ಕರ್ನಾಟಕ

karnataka

ETV Bharat / sitara

'ವಿಕ್ರಾಂತ್ ರೋಣ' ಚಿತ್ರದ ಹಾಡೊಂದಕ್ಕೆ ಖರ್ಚು ಮಾಡಿದ ಹಣವೆಷ್ಟು ಗೊತ್ತಾ? - 'ವಿಕ್ರಾಂತ್​ ರೋಣ'ದ ಚಿತ್ರೀಕರಣ

'ವಿಕ್ರಾಂತ್ ರೋಣ' ಚಿತ್ರದ ಕೊನೆಯ ಹಾಡಿನ ಚಿತ್ರೀಕರಣವಾಗಿದ್ದು, ಈ ಹಾಡಿನಲ್ಲಿ ಕಿಚ್ಚನ ಜೊತೆ ಬಾಲಿವುಡ್ ನಟಿ ಜಾಕ್ವೆಲಿನ್ ಫರ್ನಾಂಡೀಸ್ ಹೆಜ್ಜೆ ಹಾಕಿದ್ದಾರೆ. ಈ ಹಾಡಿಗೆ 3 ಕೋಟಿಗಿಂತಲೂ ಹೆಚ್ಚು ಖರ್ಚು ಮಾಡಲಾಗಿದೆ ಎನ್ನುವ ವಿಷಯವನ್ನು ಚಿತ್ರತಂಡದವರೇ ಹೇಳಿಕೊಂಡಿದೆ. ಇದುವರೆಗೂ ಯಾರು ಇಷ್ಟೊಂದು ಖರ್ಚು ಮಾಡಿ ಹಾಡಿನ ಚಿತ್ರೀಕರಣ ಮಾಡಿರಲಿಲ್ಲ ಎಂಬುದೇ ವಿಶೇಷ.

Vikrant Rona
ವಿಕ್ರಾಂತ್ ರೋಣ

By

Published : Jul 17, 2021, 9:15 AM IST

ಅನೂಪ್ ಭಂಡಾರಿ ನಿರ್ದೇಶನದಲ್ಲಿ ಕಿಚ್ಚ ಸುದೀಪ್​ ನಟಿಸಿರುವ ಬಹುನಿರೀಕ್ಷಿತ ಸಿನಿಮಾ 'ವಿಕ್ರಾಂತ್​ ರೋಣ'ದ ಚಿತ್ರೀಕರಣ ಈಗಾಗಲೇ ಪೂರ್ಣಗೊಂಡಿದ್ದು, ಸಿನಿಮಾ ಇನ್ನೇನು ರಿಲೀಸ್​ಗೆ ಸಿದ್ಧತೆ ನಡೆಸುತ್ತಿದೆ ಅನ್ನೋ ಸುದ್ದಿ ಕೇಳಿ ಬರುತ್ತಿದೆ. ಈ ಬೆನ್ನಲ್ಲೇ ಸಿನಿಮಾ ಹಾಡಿನ ಕುರಿತು ಚಿತ್ರತಂಡ ಮಾಹಿತಿಯೊಂದನ್ನು ಹಂಚಿಕೊಂಡಿದೆ.

ರಾಜಮೌಳಿ ನಿರ್ದೇಶನದ 'ಆರ್​ಆರ್​ಆರ್'​ ಚಿತ್ರದ ಹಾಡೊಂದಕ್ಕೆ 3 ಕೋಟಿ ರೂ.ಗಳನ್ನು ಖರ್ಚು ಮಾಡಲಾಗುತ್ತಿದೆ ಎಂಬ ಸುದ್ದಿ ಕಳೆದ ಎರಡು ದಿನಗಳಿಂದ ಕೇಳಿ ಬರುತ್ತಿದೆ. ಆದರೆ ಇದೀಗ 'ವಿಕ್ರಾಂತ್ ರೋಣ' ಚಿತ್ರದ ಹಾಡೊಂದಕ್ಕೆ 3 ಕೋಟಿಗಿಂತಲೂ ಹೆಚ್ಚು ಖರ್ಚು ಮಾಡಲಾಗಿದ್ದು, ಈ ವಿಷಯವನ್ನು ಚಿತ್ರತಂಡದವರೇ ಹೇಳಿಕೊಂಡಿದ್ದಾರೆ.

ಹೌದು, 'ವಿಕ್ರಾಂತ್ ರೋಣ' ಚಿತ್ರದ ಕೊನೆಯ ಹಾಡಿನ ಚಿತ್ರೀಕರಣವಾಗಿದ್ದು, ಈ ಹಾಡಿನಲ್ಲಿ ಕಿಚ್ಚನ ಜೊತೆ ಬಾಲಿವುಡ್ ನಟಿ ಜಾಕ್ವೆಲಿನ್ ಫರ್ನಾಂಡೀಸ್ ಹೆಜ್ಜೆ ಹಾಕಿದ್ದಾರೆ. ಈ ಹಾಡೊಂದಕ್ಕೆ ಜಾಕ್ವೆಲಿನ್ ಮೂರು ಕೋಟಿ ಸಂಭಾವನೆ ಪಡೆದಿದ್ದಾರೆ ಎನ್ನಲಾಗಿದೆ. ಜಾಕ್ವೆಲಿನ್ ಸಂಭಾವನೆ ಸೇರಿದಂತೆ ಸೆಟ್ ಮತ್ತು ಇತರೆ ಖರ್ಚುಗಳು ಸೇರಿ ಒಟ್ಟು ಐದು ಕೋಟಿ ರೂ.ಗಳನ್ನು ಖರ್ಚು ಮಾಡಲಾಗಿದೆ. ಇದುವರೆಗೂ ಯಾರು ಇಷ್ಟೊಂದು ಖರ್ಚು ಮಾಡಿ ಹಾಡಿನ ಚಿತ್ರೀಕರಣ ಮಾಡಿರಲಿಲ್ಲ ಎಂಬುದೇ ವಿಶೇಷ.

ಈ ಅದ್ಧೂರಿ ಹಾಡಿಗಾಗಿ ಮೋಹನ್ ಬಿ ಕೆರೆ ಸ್ಟುಡಿಯೋದಲ್ಲಿ ಕಲಾ ನಿರ್ದೇಶಕ ಶಿವಕುಮಾರ್ ಬೃಹತ್ ಸೆಟ್ ಹಾಕಿದ್ದಾರೆ. ಜೊತೆಗೆ ಈ ಹಾಡಿಗೆ ಜಾನಿ ಮಾಸ್ಟರ್ ನೃತ್ಯ ನಿರ್ದೇಶನ ಮಾಡಿದ್ದಾರೆ. ಸುಮಾರು ಆರು ದಿನಗಳ ಕಾಲ ಈ ಹಾಡಿನ ಚಿತ್ರೀಕರಣ ಮಾಡಲಾಗಿದ್ದು ಸಿನಿಮಾ ಬಿಡುಗಡೆಗೆ ಸಿದ್ಧತೆ ನಡೆಯುತ್ತಿದೆ.

ವಿಕ್ರಾಂತ್ ರೋಣ ಚಿತ್ರಕ್ಕೆ ಅನೂಪ್ ಭಂಡಾರಿ ಆ್ಯಕ್ಷನ್ ಕಟ್ ಹೇಳಿದ್ದು, ಅಜನೀಶ್ ಲೋಕನಾಥ್ ಸಂಗೀತ ನೀಡಿದ್ದಾರೆ. ವಿಲಿಯಮ್ ಡೇವಿಡ್ ಅವರ ಛಾಯಾಗ್ರಹಣವಿದೆ. 14 ಭಾಷೆಗಳಲ್ಲಿ ತೆರೆಗೆ ಬರಲಿರುವ ವಿಕ್ರಾಂತ್ ರೋಣ ಪ್ರಮುಖವಾಗಿ ಫ್ರೆಂಚ್, ಅರೆಬಿಕ್, ಸ್ಪ್ಯಾನಿಷ್, ಮಂಡರಿನ್ ಮತ್ತು ರಷ್ಯಾ ಭಾಷೆಗಳಿಗೆ ಕೂಡ ಡಬ್ ಆಗಲಿದೆ.

ABOUT THE AUTHOR

...view details