ಕರ್ನಾಟಕ

karnataka

ETV Bharat / sitara

ಯುವರತ್ನ ಸಿನಿಮಾದಲ್ಲಿ ಯುವಜನತೆಗೆ ಒಳ್ಳೆಯ ಸಂದೇಶ: ಪುನೀತ್​ ರಾಜ್​ಕುಮಾರ್​ - ನಟ ಪುನೀತ್​ ರಾಜ್​ಕುಮಾರ್ ಸುದ್ದಿ

ಏಪ್ರಿಲ್​ 1ರಂದು ಸಿನಿಮಾ ರಿಲೀಸ್​ ಆಗ್ತಿದೆ. ಇದು ಮನೆ ಮಂದಿ ಎಲ್ಲರೂ ಬಂದು ನೋಡುವಂತಹ ಸಿನಿಮಾ. ಇವತ್ತಿನ ಯುವಕರಿಗೆ ತುಂಬಾ ಒಳ್ಳೆಯ ಮೆಸೇಜ್​ ಇದೆ. ಇಂತಹ ಸಿನಿಮಾದಲ್ಲಿ ನಾನು ನಟಿಸಿರುವುದು ತುಂಬಾ ಹೆಮ್ಮೆ ಕೊಟ್ಟಿದೆ ಎಂದು ನಟ ಪುನೀತ್​ ರಾಜ್​ಕುಮಾರ್ ಹೇಳಿದರು.

ಪುನೀತ್​ ರಾಜ್​ಕುಮಾರ್​
ಪುನೀತ್​ ರಾಜ್​ಕುಮಾರ್​

By

Published : Mar 10, 2021, 7:53 PM IST

ಬೆಂಗಳೂರು: ಪುನೀತ್​ ರಾಜ್​ಕುಮಾರ್ ಹಾಗೂ ಸಂತೋಷ್​ ಆನಂದರಾಮ್​ ಕಾಂಬಿನೇಶನ್​ನಲ್ಲಿ ಮೂಡಿ ಬರುತ್ತಿರುವ ಸಿನಿಮಾ ಯುವರತ್ನ. ಈಗಾಗಲೇ ರಿಲೀಸ್ ದಿನಾಂಕ ಪ್ರಕಟಿಸಿರುವ ಚಿತ್ರತಂಡ ಸಿನಿಮಾದ ಪ್ರಚಾರ ಕಾರ್ಯ ಸಹ ಆರಂಭಿಸಿದೆ. ಇಂದು ಪ್ರೆಸ್​ಮೀಟ್​ ಕೂಡ ನಡೆಸಿದ್ದು, ಮಾರ್ಚ್​ 20ರಂದು ಕನ್ನಡ ಹಾಗೂ ತೆಲುಗು ಟ್ರೈಲರ್​ ಬಿಡುಗಡೆ ಮಾಡುವುದಾಗಿ ಚಿತ್ರತಂಡ ತಿಳಿಸಿದೆ.

ಸುದ್ಧಿಗೋಷ್ಠಿಯಲ್ಲಿ ಮಾತನಾಡಿದ ನಟ ಪುನೀತ್​ ರಾಜ್​ಕುಮಾರ್​, ಏಪ್ರಿಲ್​ 1ರಂದು ಸಿನಿಮಾ ರಿಲೀಸ್​ ಆಗ್ತಿದೆ. ಇದು ಮನೆ ಮಂದಿ ಎಲ್ಲರೂ ಬಂದು ನೋಡುವಂತಹ ಸಿನಿಮಾ. ಇವತ್ತಿನ ಯುವಕರಿಗೆ ತುಂಬಾ ಒಳ್ಳೆಯ ಮೆಸೇಜ್​ ಇದೆ. ಇಂತಹ ಸಿನಿಮಾದಲ್ಲಿ ನಾನು ನಟಿಸಿರುವುದು ತುಂಬಾ ಹೆಮ್ಮೆ ಕೊಟ್ಟಿದೆ ಎಂದರು.

ಸುದ್ಧಿಗೋಷ್ಠಿಯಲ್ಲಿ ಮಾತನಾಡಿದ ನಟ ಪುನೀತ್​ ರಾಜ್​ಕುಮಾರ್​

ಕಳೆದು 2 ತಿಂಗಳಿನಿಂದ ಸಿನಿಮಾಗಳು ಥಿಯೇಟರ್​ಗೆ ಬರಲು ಆರಂಭಿಸಿವೆ, ಜನ ಹಾರೈಸಿದ್ದಾರೆ. ಹಾಗೆಯೇ ನಮ್ಮ ಸಿನಿಮಾವನ್ನು ಹಾರೈಸಿ, ಕರ್ನಾಟಕದಲ್ಲಿ ಕನ್ನಡ ಸಿನಿಮಾಗಳು ಹೆಚ್ಚಾಗಿ ಓಡಲಿ ಎಂದು ಹೇಳಿದರು.

ಇದನ್ನೂ ಓದಿ..ಏಪ್ರಿಲ್​​ನಲ್ಲಿ 'ಅರ್ಜುನ್ ಗೌಡ'ನಾಗಿ ತೆರೆ ಮೇಲೆ ಮಿಂಚಲು ರೆಡಿಯಾದ ಡೈನಾಮಿಕ್ ಪ್ರಿನ್ಸ್

ABOUT THE AUTHOR

...view details