ಕರ್ನಾಟಕ

karnataka

ETV Bharat / sitara

ಕೆಳ ವರ್ಗದವರ ಬಗ್ಗೆ ಹಗುರ ಮಾತು ಆರೋಪ: ಕಾಲಿವುಡ್​ ನಟಿ ಬಂಧನ - ಮೀರಾ ಮಿಥುನ್​ ಬಂಧನ

ಕೆಳ ವರ್ಗದ ಜನರ ಬಗ್ಗೆ ಹಗುರವಾಗಿ ಮಾತನಾಡುವ ಮೂಲಕ ನೆಟ್ಟಿಗರ ಕೆಂಗಣ್ಣಿಗೆ ಗುರಿಯಾಗಿದ್ದ ಕಾಲಿವುಡ್​ ನಟಿಯೊಬ್ಬರನ್ನು ಪೊಲೀಸರು ಬಂಧಿಸಿದ್ದಾರೆ. ಬಂಧನಕ್ಕೂ ಮುನ್ನ ನಟಿ ಮಾಡಿರುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್​ ಆಗಿದೆ.

ACTRESS MEERA MITHUN ARRESTED IN KERALA
ಮೀರಾ ಮಿಥುನ್​

By

Published : Aug 14, 2021, 5:46 PM IST

ಚೆನ್ನೈ:ದಲಿತ ಸಮುದಾಯದ ಬಗ್ಗೆ ನಾಲಿಗೆ ಹರಿಬಿಡುವ ಮೂಲಕ ಹೊಸ ವಿವಾದವನ್ನು ಮೈಮೇಲೆ ಎಳೆದುಕೊಂಡ ಪ್ರಸಿದ್ಧ ಕಾಲಿವುಡ್ ಚಿತ್ರ ನಟಿ ಹಾಗೂ​ ಬಿಗ್​ ಬಾಸ್​ ಸ್ಪರ್ಧಿ ಮೀರಾ ಮಿಥುನ್​ ಬಂಧನಕ್ಕೊಳಗಾಗಿದ್ದಾರೆ.

ಜಾತಿ ನಿಂದನೆ ಆರೋಪದಡಿ ಕೇಂದ್ರ ಅಪರಾಧ ತನಿಖಾ ದಳದ ಸಿಬ್ಬಂದಿ ಇಂದು ಅವರನ್ನು ಬಂಧಿಸಿದೆ. ಬಂಧನಕ್ಕೂ ಮುನ್ನ ಕೂಗಾಟ ನಡೆಸಿದ್ದಾರೆ ಎನ್ನಲಾದ ವಿಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್​ ಆಗಿದೆ.

ದಲಿತ ಸಮುದಾಯದ ಬಗ್ಗೆ ಮಾತನಾಡಿರುವ ವಿಡಿಯೋವೊಂದು ನಟಿಯು ಇತ್ತೀಚೆಗೆ ಸಾಮಾಜಿಕ ಜಾಲತಾಣದಲ್ಲಿ ಅಪ್ಲೋಡ್​​ ಮಾಡಿದ್ದರು. ಈ ವಿಡಿಯೋದಲ್ಲಿ ಕೆಳ ವರ್ಗದ ಸಮುದಾಯದ ಬಗ್ಗೆ ಕೆಳ ಮಟ್ಟದ ಹೇಳಿಕೆ ನೀಡಿದ್ದರು ಎನ್ನಲಾಗಿದೆ. ವಿಡಿಯೋ ವೈರಲ್​ ಆಗುತ್ತಿದ್ದಂತೆ ಅವರನ್ನು ಬಂಧಿಸಬೇಕೆಂದು ನೆಟಿಜನ್​ಗಳು ಒತ್ತಾಯ ಮಾಡಿದ್ದರು. ಈ ಬಗ್ಗೆ ಹಲವು ಸಂಘಟನೆಗಳು ದೂರು ಸಹ ದಾಖಲಿಸಿದ್ದವು.

ಇದನ್ನೂ ಓದಿ: ಜಾತಿ ನಿಂದನೆ: ಕಾಲಿವುಡ್​ ನಟಿ ಮೀರಾ ಮಿಥುನ್​ ವಿರುದ್ಧ ದೂರು ದಾಖಲು

ಪೊಲೀಸರು ಇಂದು ಬಂಧಿಸಲು ಆಗಮಿಸುತ್ತಿದ್ದಂತೆ ವಿಡಿಯೋ ಮಾಡಿ ಹಲ್ಲೆ ನಡೆಸುತ್ತಿದ್ದಾರೆ ಎಂದು ಪೊಲೀಸರ ಮೇಲೆಯೇ ಆರೋಪ ಹೊರಿಸುವ ಪ್ರಯತ್ನ ಮಾಡಿದ್ದರು. ಈ ರಂಪಾಟದ ವಿಡಿಯೋ ಸಧ್ಯ ಸಾಮಾಜಿಕ ಜಾಲತಾಣದಲ್ಲಿ ವೈರಲ್​ ಆಗುತ್ತಿದೆ.

ABOUT THE AUTHOR

...view details