ನಟ ಪ್ರಭಾಸ್ 2 ಸಾವಿರ ಕೋಟಿ ಕಳ್ಳತನಕ್ಕೆ ಸಂಬಂಧಿಸಿದ ಪ್ರಕರಣವನ್ನ ಬೇಧಿಸುವ ಅಂಡರ್ ಕವರ್ ಪೊಲೀಸ್ ಆಫೀಸರ್ ಆಗಿ ಕಾಣಿಸಿದ್ದಾರೆ. ಸುದ್ದಿ ಜಾಲತಾಣವೊಂದರ ಪ್ರಕಾರ ‘ಸಾಹೋ’ ಚಿತ್ರದಲ್ಲಿ ಪ್ರಭಾಸ್ ಪಾತ್ರದಲ್ಲಿ ದೊಡ್ಡದೊಂದು ಟ್ವಿಸ್ಟ್ ಇದೆಯಂತೆ. ಅದೆನಂದ್ರೆ ಪ್ರಭಾಸ್ ಈ ಚಿತ್ರದಲ್ಲಿ ದ್ವಿಪಾತ್ರದಲ್ಲಿ ನಟಿಸುತ್ತಿದ್ದಾರೆ ಎಂದು ಟಾಲಿವುಡ್ನಲ್ಲಿ ಬಲವಾಗಿ ಕೇಳಿ ಬರುತ್ತಿದೆ.
ಸಾಹೋ ಚಿತ್ರದಲ್ಲಿ ವಿಲನ್, ಹೀರೋ ಆಗಿ ಪ್ರಭಾಸ್ ‘ಡಬಲ್’ ಟ್ವಿಸ್ಟ್!? - ಸಾಹೋ ಚಿತ್ರದ ಪ್ರಭಾಸ್ ಡಬಲ್ ಆ್ಯಕ್ಷನ್ ಟ್ವಿಸ್ಟ್
ಬಾಹುಬಲಿ ನಂತರ ಯಂಗ್ ರೆಬಲ್ ಸ್ಟಾರ್ ಪ್ರಭಾಸ್ ನಟಿಸುತ್ತಿರುವ ಚಿತ್ರ ‘ಸಾಹೋ’. ಇತ್ತೀಚೆಗೆ ಬಿಡುಗಡೆಗೊಂಡ ಸಾಹೋ ಟ್ರೇಲರ್ ಪ್ರೇಕ್ಷಕರ ಮನ ಗೆದ್ದಿದ್ದು, ಕೆಲವೊಂದು ಟ್ವಿಸ್ಟ್ ಹುಟ್ಟುಹಾಕಿದೆ.

ಕೃಪೆ: Twitter
ಇನ್ನು ಈ ವಿಷಯದ ಬಗ್ಗೆ ಚಿತ್ರ ತಂಡ ಅಧಿಕೃತವಾಗಿ ಯಾವುದೇ ಪ್ರತಿಕ್ರಿಯೆ ನೀಡಿಲ್ಲ. ಒಂದು ವೇಳೆ ದ್ವಿಪಾತ್ರದಲ್ಲಿ ಕಾಣಿಸಿಕೊಂಡಲ್ಲಿ ಪ್ರಭಾಸ್ ಫ್ಯಾನ್ಸ್ಗೆ ಹಬ್ಬವೋ ಹಬ್ಬ. ಇದಕ್ಕೂ ಮುನ್ನ ಪ್ರಭಾಸ್ ತೆಲುಗಿನ ಬಿಲ್ಲಾ ಚಿತ್ರದಲ್ಲಿ ದ್ವಿಪಾತ್ರದಲ್ಲಿ ಅಭಿನಯಿಸಿ ಎಲ್ಲರ ಮನ ಗೆದ್ದಿದ್ದರು. ಇದೇ ತಿಂಗಳು 30ರಂದು ಸಾಹೋ ಚಿತ್ರ ತೆರೆ ಕಾಣಲಿದ್ದು, ಪ್ರೇಕ್ಷಕರು ಈಗಾಗಲೇ ಟಿಕೆಟ್ ಬುಕ್ಕಿಂಗ್ ಮಾಡುತ್ತಿದ್ದಾರೆ.