ಮಾದಕ ಜಾಲದ ಮೋಹಕ್ಕೆ ಬಲಿಯಾಗಿರೋ ಗಾಂಧಿ ನಗರದ ಕೆಲವು ಮಂದಿಗೆ ನಡುಕ ಶುರುವಾಗಿರೋದು ಒಂದು ಕಡೆಯಾದ್ರೆ ಇನ್ನೊಂದು ಕಡೆ ಇಡೀ ಗಾಂಧಿ ನಗರದ ಮಂದಿಯನ್ನ ಅನುಮಾನದಿಂದ ನೋಡೋ ಸನ್ನಿವೇಶ ಸೃಷ್ಟಿಯಾಗಿದೆಯಂತೆ.
ಸ್ಯಾಂಡಲ್ವುಡ್ ಯುವ ನಟನ ಮದುವೆಗೆ ಬ್ರೇಕ್ ಹಾಕ್ತಾ ಇಂದ್ರಜಿತ್ ಲಂಕೇಶ್ ಆರೋಪ? - bengaluru drugs mafia
ಚಂದನವನದಲ್ಲಿ ಕಳೆದ ಕೆಲ ದಿನಗಳಿಂದ ಸದ್ದು ಮಾಡುತ್ತಿರುವ ನಶೆಯ ಗುಂಗಿನ ಸುದ್ದಿ ಯುವ ನಟರ ವೈಯಕ್ತಿಕ ಬದುಕಿನಲ್ಲೂ ಅಲ್ಲೋಲಕಲ್ಲೋಲ ಸೃಷ್ಟಿಸಿದೆ.
ನಶೆಯ ಗುಂಗಿನ ಆರೋಪ ಈಗ ಯುವ ನಟರ ವೈಯಕ್ತಿಕ ಬದುಕಿನಲ್ಲೂ ಅಲ್ಲೋಲ ಕಲ್ಲೋಲವನ್ನುಂಟು ಮಾಡಿದೆ. ನರ್ದೇಶಕ ಇಂದ್ರಜಿತ್ ಲಂಕೇಶ್ ಮಾಡಿರುವ ಆರೋಪಕ್ಕೆ ನಮ್ಮ ಕುಟುಂಬಗಳಲ್ಲೇ ನಮ್ಮನ್ನು ಅನುಮಾನದಿಂದ ನೋಡುವ ವಾತಾವರಣ ನಿರ್ಮಾಣವಾಗಿದೆ ಎಂದು ಉಡುಂಬ ಹಾಗೂ ಗೂಳಿಹಟ್ಟಿ ಸೇರಿದಂತೆ ಕೆಲವು ಸಿನಿಮಾಗಳಲ್ಲಿ ನಟಿಸಿರೋ ನಟ ಪವನ್ ಶೌರ್ಯ ಬೇಸರ ವ್ಯಕ್ತಪಡಿಸಿದ್ದಾರೆ.
ಮುಂದಿನ ತಿಂಗಳು ಮದುವೆಗೆ ತಯಾರಿ ನಡೆದಿತ್ತು. ಮೊದಲೇ ಸಿನಿಮಾದವರೆಂದ್ರೆ ಭಯ ಬೀಳ್ತಾರೆ. ಈಗ ಹೆಣ್ಣು ಕೊಡೋಕೂ ಹಿಂದು ಮುಂದೆ ನೋಡುವಂತಾಗಿದೆ. ಹಾಗಾಗಿ ಈ ರೀತಿ ಇಡೀ ಸ್ಯಾಂಡಲ್ವುಡ್ ಮೇಲೆ ಮೂಡಿರೋ ವಾತಾವರಣ ನಮ್ಮ ವೈಯಕ್ತಿಕ ಬದುಕಿಗೂ ತೊಂದರೆ ಉಂಟು ಮಾಡಿದೆ. ಹಾಗಾಗಿ ಯಾರಿದ್ದಾರೋ ಅವರಿಗೆ ಶಿಕ್ಷೆ ಆಗಲಿ. ತನಿಖೆ ಆಗಲಿ. ಅದನ್ನು ಬಿಟ್ಟು ಯುವ ಸಮುದಾಯ, ಹೊಸ ನಟ, ನಟಿಯರು ಅಂತ ಹೇಳಿರೋದು ನನಗೆ ಬೇಸರ ಮೂಡಿಸಿದೆ ಎಂದಿದ್ದಾರೆ.