ಕರ್ನಾಟಕ

karnataka

ETV Bharat / sitara

ಸ್ಟೈಲ್, ಪರ್ಸನಾಲಿಟಿ ಬಗ್ಗೆ ಕೇಳಿದವರಿಗೆ ರಾಕಿ ಬಾಯ್ ಕೊಟ್ಟ ಉತ್ತರವೇನು?

ರಾಕಿಂಗ್ ಸ್ಟಾರ್ ಯಶ್ ಅವರ ಸ್ಟೈಲ್ ಹಾಗು ಪರ್ಸನಾಲಿಟಿ ಬಗ್ಗೆ ಸಾವಿರಾರು ಅಭಿಮಾನಿಗಳು ಪ್ರಶ್ನೆ ಕೇಳಿದ್ರಂತೆ. ಆ ಎಲ್ಲ ಪ್ರಶ್ನೆಗಳಿಗೆ ಯಶ್ ಇದೀಗ ಉತ್ತರಿಸಿದ್ದಾರೆ.

yash
ರಾಕಿಂಗ್ ಸ್ಟಾರ್ ಯಶ್

By

Published : Nov 27, 2019, 3:39 AM IST

Updated : Nov 27, 2019, 10:36 AM IST

ರಾಕಿಂಗ್ ಸ್ಟಾರ್ ಯಶ್ ಕೆಜಿಎಫ್ ಸಿನಿಮಾ ಮೂಲಕ ಪ್ರಪಂಚಾದ್ಯಂತ ಅಭಿಮಾನಿಗಳ‌ ಪ್ರೀತಿಗಳಿಸಿರುವ ನಟ. 2019 ಸೈಮಾ ಆವಾರ್ಡ್​ನಲ್ಲಿ ಸ್ಟೈಲ್ ಐಕಾನ್‌ ಆವಾರ್ಡ್ ಪಡೆದಿರುವ ರಾಕಿ ಬಾಯ್ ತಮ್ಮ ಸ್ಟೈಲ್ ಬಗೆಗಿನ ಸೀಕ್ರೆಟ್ ಬಿಚ್ಚಿಟ್ಟಿದ್ದಾರೆ.

ಒಳ್ಳೆ ಹೈಟ್, ಹೈಟ್​ಗೆ ತಕ್ಕಂತೆ ಇರುವ ಉದ್ದವಾದ ತಲೆ ಕೂದಲು, ಶಿವಾಜಿ ತರಹದ ಗಡ್ಡ ಮತ್ತಷ್ಟು ಅಟ್ರಾಕ್ಟಿವ್ ಆಗಿದೆ. ಸಹಜವಾಗಿ ಯಶ್ ಆವಾರ್ಡ್ ಕಾರ್ಯಕ್ರಮ, ಸಿನಿಮಾ ಪ್ರಮೋಷನ್, ಖಾಸಗಿ ಕಾರ್ಯಕ್ರಮಗಳಲ್ಲಿ ಭಾಗವಹಿಸುತ್ತಾರೆ. ಆದ್ರೆ ಈ ಎಲ್ಲಾ ಕಾರ್ಯಕ್ರಮಗಳಲ್ಲಿ ಅಟ್ರಾಕ್ಟ್ ಮಾಡೋದು ತನ್ನ ಫಿಟ್ನೆಸ್​ಗೆ ತಕ್ಕಂತೆ ಯಶ್ ಧರಿಸುವ ಕಾಸ್ಟ್ಯೂಮ್ ಅವರ ಸ್ಟೈಲನ್ನು ಹೆಚ್ಚುಸುತ್ತೆ.

ಸ್ಟೈಲಿಶ್ ಕಾಸ್ಟ್ಯೂಮ್​ನಲ್ಲಿ ರಾಕಿಂಗ್ ಸ್ಟಾರ್

ಇನ್ನು ಈ ವರ್ಷದ ಸೈಮಾ ಅವಾರ್ಡ್​ನಲ್ಲಿ, ಯಶ್ ಸ್ಟೈಲ್ ಐಕಾನ್ ಪ್ರಶಸ್ತಿಯನ್ನು ಪಡೆದಿದ್ರು. ಆ ಟೈಮಲ್ಲಿ ಯಶ್ ಪತ್ನಿ ರಾಧಿಕಾ ಪಂಡಿತ್ ಯಶ್ ಬಗ್ಗೆ ಒಂದು ಸ್ಟೇಟ್​ಮೆಂಟ್ ಕೊಟ್ಟಿದ್ರು. ಸ್ಟೈಲ್ ಎನ್ನುವುದು ಮಾತನಾಡದೆ ನಾವು ಏನು ಎನ್ನುವುದನ್ನು ಹೇಳುವುದಾಗಿದೆ ಅಂತಾ ರಾಧಿಕಾ ಪಂಡಿತ್ ಹೇಳಿದ್ರು. ಯಶ್ ಸ್ಟೈಲ್ ಹಿಂದೆ, ಕಾಸ್ಟೂಮ್ ಡಿಸೈನರ್ ಸಾನಿಯಾ ಸರ್ದಾರಿಯ ಅವ್ರ ಪರಿಶ್ರಮ ಇದೆ ಅಂತಾ ಹೇಳಿದ್ರು.

ಯಶ್ ಸ್ಟೈಲ್ ಹೆಚ್ಚುಸುವ ಅವರ ಕಾಸ್ಟ್ಯೂಮ್

ಈಗ ರಾಕಿಂಗ್ ಸ್ಟಾರ್ ಯಶ್ ಅವರ ಸ್ಟೈಲ್ ಹಾಗು ಪರ್ಸನಾಲಿಟಿ ಬಗ್ಗೆ ಸಾವಿರಾರು ಅಭಿಮಾನಿಗಳು ಪ್ರಶ್ನೆ ಕೇಳಿದ್ರಂತೆ. ಈ ಪ್ರಶ್ನೆಗೆ ಯಶ್ ಸ್ಟೈಲಿಷ್ ಆಗಿರುವ ನಾಲ್ಕೈದು ಕಾಸ್ಟ್ಯೂಮ್​ನಲ್ಲಿ ಕಾಣಿಸಿಕೊಂಡಿರುವ ಫೋಟೋವನ್ನ ಹಾಕಿ ನನ್ನ ಸ್ಟೈಲ್ ಹಿಂದಿರುವ ಕ್ರೆಡಿಟ್ ಕಾಸ್ಟೂಮ್ ಡಿಸೈನರ್ ಸಾನಿಯಾ ಸರ್ದಾರಿಯ ಅಂತಾ ಸೋಷಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ.

Last Updated : Nov 27, 2019, 10:36 AM IST

ABOUT THE AUTHOR

...view details