ಕರ್ನಾಟಕ

karnataka

ETV Bharat / sitara

ಆಗಸ್ಟ್​ ಆರಂಭಕ್ಕೆ ಕುರುಕ್ಷೇತ್ರ 'ದರ್ಶನ'; ಅಂತ್ಯಕ್ಕೆ ಕಿಚ್ಚನ 'ಪೈಲ್ವಾನ್'! - Pailwan

ಬಹುನಿರೀಕ್ಷಿತ ಪೌರಾಣಿಕ ಕಥಾನಕ 'ಮುನಿರತ್ನ ಕುರುಕ್ಷೇತ್ರ' ಹಾಗೂ ಕಿಚ್ಚ ಸುದೀಪ್​ ನಟನೆಯ ‘ಪೈಲ್ವಾನ್’ ಚಿತ್ರ ಆಗಸ್ಟ್‌ನಲ್ಲಿ ಚಿತ್ರಮಂದಿರಗಳಿಗೆ ಬರುವ ನಿರೀಕ್ಷೆ ಇದೆ. ಇವುಗಳ ಜೊತೆಗೆ ಪರಭಾಷಾ ಸಿನಿಮಾಗಳು ಸಹ ಇದೇ (ಆಗಸ್ಟ್​) ತಿಂಗಳಲ್ಲಿ ತೆರೆಗೆ ಬರಲು ತುದಿಗಾಲ ಮೇಲೆ ನಿಂತಿವೆ.

ಬಹುನಿರೀಕ್ಷಿತ ಚಿತ್ರಗಳು

By

Published : Jul 20, 2019, 10:11 AM IST

Updated : Jul 20, 2019, 10:21 AM IST

ಚಾಲೆಂಜಿಂಗ್​​ಸ್ಟಾರ್​​ ದರ್ಶನ್​​ ಅಭಿನಯದ ಬಹುನಿರೀಕ್ಷಿತ ಪೌರಾಣಿಕ ಕಥಾನಕ ‘ಮುನಿರತ್ನ ಕುರುಕ್ಷೇತ್ರ’ ಇದೇ ಆ.​ 2 ರಂದು ಚಿತ್ರಮಂದಿರಗಗಳಿಗೆ ಲಗ್ಗೆ ಇಡುವ ನಿರೀಕ್ಷೆ ಇದೆ. ಬಿಗ್​ ಬಜೆಟ್​ ಚಿತ್ರ ಇದಾಗಿದ್ದು ದೇಶದ ಐದು ಭಾಷೆಗಳಲ್ಲಿ ಬಿಡುಗಡೆಯಾಗಲಿದೆ ಎಂದು ಚಿತ್ರ ತಂಡ ತಿಳಿಸಿದೆ.

ದರ್ಶನ್​

ತಿಂಗಳ ಕೊನೆಯಲ್ಲಿ (ಆ. 29 ರಂದು) ಕಿಚ್ಚ ಸುದೀಪ್​ ನಟನೆಯ ‘ಪೈಲ್ವಾನ್’ ಚಿತ್ರ ಸಹ ಥಿಯೇಟರ್​ಗೆ ಬರಲಿದೆ ಎಂಬ ಸುದ್ದಿ ಸಹ ಹರಿದಾಡುತ್ತಿದೆ. ಸ್ಯಾಂಡಲ್​ವುಡ್​ನಲ್ಲಿ ಒಂದು ಪೌರಾಣಿಕ ಮತ್ತೊಂದು ಚಿತ್ರ ಮತ್ತೊಂದು ಕಾಲ್ಪನಿಕ ಕಥಾಹಂದರವುಳ್ಳ ಚಿತ್ರ ಇವೆರಡೂ ಆಗಸ್ಟ್‌ನಲ್ಲಿಯೇ ಬಿಡುಗಡೆಗೊಳ್ಳುತ್ತಿರುವುದಕ್ಕೆ ಅಭಿಮಾನಿಗಳು ಸಖತ್​ ಖುಷಿಯಲ್ಲಿದ್ದಾರೆ.

ಸುದೀಪ್​

ಐದು ಭಾಷೆಗಳಲ್ಲಿ ಸ್ಯಾಂಡಲ್​ವುಡ್​ನ ಇಬ್ಬರು ಘಟಾನುಘಟಿ ನಟರುಗಳ ಸಿನಿಮಾಗಳು ಒಂದೇ ತಿಂಗಳಿನಲ್ಲಿ ಬಿಡುಗಡೆ ಆಗುತ್ತಿರುವುದು ಅಭಿಮಾನಿಗಳು ಭಾರಿ ನಿರೀಕ್ಷೆಯಲ್ಲಿದ್ದಾರೆ. ದೊಡ್ಡ ಬಜೆಟ್​ನಲ್ಲಿ​ ತಯಾರಾದ ಪರಭಾಷಾ ಸಿನಿಮಾಗಳು ಸಹ ಇದೇ (ಆಗಸ್ಟ್​) ತಿಂಗಳಲ್ಲಿ ತೆರೆಗೆ ಬರಲು ಉತ್ಸುಕವಾಗಿವೆ. ಒಂದು ರಿಲೀಫ್​ ಏನಪ್ಪಾ ಅಂದ್ರೆ, ಆ. 15 ಕ್ಕೆ ಬಾಲಿವುಡ್​ ಕಿಲಾಡಿ ಅಕ್ಷಯ್ ಕುಮಾರ್ ನಟನೆಯ ‘ಮಂಗಲ್ ಮಿಷನ್’ ಬಿಡುಗಡೆಯಾಗುತ್ತಿದ್ದರೆ, ಪ್ರಭಾಸ್ ಅಭಿನಯದ ‘ಸಾಹೋ’ ಬಿಡುಗಡೆಗೆ ದಿನಾಂಕವನ್ನು ಮುಂದೂಡಲಾಗಿದೆ.

ಪ್ರಭಾಸ್​

ಆಗಸ್ಟ್​ನಲ್ಲಿ ಸಾಲು ಸಾಲು ಹಬ್ಬಗಳಿವೆ. ಆಗಸ್ಟ್​ ಶ್ರಾವಣ ಮಾಸ. ಸಾಲದೆಂಬಂತೆ ಭೀಮನ ಅಮಾವಾಸ್ಯೆ, ನಾಗರ ಪಂಚಮಿ, ವರಮಹಾಲಕ್ಷ್ಮಿ, ಕೃಷ್ಣ ಜನ್ಮಾಷ್ಟಮಿ, ಸೆಪ್ಟೆಂಬರ್​​ ಮೊದಲ ವಾರ ಚೌತಿ ಹಬ್ಬ, ಗೌರಿ ಹಬ್ಬಗಳು ಸಹ ಇವೆ. ಇವೆಲ್ಲದರ ನಡುವೆ ಈ ಬಿಗ್​ ಬಜೆಟ್​ ಚಿತ್ರಗಳು ತೆರೆಗೆ ಬರಲು ತಯಾರಿ ನಡೆಸಿವೆ.

ಅಕ್ಷಯ್ ಕುಮಾರ್

ದರ್ಶನ್ ಹಾಗೂ ಸುದೀಪ್ ಸಿನಿಮಾಗಳು ಬಿಡುಗಡೆ ಅಂದ್ಮೇಲೆ ಇನ್ನಿತರ ಕೆಲವು ಸಿನಿಮಾಗಳು ಪಕ್ಕಕ್ಕೆ ಸರಿದಿರುತ್ತವೆ. ರಕ್ಷಿತ್ ಶೆಟ್ಟಿ ಅಭಿನಯದ ‘ಅವನೇ ಶ್ರೀಮನ್ನಾರಾಯಣ’ ಸೆಪ್ಟೆಂಬರ್ ತಿಂಗಳಿನಲ್ಲಿ ರಿಲೀಸ್ ಆಗಲಿದೆ ಎಂದು ಹೇಳಲಾಗುತ್ತಿದೆ. ಆದರೆ, ನಾಲ್ಕು ವರ್ಷಗಳಿಂದ ಬಹಳ ಶ್ರಮ ವಹಿಸಿ ತಯಾರಾಗಿರುವ ಕೋಮಲ್ ಕುಮಾರ್ ಅವರ ‘ಕೆಂಪೇಗೌಡ 2’ ಸಿನಿಮಾ ಇದೇ ಆಗಸ್ಟ್​ ತಿಂಗಳಿನಲ್ಲೇ ಬಿಡುಗಡೆ ಎಂದು ಹೇಳಲಾಗುತ್ತಿದೆ.

ಕೆಂಪೇಗೌಡ 2 ಚಿತ್ರ ತಂಡ
Last Updated : Jul 20, 2019, 10:21 AM IST

ABOUT THE AUTHOR

...view details