ಕರ್ನಾಟಕ

karnataka

ETV Bharat / sitara

'ನಿನ್ನನ್ನು ನೋಡುವ, ಮುದ್ದಾಡುವ ಕಾತುರ ಹೆಚ್ಚಾಗಿದೆ' ಶ್ವೇತಾ ಚಂಗಪ್ಪ ಪೋಸ್ಟ್‌ - ಇನ್​ಸ್ಟಾಗ್ರಾಮ್

ಕಿರುತರೆ ನಟಿ, ನಿರೂಪಕಿ ಶ್ವೇತಾ ಚಂಗಪ್ಪ ತಾಯಿಯಾಗುತ್ತಿರುವುದು ನಿಮಗೆಲ್ಲ ತಿಳಿದಿದೆ. ಆಗಾಗ ತಮ್ಮ ಬೇಬಿ ಬಂಪ್‍ನ ಫೋಟೋ ಶೂಟ್ ಮಾಡಿಸಿ ಸಾಮಾಜಿಕ ಜಾಲತಾಣಗಳಲ್ಲಿ ಪೋಸ್ಟ್​ ಮಾಡುತ್ತಿರುವ ಅವರು ಖುಷಿ ಹಂಚಿಕೊಂಡಿದ್ದಾರೆ.

swetha changappa

By

Published : Sep 7, 2019, 9:39 AM IST

ಕಿರುತರೆ ನಟಿ, ಮಜಾ ಟಾಕೀಸ್​ನಲ್ಲಿ ರಾಣಿ ಪಾತ್ರದಲ್ಲಿ ಮಿಂಚಿರುವ ​ಶ್ವೇತಾ ಚಂಗಪ್ಪ ತಾಯಿಯಾಗುವ ಜೋಶ್‌ನಲ್ಲಿದ್ದು ಬೇಬಿ ಶವರ್ ಫೋಟೋಗಳನ್ನು ಇನ್​ಸ್ಟಾಗ್ರಾಮ್​ನಲ್ಲಿ ಶೇರ್ ಮಾಡುತ್ತಲೇ ಇದ್ದಾರೆ. ತಾಯಿಯಾಗುವ ದಿನಗಳು ಸನಿಹವಾಗಿದ್ದು, 'ನಿನ್ನನ್ನು ನೋಡುವ, ಮುದ್ದಾಡುವ ಕಾತುರ ಹೆಚ್ಚಾಗಿದೆ' ಎಂದು ಇನ್‍ಸ್ಟಾಗ್ರಾಂನಲ್ಲಿ ಬರೆದುಕೊಂಡಿದ್ದಾರೆ.

ಶ್ವೇತಾ ಚಂಗಪ್ಪ

ಶ್ವೇತಾ ಚಂಗಪ್ಪ ಅವರು ತಮ್ಮ ಪತಿಯ ಹುಟ್ಟುಹಬ್ಬದಂದು ಅಭಿಮಾನಿಗಳಿಗೆ ತಾವು ಅಮ್ಮನಾಗುತ್ತಿರುವ ವಿಚಾರ ತಿಳಿಸಿ ಅಭಿಮಾನಿಗಳಿಂದ ಆಶೀರ್ವಾದ ಕೇಳಿದ್ದರು. ಈ ವೇಳೆ ಸಂತಸದ ಬೇಬಿ ಬಂಪ್‍ನ ಫೋಟೋ ಶೂಟ್ ಮಾಡಿಸಿ ಸೋಶಿಯಲ್ ಮೀಡಿಯಾದಲ್ಲಿ ಪೋಸ್ಟ್​ ಮಾಡಿದ್ದರು.

ಶ್ವೇತಾ ಚಂಗಪ್ಪ

ಶ್ವೇತಾ ತಮ್ಮ ಇನ್‍ಸ್ಟಾಗ್ರಾಂನಲ್ಲಿ ಬೇಬಿ ಬಂಪ್‍ ಫೋಟೋಗಳನ್ನು ಪೋಸ್ಟ್ ಮಾಡಿದ್ದು, "ನಿನ್ನನ್ನು ನೋಡುವ ಸಲುವಾಗಿ ನನಗೆ ಕಾಯಲಾಗುತ್ತಿಲ್ಲ. ನಿನ್ನ ತಂದೆ ನಿನ್ನನ್ನು ಅಪ್ಪಿಕೊಂಡಿರುವುದನ್ನು ನೋಡೋಕೆ ಕಾತುರ ಹೆಚ್ಚಾಗುತ್ತಿದೆ. ದೊಡ್ಡ ಕುಟುಂಬದ ಜೊತೆ ನಿನ್ನ ನೋಡೋಕೆ ನನಗೆ ಕಾಯಲು ಆಗುತ್ತಿಲ್ಲ. ನಿನ್ನನ್ನು ಈ ಪ್ರಪಂಚಕ್ಕೆ ಪರಿಚಯ ಮಾಡಿಸಿ ‘ಅಮ್ಮ’ ಎಂದು ಕರೆಸಿಕೊಳ್ಳಲು ಕಾಯುವುದಕ್ಕೆ ಆಗುತ್ತಿಲ್ಲ. ನಾನು ಹಾಗೂ ನಿನ್ನ ತಂದೆ ನಿನಗೆ ಜಗತ್ತಿನ ಎಲ್ಲ ಪ್ರೀತಿಯನ್ನು ತೋರಿಸಲು ಕಾಯುತ್ತಿದ್ದೇವೆ” ಎಂದು ಹರ್ಷ ವ್ಯಕ್ತಪಡಿಸಿದ್ದಾರೆ.

ಶ್ವೇತಾ ಚಂಗಪ್ಪ

ಮೂಲತಃ ಕೊಡಗಿನವರಾದ ಶ್ವೇತಾ, ಕಿರಣ್ ಅಪ್ಪಚ್ಚು ಅವರನ್ನು ಪ್ರೀತಿಸಿ ಮದುವೆಯಾಗಿದ್ದರು. ಧಾರಾವಾಹಿಗಳಲ್ಲಿ ನಟನೆ ಹಾಗೂ ನಿರೂಪಕಿಯಾಗಿದ್ದ ಈಕೆ, ಬಿಗ್ ಬಾಸ್ ಸೀಸನ್-2 ರಲ್ಲೂ ಭಾಗವಹಿಸಿದ್ದರು. ಮಜಾ ಟಾಕೀಸ್‍ನಲ್ಲಿ ರಾಣಿ ಪಾತ್ರದಲ್ಲಿ ಮಿಂಚಿದ್ದಾರೆ.

ABOUT THE AUTHOR

...view details