ಕರ್ನಾಟಕ

karnataka

ETV Bharat / sitara

ರಾಧಿಕಾ ಖಾತೆಗೆ ಹಣ ವರ್ಗಾವಣೆ ಪ್ರಕರಣ : ಇಂದು ಮಧ್ಯಾಹ್ನ ಸುದ್ದಿಗೋಷ್ಠಿ - ಆರೋಪಿಯಾಗಿರುವ ಯುವರಾಜ್

ಆರ್‌ಎಸ್ಎಸ್ ಮುಖಂಡ ಅಂತೇಳಿ ಪ್ರಮುಖ ವ್ಯಕ್ತಿಗಳಿಂದ ಹಣ ವಸೂಲಿ ಮಾಡಿದ್ದು ಸಿಸಿಬಿ ಪೊಲೀಸರಿಂದ ಬಂಧಿತ ಆರೋಪಿಯಾಗಿರುವ ಯುವರಾಜ್ ವಿಚಾರಣೆ ವೇಳೆ ಕನ್ನಡದ ಖ್ಯಾತ ನಟಿ ರಾಧಿಕಾ ಕುಮಾರಸ್ವಾಮಿ ಖಾತೆಗೆ ಹಣ ವರ್ಗಾವಣೆ ಮಾಡಿರುವುದಾಗಿ ಹೇಳಿದ್ದಾನೆ. ಈ ಕುರಿತು ಮಧ್ಯಾಹ್ನ ಸುದ್ದಿಗೋಷ್ಠಿ ಮಾಡುವುದಾಗಿ ರಾಧಿಕಾ ಸಹೋದರ ತಿಳಿಸಿದ್ದಾರೆ.

ಹಣ ವಂಚನೆಯಲ್ಲಿ ಬಂಧಿಯಾದ ಆರೋಪಿ : ವಿಚಾರಣೆ ವೇಳೆ ರಾಧಿಕಾ ಹೆಸರು ಲಿಂಕ್​​​​!
ಹಣ ವಂಚನೆಯಲ್ಲಿ ಬಂಧಿಯಾದ ಆರೋಪಿ : ವಿಚಾರಣೆ ವೇಳೆ ರಾಧಿಕಾ ಹೆಸರು ಲಿಂಕ್​​​​!

By

Published : Jan 6, 2021, 12:27 PM IST

ಬೆಂಗಳೂರು: ನಾನು ಆರ್‌ಎಸ್ಎಸ್ ಮುಖಂಡ ಎಂದು ಹೇಳಿಕೊಂಡು ಪ್ರಮುಖ ವ್ಯಕ್ತಿಗಳಿಂದ ಹಣ ವಸೂಲಿ ಮಾಡಿರುವ ಆರೋಪ ಹೊತ್ತು ಸಿಸಿಬಿ ಪೊಲೀಸರಿಂದ ಬಂಧಿತ ಆರೋಪಿಯಾಗಿರುವ ಯುವರಾಜ್ ವಿಚಾರಣೆ ವೇಳೆ, ಕನ್ನಡ ಚಿತ್ರರಂಗದ ಖ್ಯಾತ ನಟಿ ರಾಧಿಕಾ ಕುಮಾರಸ್ವಾಮಿ ಖಾತೆಗೆ ಹಣ ವರ್ಗಾವಣೆ ಮಾಡಿರುವುದಾಗಿ ಹೇಳಿದ್ದಾನೆ.

ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ರಾಧಿಕಾ ಸಹೋದರ ರವಿರಾಜ್ ಈ ವ್ಯಕ್ತಿ ನಮಗೆ 15 ವರ್ಷಗಳಿಂದ ಪರಿಚಿತ. ಆದರೆ ನಮ್ಮ ನಡುವೆ ಯಾವುದೇ ಹಣದ ವ್ಯವಹಾರ ನಡೆದಿಲ್ಲ ಎಂದಿದ್ದಾರೆ. ಅಲ್ಲದೆ ಈ ಬಗ್ಗೆ ಇಂದು ಮಧ್ಯಾಹ್ನ ಸುದ್ದಿಗೋಷ್ಠಿ ನಡೆಸುವುದಾಗಿ ರವಿರಾಜ್​​ ತಿಳಿಸಿದ್ದಾರೆ. ಡಾಲರ್ಸ್ ಕಾಲೋನಿಯಲ್ಲಿರುವ ರಾಧಿಕಾ ಕುಮಾರಸ್ವಾಮಿ ಮನೆಯಲ್ಲಿ ಈ ವಿಷಯದ ಬಗ್ಗೆ ಮಾಹಿತಿ ನೀಡಲಿದ್ದೇವೆ ಎಂದಿದ್ದಾರೆ.

ಇದನ್ನೂ ಓದಿ : ಯುವರಾಜನ ಬ್ಯಾಂಕ್​ ಖಾತೆಯಿಂದ ಸ್ಯಾಂಡಲ್​ವುಡ್​ ಸ್ವೀಟಿ ಖಾತೆಗೆ 1 ಕೋಟಿ ರೂ. ವರ್ಗಾವಣೆ..!?

ಈ ಹಿಂದೆ ಯುವರಾಜ್​​​​ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷರು, ಆರ್‌ಎಸ್‌ಎಸ್‌ ರಾಷ್ಟ್ರೀಯ ಮುಖಂಡರು ಸೇರಿದಂತೆ ಪ್ರಭಾವಿ ರಾಜಕಾರಣಿಗಳ ಹೆಸರು ಹೇಳಿಕೊಂಡು, ನನಗೆ ಎಲ್ಲರೂ ಗೊತ್ತು. ನಿಮಗೆ ಸ್ಥಾನ ಕೊಡಿಸುತ್ತೇನೆಂದು ಹೇಳಿ ಕೋಟ್ಯಾಂತರ ರೂಪಾಯಿ ಹಣದ ವಂಚನೆ ಮಾಡಿದ್ದ ಪ್ರಕರಣ ಬೆಳಕಿಗೆ ಬಂದಿತ್ತು.

ABOUT THE AUTHOR

...view details