ಕರ್ನಾಟಕ

karnataka

ಕೆಜಿಎಫ್ ಚಾಪ್ಟರ್ -2  ಆರಂಭಕ್ಕೂ ಮೊದಲೇ ಶುರುವಾಯ್ತು ರಾಕಿಭಾಯ್ ಹವಾ

By

Published : May 12, 2019, 9:48 AM IST

ಯಶ್ ಅಭಿಮಾನಿಗಳು ಕೆಜಿಎಫ್ ಲುಕ್​ನಲ್ಲಿ ಗನ್ ಹಿಡಿದು ನಿಂತಿರುವ ಯಶ್ ಪುತ್ಥಳಿ ತಯಾರಿಸಿದ್ದು, ಅದರ ಮೇಲೆ ಕೆಜಿಎಫ್ -2 Monster is Back ಅಂತಾ ಬರೆಯಲಾಗಿದೆ.

ಕೆಜಿಎಫ್ ಚಾಪ್ಟರ್ -2

ರಾಕಿಂಗ್​ ಸ್ಟಾರ್​ ಯಶ್​ ಅಭಿನಯದ ಕೆಜಿಎಫ್​ ಸಿನಿಮಾ ಕೇವಲ ಸ್ಯಾಂಡಲ್​ವುಡ್​ನಲ್ಲಿ ಮಾತ್ರವಲ್ಲದೆ ದೇಶ ಹಾಗೂ ವಿದೇಶದಲ್ಲಿ ತನ್ನ ದರ್ಬಾರ್​ ನಡೆಸಿತ್ತು.
ಪ್ರಶಾಂತ್​ ನೀಲ್​ ನಿರ್ದೇಶನದ ಈ ಮೂವಿ ಕನ್ನಡ ಚಿತ್ರರಂಗವನ್ನು ವಿಶ್ವ ಮಟ್ಟದಲ್ಲಿ ಪರಿಚಯ ಮಾಡಿತ್ತು.

ಇನ್ನು ಕೆಜಿಎಫ್ ಚಾಪ್ಟರ್ -2 ಆರಂಭಕ್ಕೂ ಮೊದಲೇ ರಾಕಿಭಾಯ್ ಹವಾ ಶುರುವಾಗಿದೆ. ಇದೀಗ ರಾಕಿ ಭಾಯ್​ ಸದ್ದು ಜೋರಾಗಿದ್ದು, ಯಶ್ ಅಭಿಮಾನಿಗಳು ಕೆಜಿಎಫ್ ಲುಕ್​ನಲ್ಲಿ ಗನ್ ಹಿಡಿದು ನಿಂತಿರುವ ಯಶ್ ಪುತ್ಥಳಿ ತಯಾರಿಸಿದ್ದಾರೆ.
ಇನ್ನೂ ರಾಕಿ ಭಾಯ್ ಗನ್ ಹಿಡಿದಿರೋ ಪುತ್ತಳಿಯಲ್ಲಿ ಕೆಜಿಎಫ್ - 2 Monster is Back ಅಂತಾ ಬರೆಯಲಾಗಿದೆ.
ಇನ್ನು ಕೆಜಿಎಫ್ ಚಾಪ್ಟರ್​ 2 ಚಿತ್ರ ಶೂಟಿಂಗ್​ಗೂ ಮೊದಲೇ ಹವಾ ಕ್ರಿಯೇಟ್ ಮಾಡ್ತಿದ್ದು, ರೀಲಿಸ್ ಆದ ಮೇಲೆ ಭಾರತೀಯ ಚಿತ್ರರಂಗದ ಅಧಿಪತಿಯಾಗೋದು ಗ್ಯಾರಂಟಿ ಅಂತಿದ್ದಾರೆ ಗಾಂಧಿನಗರ ಪಂಡಿತರು.

ABOUT THE AUTHOR

...view details