ನಟ ಚಂದನ್ ಕುಮಾರ್ ಮುಂದಿನ 'ಮರಳಿ ಮನಸ್ಸಾಗಿದೆ' ಎಂಬ ಧಾರಾವಾಹಿಯಲ್ಲಿ ಪೊಲೀಸ್ ಆಫೀಸರ್ ಆಗಿ ನಟಿಸುತ್ತಿದ್ದಾರೆ. ಸದ್ಯ ಬೆಂಗಳೂರಿನಲ್ಲಿ ಶೂಟಿಂಗ್ ನಡೆಯುತ್ತಿದ್ದು, ದಿವ್ಯಾ ವಗುಕರ್ ಹಾಗೂ ಶಿಲ್ಪಾ ಶೆಟ್ಟಿ ಪ್ರಮುಖ ಪಾತ್ರಗಳಲ್ಲಿ ಅಭಿನಯಿಸಲಿದ್ದಾರೆ. ಈ ಧಾರಾವಾಹಿ ಹಿಂದಿಯ 'ಘುಮ್ ಹೈ ಕಿಸೀಕೆ ಪ್ಯಾರ್ ಮೈ' ಧಾರಾವಾಹಿಯ ರಿಮೇಕ್ ಆಗಿದೆ.
ಈ ಬಗ್ಗೆ ಮಾತನಾಡಿರುವ ಚಂದನ್ "ಈ ವರ್ಷದ ಆರಂಭದಲ್ಲಿ ನಾನು ಒಪ್ಪಿಕೊಂಡಿರುವ ಮೊದಲ ಧಾರಾವಾಹಿ ಇದು. ತುಂಬಾ ಉತ್ಸುಕನಾಗಿದ್ದೇನೆ. ನಾನು ಇಲ್ಲಿ ಪೊಲೀಸ್ ಆಫೀಸರ್ ಆಗಿ ಕಾಣಿಸಿಕೊಂಡಿದ್ದೇನೆ. ಇದರಲ್ಲಿ ಪ್ರೇಮಕಥೆಯು ಇದ್ದು, ಕಥೆ ಕುತೂಹಲ ಮೂಡಿಸುತ್ತದೆ" ಎಂದಿದ್ದಾರೆ.