ಕರ್ನಾಟಕ

karnataka

ETV Bharat / sitara

ಮದುವೆ ಬೇಡ, ಲೈಂಗಿಕತೆಗೆ ಪರ್ಯಾಯ ವ್ಯವಸ್ಥೆ ಇದೆ: 'ಕಿರಾತಕ' ನಟಿಯ ದಿಟ್ಟ ಉತ್ತರ - ನಟಿ ಒವಿಯ ಹೆಲನ್ ವಿವಾದಾತ್ಮಕ ಹೇಳಿಕೆ

2011ರಲ್ಲಿ ರಾಕಿಂಗ್ ಸ್ಟಾರ್ ಯಶ್ ಜೊತೆ ‘ಕಿರಾತಕ’ ಚಿತ್ರದಲ್ಲಿ ನಾಯಕಿಯಾಗಿ ಅಭಿನಯಿಸಿದ ಒವಿಯ ಹೆಲನ್ ಅವರು ಮದುವೆ, ಲೈಂಗಿಕತೆಗೆ ಸಂಬಂಧಿಸಿದಂತೆ ವಿವಾದಾತ್ಮಕ ಹೇಳಿಕೆಯೊಂದನ್ನು ನೀಡಿದ್ದಾರೆ.

Oviya Helen
Oviya Helen

By

Published : Jul 10, 2020, 2:07 PM IST

ಬಾಲಿವುಡ್ ನಟಿಯರಂತೆ ದಕ್ಷಿಣ ಭಾರತದ ನಟಿಯರು ಇತ್ತೀಚೆಗೆ ಬೋಲ್ಡ್ ಹೇಳಿಕೆಗಳನ್ನು ಕೊಡುತ್ತ ಬಂದಿದ್ದಾರೆ. ಇದೀಗ ಕನ್ನಡ, ಮಲಯಾಳಂ, ತಮಿಳು ಸಿನಿಮಾಗಳಲ್ಲಿ ನಟಿಸಿದ ಒವಿಯ ಹೆಲನ್ ಅವರು ಮದುವೆ, ಸೆಕ್ಸ್​​​​​ಗೆ ಸಂಬಂಧಿಸಿದಂತೆ ಹೇಳಿಕೆಯೊಂದನ್ನು ನೀಡಿದ್ದಾರೆ.

ಒವಿಯ ಹೆಲನ್

2011ರಲ್ಲಿ ರಾಕಿಂಗ್ ಸ್ಟಾರ್ ಯಶ್ ಜೊತೆ ‘ಕಿರಾತಕ’ ಚಿತ್ರದಲ್ಲಿ ನಾಯಕಿಯಾಗಿ ಅಭಿನಯಿಸಿದ ಒವಿಯ ಹೆಲನ್ ಅವರು, ತಮಿಳಿನ ಕಲಾವಣಿ 2010 ರಲ್ಲಿ ನಿರ್ವಹಿಸಿದ ಮಹೇಶ್ವರಿ ಪಾತ್ರವನ್ನು ಕನ್ನಡದಲ್ಲಿ ಸಹ ಮಾಡಿದ್ದರು. ಆ ಮೇಲೆ ಅವರು ಕಾಣಿಸಿಕೊಂಡಿದ್ದು 2016 ರಲ್ಲಿ 'ಮಿಸ್ಟರ್ ಮೊಮ್ಮಗ' ಕನ್ನಡ ಸಿನಿಮಾದಲ್ಲಿ.

Oviya Helen

ಕೆಲವು ದಿನಗಳ ಹಿಂದೆ ಟ್ವಿಟರ್​​ನಲ್ಲಿ ಅಭಿಮಾನಿಗಳ ಜೊತೆ ಕೆಲ ವಿಷಯಗಳ ಕುರಿತು ಚರ್ಚಿಸುತ್ತಾ, ಫ್ರಾಂಕ್‌ ಉತ್ತರಗಳನ್ನು ನೀಡಿದ್ದಾರೆ. ಮದುವೆ ಮಾಡಿಕೊಂಡರೆ ಹೆಣ್ಣಿನ ಜೀವನ ಹಾಳಾಗುತ್ತದೆ, ಕಾಮ ತಣಿಸಲು ಪರ್ಯಾಯ ವ್ಯವಸ್ಥೆ ಇದೆ ಎಂದು ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ.

ಮತ್ತೊಬ್ಬ ಅಭಿಮಾನಿಯ ಪ್ರಶ್ನೆಗೆ ನಾನು ಸಾಮಾಜಿಕ ಹೋರಾಟ ಮಾಡಬೇಕಿದೆ. ಅಂದರೆ ನನಗೆ ಇನ್ನೂ ಪವರ್ ಬೇಕು, ನನಗೆ ಡ್ರಾಮಾ ಮಾಡಲು ಸಾಮಾಜಿಕ ವಿಷಯಗಳು ಗೊತ್ತಿಲ್ಲ ಎಂದಿದ್ದಾರೆ. ಮತ್ತೊಮ್ಮೆ ನಿಮಗೆ ಗಂಡ ಬೇಡವೇ? ಎಂದು ಕೇಳಿದ್ದಕ್ಕೆ ಅದರ ಅವಶ್ಯಕತೆ ಇಲ್ಲ ಎಂದಿದ್ದಾರೆ.

ಒವಿಯ ಹೆಲನ್ ಅವರು ಕಲಾವಣಿ, ಮರೀನಾ, ಕಲಾಕಪ್ಪು, ಮೂಡರ್ ಕೂಡಮ್, ಯಾಮಾರಿಕ್ಕು ಬಯಮೆ ಅಂತಹ ಜನಪ್ರಿಯ ಸಿನಿಮಾಗಳಲ್ಲಿ ನಟಿಸಿದ್ದಾರೆ. ಡಾ. ಕಮಲ್ ಹಾಸನ್ ನಡೆಸಿಕೊಟ್ಟ ಬಿಗ್ ಬಾಸ್ ಸೀಸನ್ 1 ರಲ್ಲಿ ಸ್ಪರ್ಧಿಯಾಗಿದ್ದರು. ಜೊತೆಗೆ ಒವಿಯ ವೆಬ್ ಸೀರೀಸ್‌ ನಲ್ಲಿ ಸಹ ತೊಡಗಿಸಿಕೊಂಡಿದ್ದಾರೆ.

ABOUT THE AUTHOR

...view details