ಕರ್ನಾಟಕ

karnataka

ETV Bharat / sitara

ಪಾರ್ಟಿಯಲ್ಲಿ ತಿಂದು, ಪ್ಲೇಟ್ ಒಡೆದು ನೆಟಿಜನ್ಸ್ ಕೆಂಗಣ್ಣಿಗೆ ಗುರಿಯಾದ ಶಿಲ್ಪಾ ಶೆಟ್ಟಿ

ದುಬೈನ ಗ್ರೀಕ್ ರೆಸ್ಟೋರೆಂಟ್ ಒಂದರಲ್ಲಿ ಶಿಲ್ಪಾ ಶೆಟ್ಟಿ ಡಿನ್ನರ್ ಮುಗಿಸಿ ಪ್ಲೇಟ್ ಒಡೆದು ಸ್ನೇಹಿತರೊಂದಿಗೆ 'ಪ್ಲೇಟ್​ ಸ್ಮ್ಯಾಶಿಂಗ್ ಡ್ಯಾನ್ಸ್​​​​​​' ಮಾಡಿದ್ದಾರೆ. ಶಿಲ್ಪಾ ವರ್ತನೆಗೆ ನೆಟಿಜನ್​​​ಗಳು ಬೇಸರ ವ್ಯಕ್ತಪಡಿಸಿದ್ದು, ಇತರರಿಗೆ ಮಾದರಿಯಾಗಬೇಕಾದ ಸೆಲಬ್ರಿಟಿಗಳೇ ಹೀಗೆ ತಪ್ಪು ಮಾಡಿದರೆ ಹೇಗೆ ಎಂದು ಪ್ರಶ್ನಿಸಿದ್ದಾರೆ.

ಶಿಲ್ಪಾ ಶೆಟ್ಟಿ

By

Published : Sep 19, 2019, 9:44 PM IST

ಕೆಲವು ಸೆಲಬ್ರಿಟಿಗಳು ಸಿಂಪಲ್ ಲೈಫ್​​​ಸ್ಟೈಲ್​​​​ಗೆ ಹೊಂದಿಕೊಂಡಿದ್ದರೆ ಮತ್ತೆ ಕೆಲವರಂತೂ ದುಂದುವೆಚ್ಚ ಮಾಡುವ ಮೂಲಕ ಹಣವನ್ನು ಹುಣಿಸೆ ಬೀಜದಂತೆ ಖರ್ಚು ಮಾಡುತ್ತಾರೆ. ಇನ್ನು ಕೆಲವರು ಪಾರ್ಟಿಯಲ್ಲಿ ಉಂಡು, ತಿಂದು, ಪ್ಲೇಟ್​​​​​ಗಳನ್ನು ಬಿಸಾಡಿ ಒಡೆದು ವೇಸ್ಟ್​ ಮಾಡುತ್ತಾರೆ.

ಇತ್ತೀಚೆಗೆ ಬಾಲಿವುಡ್ ನಟಿ ಶಿಲ್ಪಾ ಶೆಟ್ಟಿ ಕೂಡಾ ಇದೇ ರೀತಿ ರೆಸ್ಟೋರೆಂಟ್​ ಒಂದರಲ್ಲಿ ಪ್ಲೇಟ್ ಒಡೆದು, ಡ್ಯಾನ್ಸ್ ಮಾಡಿ ನೆಟ್ಟಿಗರ ಆಕ್ರೋಶಕ್ಕೆ ಬಲಿಯಾಗಿದ್ದಾರೆ. ದುಬೈನ ರೆಸ್ಟೋರೆಂಟ್​​​​​​​​​​​ ಒಂದರಲ್ಲಿ ಇತ್ತೀಚೆಗೆ ಶಿಲ್ಪಾಶೆಟ್ಟಿ ಊಟಕ್ಕೆ ಹೋಗಿದ್ದಾರೆ. ಇದೊಂದು ಗ್ರೀಕ್ ರೆಸ್ಟೋರೆಂಟ್. ಗ್ರೀಕ್​ ರೆಸ್ಟೋರೆಂಟ್​​​ನಲ್ಲಿ ಈ ರೀತಿ ಪ್ಲೇಟ್ ಒಡೆದು ಅದರ ಸುತ್ತ ಡ್ಯಾನ್ಸ್ ಮಾಡುವುದನ್ನು 'ಪ್ಲೇಟ್​ ಸ್ಮ್ಯಾಶಿಂಗ್ ಡ್ಯಾನ್ಸ್​​​​​​' ಎಂದು ಕರೆಯುತ್ತಾರೆ. ಊಟ ಮಾಡಿದಾಗ ಪ್ಲೇಟ್ ತೊಳೆಯುವ ಬದಲು ಕೆಲವೊಮ್ಮೆ ಈ ರೀತಿ ಒಡೆಯಲಾಗುತ್ತದೆ. ಶಿಲ್ಪಾಶೆಟ್ಟಿ ಕೂಡಾ ರೆಸ್ಟೋರೆಂಟ್​ನಲ್ಲಿ ಊಟ ಮಾಡಿ ಇತರರಂತೆ ಪ್ಲೇಟ್ ಒಡೆದು ಸ್ನೇಹಿತರೊಂದಿಗೆ ಡ್ಯಾನ್ಸ್ ಮಾಡಿದ್ದಾರೆ. ಈ ವಿಡಿಯೋವನ್ನು ಶಿಲ್ಪಾ ತಮ್ಮ ಇನ್ಸ್​​​ಟಾಗ್ರಾಮ್​​​ನಲ್ಲಿ ಶೇರ್ ಮಾಡಿಕೊಂಡಿದ್ದಾರೆ.

ಶಿಲ್ಪಾ ಶೆಟ್ಟಿ

ವಿಡಿಯೋ ಜೊತೆಗೆ 'ಪ್ಲೇಟ್​ ಒಡೆಯುವ ಮೂಲಕ ನಿಮ್ಮ ಋಣಾತ್ಮಕ ಭಾವನೆಯನ್ನೂ ತೊಡೆದು ಹಾಕಿ. ಪ್ಲೇಟ್ ಒಡೆದು ತೊಳೆಯುವುದರಿಂದ ತಪ್ಪಿಸಿಕೊಳ್ಳಿ, ಪಾರ್ಟಿಯನ್ನು ಬಹಳ ಎಂಜಾಯ್ ಮಾಡಿದೆ. ಇಂತಹ ಖುಷಿ ದಿನಗಳು ಮತ್ತೆ ಮತ್ತೆ ಬರುತ್ತಿರಲಿ' ಎಂದು ಬರೆದುಕೊಂಡಿದ್ದಾರೆ. ಆದರೆ ಶಿಲ್ಪಾ ಅವರ ಈ ವಿಡಿಯೋಗೆ ನೆಟ್ಟಿಗರು ಕೋಪ ವ್ಯಕ್ತಪಡಿಸಿದ್ದಾರೆ. 'ಹಣ ಉಳಿಸಿ ಬಡವರಿಗೆ ಸಹಾಯ ಮಾಡಿ' , 'ಪ್ಲೇಟ್ ವೇಸ್ಟ್​ ಮಾಡುವಾಗ ಅದನ್ನು ತಯಾರಿಸುವವರ ಶ್ರಮ ಎಷ್ಟಿರುತ್ತದೆ ನೀವು ಅರ್ಥ ಮಾಡಿಕೊಳ್ಳಬೇಕು' 'ಇತರರಿಗೆ ಮಾದರಿಯಾಗಬೇಕಾದ ಸೆಲಬ್ರಿಟಿಗಳೇ ಹೀಗೆ ತಪ್ಪು ಮಾಡಿದರೆ ಹೇಗೆ' ಎಂದು ವಿಧವಿಧವಾಗಿ ಕಮೆಂಟ್ ಮಾಡಿದ್ದಾರೆ.

ABOUT THE AUTHOR

...view details