ಕರ್ನಾಟಕ

karnataka

ETV Bharat / sitara

ಗಣೇಶ ನಿಮಜ್ಜನ: ಮಕ್ಕಳೊಂದಿಗೆ ಮ್ಯಾಚಿಂಗ್ ಡ್ರೆಸ್‌ನಲ್ಲಿ ಪಾಲ್ಗೊಂಡ ಶಿಲ್ಪಾ ಶೆಟ್ಟಿ - ಗಣೇಶ ಚತುರ್ಥಿ

ಬಾಲಿವುಡ್​ ನಟಿ ಶಿಲ್ಪಾ ಶೆಟ್ಟಿ ತಮ್ಮ ಇಬ್ಬರೂ ಮಕ್ಕಳು ಹಾಗೂ ಪರಿವಾರದೊಂದಿಗೆ ಶನಿವಾರ ನಡೆದ ತಮ್ಮ ಮನೆಯ ಗಣೇಶನ ನಿಮಜ್ಜನ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು.

shilpa shetty ganesh visarjan
ಗಣೇಶ ಚತುರ್ಥಿ

By

Published : Sep 12, 2021, 4:15 PM IST

ಮುಂಬೈ:ಗಣೇಶ ಚತುರ್ಥಿಯನ್ನು ತಮ್ಮ ಇಬ್ಬರು ಮಕ್ಕಳೊಂದಿಗೆ ಸಂಭ್ರದಿಂದಲೇ ಆಚರಿಸಿದ ಬಾಲಿವುಡ್​ ನಟಿ ಶಿಲ್ಪಾ ಶೆಟ್ಟಿ, ಗಣೇಶ ನಿಮಜ್ಜನ ಕಾರ್ಯಕ್ರಮದಲ್ಲಿ ಕುಟುಂಬ ಸಮೇತ ಭಾಗಿಯಾಗಿದ್ದರು.

ಶಿಲ್ಪಾ ಶೆಟ್ಟಿ ಮನೆಯಲ್ಲಿ ಗಣೇಶ ನಿಮಜ್ಜನ

ಶಿಲ್ಪಾ ಶೆಟ್ಟಿ ಮನೆಯಲ್ಲಿ ಪ್ರತಿಷ್ಟಾಪಿಸಿದ್ದ ಗಣಪತಿ ಮೂರ್ತಿಯನ್ನು ಶನಿವಾರ ರಾತ್ರಿ ಮಗ ವಿಹಾನ್ ಮತ್ತು ಮಗಳು ಸಮೀಷಾ ಜೊತೆ ಶಿಲ್ಪಾ ಬೀಳ್ಕೊಟ್ಟರು. ಈ ಗಣೇಶ ನಿಮಜ್ಜನ ವಿಡಿಯೋವನ್ನು ಅವರು ತಮ್ಮ ಇನ್​​​ಸ್ಟಾಗ್ರಾಮ್​ ಖಾತೆಯಲ್ಲಿ ಶೇರ್​ ಮಾಡಿಕೊಂಡಿದ್ದಾರೆ.

ಈ ವಿಡಿಯೋ ಜೊತೆ ಶಿಲ್ಪಾ "ಭಾರವಾದ ಹೃದಯದಿಂದ, ನಾವು ನಮ್ಮ ಪ್ರೀತಿಯ 'ಗಣು ರಾಜ'ನಿಗೆ ವಿದಾಯ ಹೇಳುತ್ತಿದ್ದೇವೆ ಮತ್ತು ಮುಂದಿನ ವರ್ಷ ಅವನ ಆಗಮನಕ್ಕಾಗಿ ನಾವು ಕಾತುರದಿಂದ ಕಾಯುತ್ತೇವೆ'' ಎಂದು ಬರೆದುಕೊಂಡಿದ್ದಾರೆ.

ಪತಿ ರಾಜ್​ ಕುಂದ್ರಾ ಅಶ್ಲೀಲ ವಿಡಿಯೋ ಪ್ರಕರಣದಲ್ಲಿ ಜೈಲು ಸೇರಿರುವ ಕಾರಣ ಶಿಲ್ಪಾ ಶೆಟ್ಟಿ (46) ಈ ವರ್ಷದ ಗಣೇಶ ಚತುರ್ಥಿಯನ್ನು ಪತಿಯ ಅನುಪಸ್ಥಿತಿಯಲ್ಲಿ ಆಚರಿಸಿದ್ದಾರೆ.

ABOUT THE AUTHOR

...view details