ಚಾಲೆಂಜಿಂಗ್ ಸ್ಟಾರ್ ದರ್ಶನ್ ಹೊಸ ಪ್ರತಿಭೆಗಳಿಗೆ ಮೊದಲಿನಿಂದಲೂ ಬೆನ್ನು ತಟ್ಟಿ ಪ್ರೋತ್ಸಾಹಿಸುತ್ತಾ ಬಂದಿದ್ದಾರೆ. ಆಡಿಯೋ ಲಾಂಚ್ ಇರಲಿ, ಸಿನಿಮಾ ಮುಹೂರ್ತ ಇರಲಿ ಎಲ್ಲಾ ಕಾರ್ಯಕ್ರಮಗಳಿಗೂ ಬಿಡುವು ಮಾಡಿಕೊಂಡು ಹೋಗಿ ವಿಶ್ ಮಾಡಿ ಬರುತ್ತಾರೆ.
ಸ್ಯಾಂಡಲ್ವುಡ್ನಲ್ಲಿ ತನ್ನ ತಂದೆ ಸ್ಥಾನದಲ್ಲಿದ್ದ ರೆಬಲ್ ಸ್ಟಾರ್ ಅಂಬರೀಶ್ ಪುತ್ರ ಅಭಿಷೇಕ್ ಅವರಿಗೂ ದರ್ಶನ್ ಬೆಂಬಲ ದೊರೆತಿದೆ. ಪ್ರೇಮಿಗಳ ದಿನದ ವಿಶೇಷವಾಗಿ ನಾಳೆ , ಅಂದರೆ ಫೆಬ್ರವರಿ 14 ರಂದು ಅಭಿಷೇಕ್ ಮೊದಲ ಸಿನಿಮಾ 'ಅಮರ್' ಟೀಸರ್ ನಾಳೆ ಬಿಡುಗಡೆಯಾಗುತ್ತಿದೆ. ಇದೇ ಖುಷಿಯಲ್ಲಿರುವ ಅಮರ್ ಹಾಗೂ ಚಿತ್ರತಂಡಕ್ಕೆ ಗಜಪಡೆಯ ಬೆಂಬಲ ಸಿಕ್ಕಿದೆ. ಸ್ಯಾಂಡಲ್ವುಡ್ ಗಜ ಚಾಲೆಂಜಿಂಗ್ ಸ್ಟಾರ್ ದರ್ಶನ್ 'ಅಮರ್' ಚಿತ್ರಕ್ಕೆ ವಿಶ್ ಮಾಡಿದ್ದಾರೆ.