಾರ್ಯಕ್ರಮದ ಆಯೋಜಕರ ಮೇಲೆ ಬೆಂಗಳೂರು ಬ್ಯಾಟರಾಯನಪುರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.

Sa re ga ma pa Program
ಸರಿಗಮಪ

By

Published : Dec 21, 2020, 11:51 AM IST

ಬೆಂಗಳೂರು:ಕೊರೊನಾ ಸಮಸ್ಯೆ ಇಂದಿಗೂ ಕಾಡುತ್ತಿದ್ದು ಕೇಂದ್ರ ಹಾಗೂ ರಾಜ್ಯ ಸರ್ಕಾರ ಜನರನ್ನು ಕೊರೊನಾದಿಂದ ತಮ್ಮನ್ನು ತಾವು ರಕ್ಷಿಸಿಕೊಳ್ಳುವ ನಿಟ್ಟಿನಲ್ಲಿ ಕೆಲವೊಂದು ನಿಯಮಗಳನ್ನು ಜಾರಿ ತಂದಿದೆ. ಆದರೆ ಕೆಲವೆಡೆ ಕೊರೊನಾ ನಿಯಮಗಳನ್ನು ಗಾಳಿಗೆ ತೂರಲಾಗುತ್ತಿದೆ. ಇದಕ್ಕೆ ಸಂಬಂಧಿಸಿದಂತೆ ಖಾಸಗಿ ಚಾನೆಲ್ ಆಯೋಜಕರ ಮೇಲೆ ದೂರು ದಾಖಲಾಗಿದೆ.

ಫೋಟೋ ಕೃಪೆ: ಜೀ ಕನ್ನಡ

ಇದನ್ನೂ ಓದಿ:ರಿಯಲ್ ಹೀರೋ ಸೋನು ಸೂದ್​​​ಗಾಗಿ ಗುಡಿ ಕಟ್ಟಿದ ತೆಲಂಗಾಣ ಜನತೆ...!

ಕೊರೊನಾ ನಿಯಮಗಳನ್ನು ಉಲ್ಲಂಘಿಸಿದ ಕಾರಣ ಖಾಸಗಿ ವಾಹಿನಿಯ ಕಾರ್ಯಕ್ರಮ ಆಯೋಜಕರ ಮೇಲೆ ಬೆಂಗಳೂರಿನ ಬ್ಯಾಟರಾಯನಪುರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ. ಫೈನಲ್ ಕಾರ್ಯಕ್ರಮದ ವೇಳೆ ಕೊರೊನಾ ನಿಯಮ ಉಲ್ಲಂಘನೆಯಾಗಿದೆ. ಮಾಸ್ಕ್ ಧರಿಸದೆ, ಸಾಮಾಜಿಕ ಅಂತರ ಕೂಡಾ ಕಾಯ್ದುಕೊಳ್ಳದೆ ಇರುವ ಕಾರಣ NDMA ಆ್ಯಕ್ಟ್ ಅಡಿಯಲ್ಲಿ ಬ್ಯಾಟರಾಯನಪುರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ. NDMA ಅಡಿ ಕೇಸ್ ದಾಖಲು ಹಿನ್ನೆಲೆ ಈ ಬಗ್ಗೆ ವರದಿಯನ್ನು ಕೋರ್ಟ್​ಗೆ ನೀಡಲಾಗಿದೆ. ಕಾರ್ಯಕ್ರಮದ ಆಯೋಜಕರು ಫೈನಲ್​​​​​​​​​​​​​​​​ಗೆ ಕೇವಲ 100 ಜನರಿಗೆ ಮಾತ್ರ ಅವಕಾಶ ಕೇಳಿ ಪೊಲೀಸರ ಬಳಿ ಅನುಮತಿ ಪಡೆದಿದ್ದರು. ಈ ವೇಳೆ ಪೊಲೀಸರು ಅನುಮತಿ ನೀಡಿ ಕೋವಿಡ್ ನಿಯಮಗಳನ್ನು ಪಾಲಿಸುವಂತೆ ಷರತ್ತು ವಿಧಿಸಿದ್ದರು. ಆದರೆ ಪೊಲೀಸರು ವಿಧಿಸಿದ್ದ ನಿಯಮಗಳನ್ನು ಗಾಳಿಗೆ ತೂರಿದ ಕಾರಣ ಕಾರ್ಯಕ್ರಮ ಆಯೋಜಕರ ಮೇಲೆ ದೂರು ದಾಖಲಾಗಿದೆ.

ABOUT THE AUTHOR

...view details