ಇಂದು ದ್ವಿತೀಯ ವಿದ್ಯಾರ್ಥಿಗಳ ಪಾಲಿಗೆ ಬಹಳ ಮಹತ್ತರವಾದ ದಿನ. ಇಂದು ಪಿಯುಸಿ ಫಲಿತಾಂಶ ಬಂದಿದೆ. ವಿದ್ಯಾರ್ಥಿಗಳು ಕಾತರದಿಂದ ತಮ್ಮ ಫಲಿತಾಂಶ ತಿಳಿಯಲು ಕಾಯುತ್ತಿದ್ದಾರೆ. ಮತ್ತೆ ಕೆಲವು ವಿಧ್ಯಾರ್ಥಿಗಳು ಫಲಿತಾಂಶ ಏನಾಗುವುದೋ ಎಂಬ ಭಯದಲ್ಲಿದ್ದಾರೆ.
ಜೀವನವೆಂಬ ದೊಡ್ಡ ಪರೀಕ್ಷೆಯಲ್ಲಿ ಇದೊಂದು ಸಣ್ಣ ಪರೀಕ್ಷೆ ಎದುರಿಸಿದ ವಿದ್ಯಾರ್ಥಿಗಳಿಗೆ ಕಿರುತೆರೆ ನಟ ಅನಿರುದ್ಧ್ ಶುಭ ಹಾರೈಸಿದ್ದಾರೆ. ನೀವು ಅಂದುಕೊಂಡ ರೀತಿಯಲ್ಲಿ ನಿಮ್ಮ ರಿಸಲ್ಟ್ ಬಂದಿಲ್ಲ ಅಂದರೆ ದಯವಿಟ್ಟು ಯಾರೂ ಬೇಸರ ಮಾಡಿಕೊಳ್ಳಬೇಡಿ. ಜೀವನದ ಹಾದಿಯಲ್ಲಿ ಇದೊಂದು ಮೆಟ್ಟಿಲಷ್ಟೇ. ಇದೇ ಜೀವನ ಅಲ್ಲ, ಬದುಕಿನಲ್ಲಿ ಜ್ಞಾನ ಮುಖ್ಯ, ಅಂಕಗಳಲ್ಲ ಅಥವಾ ಮಾರ್ಕ್ಸ್ಕಾರ್ಡ್ ಅಲ್ಲ. ಸಾಧನೆಗೆ ನಾನಾ ದಾರಿಗಳಿವೆ, ಎಲ್ಲಕ್ಕಿಂತ ಬದುಕುವ ರೀತಿ ಬಹಳ ಮುಖ್ಯ. ಯಾರ ಮಾತಿಗೂ ಹೆಚ್ಚು ತಲೆ ಕೆಡಿಸಿಕೊಳ್ಳಬೇಡಿ. ಈ ಸಮಯ ಕಳೆದು ಹೋಗಲಿ, ನಿಧಾನವಾಗಿ ಕೂತು ಮುಂದೇನು ಮಾಡಬಹುದು ಎಂದು ನಿರ್ಧರಿಸಬಹುದು.