ಯಂಗ್ ರೆಬಲ್ಸ್ಟಾರ್ ಅಭಿಷೇಕ್ ಅಂಬರೀಶ್ಗೆ ಇಂದು ಹುಟ್ಟುಬ್ಬದ ಸಂಭ್ರಮ. ಆದರೆ ತಂದೆ ಹಾಗೂ ದೊಡ್ಡಪ್ಪನ ಅಗಲಿಕೆಯಿಂದ ಅಭಿಷೇಕ್ ಅಂಬರೀಶ್ ಈ ವರ್ಷ ಅದ್ದೂರಿಯಾಗಿ ಹುಟ್ಟುಹಬ್ಬ ಆಚರಿಸಿಕೊಂಡಿಲ್ಲ.
ಗಿಡ ನೆಡುವ ಮೂಲಕ ಹುಟ್ಟುಹಬ್ಬ ಆಚರಿಸಿದ ಅಭಿಷೇಕ್; ಮಗನಿಗೆ ಅಮ್ಮನ ಸಾಥ್
ಕಂಠೀರವ ಸ್ಟುಡಿಯೋದಲ್ಲಿ ತಂದೆ ಅಂಬರೀಶ್ ಸಮಾಧಿಗೆ ಪೂಜೆ ಸಲ್ಲಿಸಿ, ಗಿಡ ನೆಡುವ ಮೂಲಕ ಯಂಗ್ ರೆಬಲ್ ಸ್ಟಾರ್ ಅಭಿಷೇಕ್ ಇಂದು ತಮ್ಮ ಹುಟ್ಟುಹಬ್ಬವನ್ನು ಸರಳವಾಗಿ ಆಚರಿಸಿಕೊಂಡಿದ್ದಾರೆ. ಅಭಿ ಹುಟ್ಟುಹಬ್ಬಕ್ಕೆ ಸ್ಯಾಂಡಲ್ವುಡ್ ಸ್ನೇಹಿತರು, ಅಭಿಮಾನಿಗಳು ಶುಭ ಕೋರಿದ್ದಾರೆ.
ಅಭಿಷೇಕ್ ಇಂದು ಗಿಡ ನೆಡುವ ಮೂಲಕ ತಮ್ಮ ಹುಟ್ಟುಹಬ್ಬವನ್ನು ವಿಶೇಷವಾಗಿ ಆಚರಿಸಿದ್ದಾರೆ. ಕಂಠೀರವ ಸ್ಟುಡಿಯೋದಲ್ಲಿರುವ ಅಂಬರೀಶ್ ಸಮಾಧಿಗೆ, ತಾಯಿ ಸುಮಲತಾ ಅಂಬರೀಶ್ ಜೊತೆ ತೆರಳಿದ ಅಭಿಷೇಕ್ ಅಮ್ಮನ ಜೊತೆ ಅಪ್ಪನ ಸ್ಮಾರಕಕ್ಕೆ ಪೂಜೆ ಮಾಡಿದರು. ನಂತರ ಅಂಬರೀಶ್ ಸಮಾಧಿ ಪಕ್ಕದಲ್ಲೇ ಅಭಿಷೇಕ್ ಅಮ್ಮನ ಜೊತೆ ಗೂಡಿ ಗಿಡ ನೆಡುವ ಮೂಲಕ ತಮ್ಮ ಹುಟ್ಟು ಹಬ್ಬವನ್ನು ಆಚರಿಸಿದ್ದಾರೆ. ಅಭಿಷೇಕ್ ಹುಟ್ಟುಹಬ್ಬಕ್ಕೆ ಚಾಲೆಂಜಿಂಗ್ ಸ್ಟಾರ್ ದರ್ಶನ್, ಸ್ನೇಹಿತ ನಿಖಿಲ್ ಕುಮಾರಸ್ವಾಮಿ, ನಿರ್ಮಾಪಕ ಸಂದೇಶ್ ನಾಗರಾಜ್, ರಾಕಿಂಗ್ ಸ್ಟಾರ್ ಯಶ್ ಸೇರಿದಂತೆ ಚಿತ್ರರಂಗದ ಗಣ್ಯರು ಶುಭ ಕೋರಿದ್ದಾರೆ. 'ನನ್ನ ಪ್ರೀತಿಯ ಅಭಿಷೇಕ್ಗೆ ಹುಟ್ಟುಹಬ್ಬದ ಹಾರ್ದಿಕ ಶುಭಾಶಯಗಳು ನಿನ್ನ ಇಷ್ಟಾರ್ಥಗಳೆಲ್ಲಾ ಈಡೇರಲಿ' ಎಂದು ದರ್ಶನ್ ಟ್ವೀಟ್ ಮಾಡಿದ್ದಾರೆ.